ಕರ್ನಾಟಕದಲ್ಲಿ ಸ್ಥಾಪನೆಗೊಳ್ಳಲಿದೆ ಇಂಟೆಲ್ ಕಂಪನಿಯ ಚಿಪ್ ತಯಾರಕ ಘಟಕ
ಬೆಂಗಳೂರು: ಇಂಟೆಲ್ ಕಂಪನಿಯ ಚಿಪ್ ತಯಾರಕ ಘಟಕ ಕರ್ನಾಟಕದ ಸ್ಥಾಪನೆಯಾಗಲಿದೆ
ಈ ಸಂಬಂಧ ಮಾತುಕತೆ ನಡೆಯುತ್ತಿದ್ದು, ಮಾತುಕತೆ ಫಲಪ್ರದವಾದರೆ ಮೈಸೂರಿನಲ್ಲಿ ಇಂಟೆಲ್ ಕಂಪನಿಯ ಚಿಪ್ ತಯಾರಕ ಘಟಕ ಪ್ರಾರಂಭವಾಗಲಿದೆ. ಆರಂಭದಲ್ಲಿ ಇದು ಆರಂಭದಲ್ಲಿ ಗುಜರಾತ್ನ ಧೋಲೇರಾದಲ್ಲಿ 3 ಶತಕೋಟಿ ಡಾಲರ್(23 ಸಾವಿರ ಕೋಟಿ ರೂ.) ಹೂಡಿಕೆ ಮಾಡಲು ಈ ಕಂಪನಿ ಮುಂದಾಗಿತ್ತು. ಈಗ ಮೈಸೂರಿನಲ್ಲಿ ಪ್ರಾರಂಭಿಸಲು ಮುಂದಾಗಿದೆ.
ಕಾರಣ ಮೈಸೂರಿನಲ್ಲಿ ನೀರಿನ ಲಭ್ಯತೆ ಇರುವುದರಿಂದ ಘಟಕ ತೆರೆಯುವ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸೆಮಿಕಂಡಕ್ಟರ್ ಉತ್ಪಾದನೆ ಸಂಬಂಧ ಕೇಂದ್ರ ಸರ್ಕಾರ 10 ಶತಕೋಟಿ ಡಾಲರ್ ಮೌಲ್ಯದ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಗೆ ಐಎಸ್ಎಂಸಿ ಡಿಜಿಟಲ್ ಫ್ಯಾಬ್ ಆಯ್ಕೆಯಾಗಿದೆ. ನೆಕ್ಷ್ಟ್ಆರ್ಬಿಟ್ ಮತ್ತು ಸೆಮಿಕಂಡಕ್ಟರ್ ಟೆಕ್ನಾಲಜಿ ಕಂಪನಿ ಟವರ್ ಸೆಮಿಕಂಡಕ್ಟರ್ ಕಂಪನಿ ಐಎಸ್ಎಂಸಿ ಡಿಜಿಟಲ್ ಸ್ಥಾಪಿಸಿತ್ತು. ಈ ಐಎಸ್ಎಂಸಿಯನ್ನು 5.4 ಶತಕೋಟಿ ಡಾಲರ್ ನೀಡಿ ಇಂಟೆಲ್ ಕಂಪನಿ ಇತ್ತೀಚೆಗೆ ಖರೀದಿಸಿದೆ.
ಭಾರತದ ಸರ್ಕಾರದ ಪಿಎಲ್ಐ ಅಡಿ ಐಎಸ್ಎಂಸಿ ಡಿಜಿಟಲ್ ಫ್ಯಾಬ್ ಅಲ್ಲದೇ ವೇದಾಂತ-ಫಾಕ್ಸ್ಕಾನ್ ಮತ್ತು ಸಿಂಗಾಪೂರ ಮೂಲದ ಐಜಿಎಸ್ಎಸ್ ಆಯ್ಕೆಯಾಗಿವೆ. ಚಿಪ್ ತಯಾರಿಕಾ ಘಟಕ ಸ್ಥಾಪನೆ ಸಂಬಂಧ ರಾಜ್ಯ ರಾಜ್ಯಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ಇದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದ ಸೆಮಿಕಂಡಕ್ಟರ್ ಸಲಹಾ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ಏಪ್ರಿಲ್ 29 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ Semicon ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಚಿಪ್ ಕ್ಷೇತ್ರದ ದಿಗ್ಗಜ ಕಂಪನಿಗಳು ಭಾಗಿಯಾಗಲಿದೆ.