ಅಭಿಷೇಕ್ ಶರ್ಮಾ.. ಸದ್ಯ ವಿಶ್ವ ಟಿ-೨೦ ಕ್ರಿಕೆಟ್‌ನ ಫಿಯರ್‌ಲೆಸ್ ಬ್ಯಾಟರ್. ಆಕ್ರಮಣಕಾರಿ ಬ್ಯಾಟಿಂಗ್ ಮೂಲಕವೇ ಸದ್ದು ಮಾಡುತ್ತಿರುವ ಅಭಿಷೇಕ್ ಶರ್ಮಾ ವಿಶ್ವ ಟಿ-೨೦ಯ ನಂಬರ್ ವನ್ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಚುಟುಕು ಕ್ರಿಕೆಟ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಪಕ್ಕಾ ಶಿಷ್ಯ. ಮೈದಾನದಲ್ಲಿ ಗುರುವಿನಂತೆ ಅಬ್ಬರಿಸುತ್ತಿರುವ ಶರ್ಮಾ ಭವಿಷ್ಯದ ಟೀಮ್ ಇಂಡಿಯಾದ ಆಟಗಾರ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ.
ಏಷ್ಯಾಕಪ್ ಟಿ-೨೦ ಟೂರ್ನಿಯಲ್ಲಿ ಸಾಕಷ್ಟು ಸದ್ದು ಮಾಡಿರುವ ಅಭಿಷೇಕ್ ಶರ್ಮಾ ಇತ್ತೀಚಿಗೆ ಆಸೀಸ್ ನೆಲದಲ್ಲೂ ತನ್ನ ಬ್ಯಾಟಿಂಗ್ ಪರಾಕ್ರಮವನ್ನು ವಿಶ್ವ ಕ್ರಿಕೆಟ್‌ಗೆ ಪರಿಚಯಿಸಿದ್ದಾರೆ.
ಮೈದಾನದಲ್ಲಿ ಆಕ್ರಮಣಕಾರಿ ಪ್ರವೃತ್ತಿ ತೋರಿಸುವ ಅಭಿಷೇಕ್, ಮೈದಾನದ ಹೊರಗಡೆ ಅಷ್ಟೇ ಕೂಲ್ ಆಗಿಯೂ ಕಾಣಿಸುತ್ತಾರೆ.
ಅತ್ಯುತ್ತಮ ಫಾರ್ಮ್ನಲ್ಲಿರುವ ಅಭಿಷೇಕ್ ಶರ್ಮಾ ಸದ್ಯ ಬಿಡುವಾಗಿದ್ದಾರೆ. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಟಿ-೨೦ ಸರಣಿಗೆ ತಯಾರಿ ಕೂಡ ನಡೆಸುತ್ತಿದ್ದಾರೆ.
ಇದರ ಬೆನ್ನಲ್ಲೇ ಅಭಿಷೇಕ್ ಶರ್ಮಾ ಸಾಮಾಜಿಕ ಜಾಲ ತಾಣದಲ್ಲಿ ಗಮನ ಸೆಳೆದಿದ್ದಾರೆ. ಮೈದಾನದಲ್ಲಿ ಯಾವುದು ಅಸಾಧ್ಯವೋ ಅದು ಸಾಧ್ಯ ಎಂಬುದನ್ನು ನಿರೂಪಿಸಿರುವ ಶರ್ಮಾ ಈಗ ತಮ್ಮ ಟ್ಯಾಟ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಇದು ಸಂಭವಿಸುತ್ತದೆ ಎಂಬ ಟ್ಯಾಟ್ ಹಾಕಿಸಿಕೊಂಡಿರುವ ಶರ್ಮಾ, ಕ್ರೀಸ್‌ನಲ್ಲಿ ನಿರ್ಭೀತ ಮತ್ತು ಧೈರ್ಯಶಾಲಿ ಮನೋಭಾವನೆಯನ್ನು ಕೂಡ ಪ್ರತಿಬಿಂಬಿಸುತ್ತದೆ.
ಒಟ್ಟಿನಲ್ಲಿ ಅಭಿಷೇಕ್ ಶರ್ಮಾ ಸದ್ಯ ಟಿ-೨೦ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿದ್ದಾರೆ. ಬಹುಶಃ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದ್ರೂ ಅಚ್ಚರಿಪಡಬೇಕಿಲ್ಲ.
ಕೈಜಾರಿದ ಕ್ಯಾಚ್, ಕೈಕೊಟ್ಟ ಮ್ಯಾಚ್! ಜೈಸ್ವಾಲ್ ಎಡವಟ್ಟು, ಭಾರತಕ್ಕೆ ಸೋಲಿನ ಪೆಟ್ಟು
ರಾಯ್‌ಪುರ: ಕ್ರಿಕೆಟ್ ಜಗತ್ತಿನಲ್ಲಿ ಒಂದು ಮಾತಿದೆ, ಕ್ಯಾಚ್ ಡ್ರಾಪ್ ಆದರೆ ಮ್ಯಾಚ್ ಡ್ರಾಪ್ ಎಂದು. ರಾಯ್‌ಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಈ...








