ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪಂಚಮಸಾಲಿ ಸಮಾಜದ ಹಿತಾಸಕ್ತಿಗೆ ಮೊದಲ ಆದ್ಯತೆ  : ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ

admin by admin
February 22, 2021
in Newsbeat, State, ರಾಜ್ಯ
Jagadguru Shri Vachananda Swamiji
Share on FacebookShare on TwitterShare on WhatsappShare on Telegram

ಪಂಚಮಸಾಲಿ ಸಮಾಜದ ಹಿತಾಸಕ್ತಿಗೆ ಮೊದಲ ಆದ್ಯತೆ  : ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ

ಬೆಂಗಳೂರು : ಮೊದಲಿನಿಂದಲೂ ರಾಜ್ಯದ ಎಂಬತ್ನಾಲ್ಕು ಲಕ್ಷ ಕ್ಕಿಂತ ಅಧಿಕವಿರುವ ಪಂಚಮಸಾಲಿ ಅಮೃತಬಂಧುಗಳ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ನಮ್ಮ ನಿಲುವಾಗಿದೆ. ಒಬ್ಬ ವ್ಯಕ್ತಿ ಅಥವಾ ಜನನಾಯಕರ ಹಿತಾಸಕ್ತಿಗೆ ಸೊಪ್ಪು ಹಾಕುವ ಅವಶ್ಯಕತೆ ಇಲ್ಲ. ಯಾರದೋ ತೇಜೋವಧೆಯಿಂದ ಯಾರು ಏನು ಸಾಧಿಸಲು ಸಾಧ್ಯವಿಲ್ಲ.ತೇಜಸ್ಸು ಮತ್ತು ವರ್ಚಸ್ಸುಗಳಿಂದ ಮಾತ್ರ ಸಾಧನೆ ಸಾಧ್ಯವಿದೆ. ಹೋರಾಟದಲ್ಲಿ ರಾಜಕಾರಣ ಬಂದಾಗ ನಾವು ಹಿಂದೆ ಸರಿಯುತ್ತೇವೆ, ಸಮುದಾಯದ ವಿಷಯ ಬಂದಾಗ ನಾವು ಮುಂಚೂಣಿಯಲ್ಲಿರುತ್ತೇವೆ ಎಂದು ಹರಿಹರ ಪಂಚಮಸಾಲಿ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಹೇಳಿದ್ದಾರೆ.

Related posts

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

March 20, 2026
ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

March 20, 2026

ನಿನ್ನೆಯ ಘಟನಾವಳಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಾವು ಯಾರೋ ಒಬ್ಬರು ಹೇಳಿದ ಹಾಗೆ ಕೇಳುವುದಿಲ್ಲ. ಅಖಂಡ ಪಂಚಮಸಾಲಿ ಸಮುದಾಯ ಹೇಳಿದ ಹಾಗೆ ಕೇಳುತ್ತೇವೆ.

ನಮ್ಮ ಎಲ್ಲ ನಿರ್ಧಾರಗಳು ನಮ್ಮ ಸಮುದಾಯದ ಅಮೃತಬಂಧುಗಳಾದ ಅಖಂಡ ಪಂಚಮಸಾಲಿಗಳ ಒಕ್ಕೊರಲಿನ ನಿರ್ಧಾರವಾಗಿರಬೇಕು. ಯಾವುದೋ ಹಿತಾಸಕ್ತಿಯನ್ನು ಪೂರೈಸಿಕೊಳ್ಳುವುದಕ್ಕಾಗಿ ಸಮುದಾಯವನ್ನು ಬಲಿಕೊಡುವಂತಹದ್ದಾಗಿರಬಾರದು. 1994 ರಿಂದ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಪ್ರಥಮ ರಾಜ್ಯಾಧ್ಯಕ್ಷರಾದ ಡಾ.ಶ್ರೀ ಬಿ.ಎಂ.ಹನುಮನಾಳ ಗುರುಗಳವರು ಆರಂಭದಿಂದಲೂ ಇಂದಿನವರೆಗೂ ಸಂಘದ ಹಿರಿಯರು ಮತ್ತು ನಾವು ಸಮುದಾಯಕ್ಕೆ 2ಎ ಸ್ಥಾನಮಾನ ನೀಡಬೇಕು ಎನ್ನುವ ಒತ್ತಾಯ ಮಾಡುತ್ತಾ ಬಂದ್ದಿದ್ದೇವೆ. ಈ ನಿರ್ಧಾರದ ಹಿಂದೆ ಅಖಂಡ ಪಂಚಮಸಾಲಿ ಸಮುದಾಯದ ಮುಖಂಡರು, ಭಕ್ತರು ಹಾಗೂ ಸಮಾನಮನಸ್ಕರ ಸಲಹೆಗಳನ್ನು ತಗೆದುಕೊಂಡಿದ್ದೇವೆ.

ಪಾದಯಾತ್ರೆಯ ನಂತರ ಧರಣಿ ಅಥವಾ ಸತ್ಯಾಗ್ರಹದಂತಹ ಹೋರಾಟಕ್ಕೆ ಮುಂದಾಗುವುದು ಸರಿಯಲ್ಲ. ಅದರಲ್ಲೂ ಸಾರ್ವಜನಿಕರ ಹಿತಾಸಕ್ತಿಗೆ, ಆಸ್ತಿಗೆ ಹಾನಿ ತರುವಂತಹ ಘಟನೆಗಳಿಗೆ ಅವಕಾಶ ಮಾಡಿಕೊಡುವ ವಿಷಯಗಳಿಗೆ ಆಸ್ಪದ ನೀಡಬಾರದ ಎನ್ನುವ ನಿಲುವು ನಮ್ಮದಾಗಿತ್ತು. ಲಕ್ಷಾಂತರ ಜನರು ಒಗ್ಗೂಡಿದ್ದಾಗ ಜನರ ಭಾವನೆಗಳನ್ನು ಕೆರಳಿಸದೆ ಸಮಾಧಾನವಾಗಿ ಸರಕಾರದ ಮೂಗನ್ನು ಹಿಡಿದು ಕೆಲಸ ಮಾಡಿಸುವ ನಿಟ್ಟಿನಲ್ಲಿ ಸಲಹೆಯನ್ನು ನೀಡಿದ್ದೇವೆ.

ಆದರೆ,ನಿನ್ನೆ ಸಮಾವೇಶ ನಡೆದ ನಂತರ ನಡೆದ ಘಟನೆಗಳು ಹೇಳಿಕೆಗಳು ಜನನಾಯಕರ ಹಿತಾಸಕ್ತಿಗೆ ಇಂಬು ನೀಡುವಂತಹದ್ದಾಗಿದ್ದವು. ಆದ್ದರಿಂದ ಆ ನಿರ್ಧಾರಗಳಿಗೆ ನಾವು ಬೆಂಬಲ ನೀಡಲಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಬೆಳಗಿನ ಪಾದಯಾತ್ರೆಯನ್ನು ರದ್ದುಗೊಳಿಸಿದ್ದೆವು. ನಗರದ ಒಳಗೆ ಪಾದಯಾತ್ರೆ ಮಾಡುವ ಸಂಧರ್ಭದಲ್ಲಿ ಯಾರೋ ಕಿಡಿಗೇಡಿಗಳು ನಮ್ಮ ಹೋರಾಟವನ್ನು ಹಾಳು ಮಾಡುವ ಉದ್ದೇಶದಿಂದ ಗಲಾಟೆ ಪ್ರಾರಂಭಿಸಿದ್ದರೆ, ನಮ್ಮ ಸಮುದಾಯದ ಮೇಲೆ ಕಪ್ಪು ಚುಕ್ಕೆ ಬೀಳುವ ಅವಕಾಶ ಇರುತ್ತಿತ್ತು. ಆ ಹಿನ್ನಲೆಯಲ್ಲಿ ವಿಧಾನಸೌದದ ಕಡೆಗೆ ಪಾದಯಾತ್ರೆಯಂತಹ ನಿರ್ಧಾರಗಳಿಗೆ ಬೆಂಬಲ ನೀಡಲಿಲ್ಲ.

Jagadguru Shri Vachananda Swamiji

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಇದೆ. ಹಿಂದಿನ ರಾತ್ರಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ನಾಗನಗೌಡರು ಹಾಗೂ ಹಿರಿಯರೊಂದಿಗೆ ಸಭೆಯನ್ನು ಮಾಡಿದ್ದೇವು. ಆ ಸಭೆಯಲ್ಲಿ ಧರಣಿ ಅಥವಾ ಸತ್ಯಾಗ್ರಹದಂತಹ ನಿರ್ಧಾರಗಳಿಗೆ ಹೋಗಬಾರದು, ಒಂದು ತಾರ್ಕಿಕ ಅಂತ್ಯಕ್ಕೆ ಬರಬೇಕು ಎನ್ನುವ ನಿರ್ಧಾರ ತಗೆದುಕೊಳ್ಳಲಾಗಿತ್ತು. ಅವರ ಸಲಹೆಯನ್ನು ನಾವು ಪಾಲಿಸಿದ್ದು, ಸಮುದಾಯದ ಭಾವನೆಗಳಿಗೆ ಒತ್ತಾಸೆಯಾಗಿದ್ದೇವೆ.

ಸಮುದಾಯಕ್ಕೆ ಹಾಗೂ ಸಮುದಾಯದ ನಿರ್ಧಾರಗಳಿಗೆ ನಾನು ಪ್ರಾಣ ನೀಡಲು ಸಿದ್ದನಾಗಿದ್ದೇನೆ. ಸಮುದಾಯಕ್ಕೆ ಏನು ಬೇಕು ಅದನ್ನು ಮಾಡುತ್ತೇನೆ. ಸಮುದಾಯದ ಜನರು ಸೇರಿಕೊಂಡು ಮುಂದಿನ ಹೋರಾಟಕ್ಕೆ ಅಣಿಯಾಗೋಣ. ಸರಕಾರ ನಮಗೆ ಭರವಸೆ ನೀಡಿದೆ, ಸರಕಾರ ಕಾರ್ಯನಿರ್ವಹಣೆಗೆ ಅದರದ್ದೇ ಆದಂತಹ ಸಮಯ ಬೇಕು. ಸರಕಾರಕ್ಕೇ ನೇರವಾಗಿ ಕಿವಿ ಹಿಂಡಿ, ಮೂಗು ಹಿಡಿದು ಕೆಲಸ ಮಾಡಿಸಬೇಕು. ಯಾರದ್ದೋ ಕಾಲು ಹಿಡಿಯುವುದು ಬೇಕಾಗಿಲ್ಲ. ಸಮುದಾಯದ ಹೋರಾಟದಲ್ಲಿ ನಾವು ಪ್ರಾಣವಾಯು ನೀಡುವ ಕೆಲಸ ಮಾಡಿದ್ದೇವೆ.

ಆದರೆ, ಮೂಗು ಹಿಡಿಯುವ ಭರಾಟೆಯಲ್ಲಿ ಯಾರದ್ದೋ ಪ್ರಾಣ ತಗೆಯುವುದಿಲ್ಲ.ಸರಕಾರವನ್ನು ನಿತ್ರಾಣಗೊಳಿಸುವುದಿಲ್ಲ. ನಾವು ಸಮುದಾಯಕ್ಕೆ ಪ್ರಾಣ ಕೂಡಾ ನೀಡಲು ಸಿದ್ದರಾಗಿದ್ದೇವೆ.

ಸಮುದಾಯದ ಹಿತಾಸಕ್ತಿ ನನ್ನ ಮೊದಲ ಆಯ್ಕೆ. ಜನನಾಯಕರ ಹಿತಾಸಕ್ತಿಗೆ ನಾವು ಸೊಪ್ಪು ಹಾಕುವ ಅವಶ್ಯಕತೆ ಇಲ್ಲ. ಸಮಾಜದ ವಿಷಯ ಬಂದಾಗ ಜನನಾಯಕ ಜನರ ಒಂದು ಭಾಗ ಮಾತ್ರ. ಹೋರಾಟಕ್ಕೆ ಕೈಜೋಡಿಸಿದಾಗ ನನ್ನ ನಿಲುವು ಸ್ಪಷ್ಟವಾಗಿದ್ದು, ಸಮಾಜದ ನಿರ್ಧಾರಕ್ಕೆ ಬಂದಾಗ ಬೇರೆ ಯಾರ ಮಾತು ಕೇಳಿಲ್ಲ.

ಬೆಣ್ಣೆ ಸರಕಾರದ ಕೈಯಲ್ಲಿ ಇದೆ. ಅದು ನಮ್ಮ ಕೈಯಲ್ಲಿ ಬಂದು ನಮ್ಮ ಆಹಾರ ಆಗಬೇಕು. ಅದನ್ನು ಹಾಳು ಮಾಡುವುದು ಸರಿಯಲ್ಲ. ನಮ್ಮ ಸಮುದಾಯದ ಯುವಕರಿಗೆ ಮೀಸಲಾತಿಯ ಮೂಲಕ ಶೈಕ್ಷಣಿಕ ಹಾಗೂ ಉದ್ಯೋಗ ಅವಕಾಶ ಒದಗಿಸುವುದು ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬಸವಣ್ಣನವರ ವಚನ ಬಹಳ ಅರ್ಥಗರ್ಭಿತವಾಗಿದೆ

ಭೇರುಂಡನ ಪಕ್ಷಿಗೆ ದೇಹ ಒಂದೆ,
ತಲೆಯೆರಡರ ನಡುವೆ ಕನ್ನಡವ ಕಟ್ಟಿ
ಒಂದು ತಲೆಯಲ್ಲಿ ಹಾಲನೆರೆದು
ಒಂದು ತಲೆಯಲ್ಲಿ ವಿಷವನೆರೆದಡೆ
ದೇಹವೊಂದೇ, ವಿಷ ಬಿಡುವುದೇ ಅಯ್ಯಾ
ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ
ನಾನು ಬೆಂದೆ ಕಾಣಾ, ಕೂಡಲಸಂಗಮದೇವಾ.

Tags: bangaloreJagadguru Shri Vachananda Swamijipanchamasali
ShareTweetSendShare
Join us on:

Related Posts

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

by Shwetha
March 20, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಚರ್ಚೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ...

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

by Shwetha
March 20, 2026
0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ನೇರ ಕಾದಾಟವು ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು,...

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

by Shwetha
March 20, 2026
0

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದ ಲಕ್ಷಾಂತರ ಭಕ್ತರ ಆರಾಧ್ಯ ದೈವ, ಪವಾಡ ಪುರುಷ ಸಂತ ಬಾಳು ಮಾಮಾ ಅವರ ಭವಿಷ್ಯವಾಣಿಯೊಂದು ಇದೀಗ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಕುರಿ...

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

by Shwetha
March 20, 2026
0

ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡಿ, ಡೆಲಿವರಿ ಬಾಯ್ ಬರುವವರೆಗೆ ಕಾಯುವ ದಿನಗಳಿಗೆ ಇನ್ನೇನು ಕಾಲ ಕೂಡಿದೆ. ದೇಶದ ಇಂಧನ ಕ್ಷೇತ್ರದ ದೈತ್ಯ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ...

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

by Shwetha
March 20, 2026
0

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಸಿನಿಮಾ ಧುರಂಧರ್: ದಿ ರಿವೆಂಜ್ ಅಂತಿಮವಾಗಿ ಬೆಳ್ಳಿತೆರೆಗೆ ಅಪ್ಪಳಿಸಿದೆ. ಸಿನಿಮಾ ಪ್ರೇಮಿಗಳ ದೀರ್ಘಕಾಲದ ಕಾಯುವಿಕೆಗೆ ಮಾರ್ಚ್ 19...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram