ತಿರುಪತಿ: ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾಗಿರುವ ವಿಚಾರ ಆಂಧ್ರದಲ್ಲಿ ದೊಡ್ಡ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿರೋಧದ ಮಧ್ಯೆಯೂ ಮಾಜಿ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ (Jagan Mohan Reddy) ತಿರುಪತಿ ಭೇಟಿಯನ್ನು ರದ್ದು ಮಾಡಿದ್ದಾರೆ.
ದೇವರ ದರ್ಶನಕ್ಕೆ ಹೋಗಿದ್ದರೆ ನೋಟಿಸ್ ಕೊಟ್ಟು ಅಡ್ಡಿ ಮಾಡುತ್ತಿದ್ದರು ಎಂದು ಚಂದ್ರಬಾಹು ನಾಯ್ಡು ಸರ್ಕಾರದ ವಿರುದ್ಧ ಜಗನ್ ಆರೋಪಿಸಿದ್ದಾರೆ. ದೇವರ ದರ್ಶನಕ್ಕೆ ಹೋಗುತ್ತಿದ್ದಾಗ ಅಡ್ಡಿ ಪಡಿಸುತ್ತಿರುವುದು ದೇಶದಲ್ಲೇ ಇದೇ ಮೊದಲ ಕೇಸ್. ಹೀಗಾಗಿ ಆಂಧ್ರದಲ್ಲಿ ರಾಕ್ಷಸ ಸರ್ಕಾರವಿದೆ ಎಂದು ಭಾಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಡ್ಡು ವಿವಾದವನ್ನು (Tirupati Laddu Controversy) ಮರೆಮಾಚಲು ಡಿಕ್ಲರೇಷನ್ ವಿಚಾರ ದೊಡ್ಡದು ಮಾಡಿದ್ದಾರೆ. ನಾಲ್ಕು ಗೋಡೆ ಮಧ್ಯೆ ಬೈಬಲ್ ಓದುತ್ತೇನೆ. ಹೊರಗೆ ಹೋದರೆ ಎಲ್ಲಾ ಧರ್ಮ ಗೌರವಿಸ್ತೇನೆ. ಹಿಂದೂ ಆಚರಣೆ ಮಾಡುತ್ತೇನೆ ಎಂದಿದ್ದಾರೆ. ಧರ್ಮದ ಹೆಸರಲ್ಲಿ ಕೀಳು ರಾಜಕೀಯ ನಡೀತಿದೆ ಎಂದು ಜಗನ್ ಕಿಡಿಕಾರಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಜನರು ಸಂಪ್ರದಾಯಗಳನ್ನು ಅನುಸರಿಸಬೇಕು ಮತ್ತು ಏನು ಮಾಡಬೇಕೋ ಅದನ್ನು ಮಾಡಲೇಬೇಕು. ಪೂಜಾ ಸ್ಥಳಕ್ಕೆ ಭೇಟಿ ನೀಡಬೇಕಾದರೆ, ಸಂಪ್ರದಾಯಗಳನ್ನು ಗೌರವಿಸಬೇಕು. ಅಲ್ಲಿನ ನಂಬಿಕೆಗಿಂತ ಯಾರೂ ದೊಡ್ಡವರಲ್ಲ ಎಂದು ಗುಡುಗಿದ್ದಾರೆ.