ಶಿವರಾಜ್ ಕುಮಾರ್ ಅಭಿನಯದ ಸೂಪರ್ ಡೂಪರ್ ಹಿಟ್ ಸಿನೆಮಾ ಜೋಗಿ ತೆರೆಕಂಡು ಇಂದಿಗೆ 15 ವರ್ಷ ಕಂಪ್ಲೀಟ್ ಆಗಿದೆ. ಪ್ರೇಮ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದ ತಾಯಿ ಸೆಂಟಿಮೆಂಟ್ ಹೊಂದಿದ್ದ ಈ ಸಿನೆಮಾ ತೆರೆಕಂಡು 15 ವರ್ಷಗಳೇ ಕಳೆದ್ರೂ ಚಿತ್ರದ ಕ್ರೇಜ್ ಮಾತ್ರ ಈಗಲೂ ಹಾಗೆಯೇ ಉಳಿದಿದೆ. ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಜೋಗಿ ಬಿಡುಗಡೆಗೊಂಡಾಗ ಎಲ್ಲಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿತ್ತು.
ಈ ಚಿತ್ರ ಚಂದನವನದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಯಾರ ಬಾಯಲ್ಲಿ ನೋಡಿದ್ರು ಜೋಗಿ, ಜೋಗಿ ಜೋಗಿ ಮಂತ್ರವೇ ಜಪಿಸುವಷ್ಟರ ಮಟ್ಟಿಗೆ ಜನರ ನಿದ್ದೆಗೆಡಿಸಿದ್ದ ಚಿತ್ರ ಜೋಗಿ. ಇಂದಿಗೆ ಚಿತ್ರ ತೆರೆಕಂಡು ಬರೋಬ್ಬರಿ 15 ವರ್ಷಗಳು ಪೂರ್ಣಗೊಂಡ ಹಿನ್ನೆಲೆ ಶಿವಣ್ಣನ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇದೇ ಖುಷಿಯಲ್ಲಿ ಪ್ಯಾನ್ಸ್ ಎಲ್ಲರೂ ಶಿವರಾಜ್ ಕುಮಾರ್ ಕಾಮನ್ ಡಿಪಿ ರಿಲೀಸ್ ಮಾಡಿ ಸಂಭ್ರಮಿಸುತ್ತಿದ್ದಾರೆ.
ಇನ್ನೂ ಚಿತ್ರ 15 ವರ್ಷಗಳನ್ನು ಪೂರೈಕೆ ಮಾಡಿರುವ ಖುಷಿಯಲ್ಲಿ ನಿನ್ನೆಯಷ್ಟೇ ಜೋಗಿ ಪ್ರೇಮ್ ಅವರು ೀ ಬಗ್ಗೆ ಟ್ವೀಟ್ ಮಾಡಿ ಇಂದು ಸಂಜೆ 5 ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವುದಾಗಿ ಅನೌನ್ಸ್ ಮಾಡಿದ್ದರು.