KGF 2 | ಪುಷ್ಪ 2 ಮೇಲೆ ಕೆಜಿಎಫ್ 2 ಎಫೆಕ್ಟ್ ಇರುತ್ತಾ..?
ಸದ್ಯ ಸೌತ್ ಸಿನಿಮಾಗಳು ಇಂಡಿಯನ್ ಸಿನಿಮಾದ ಕೇರಾಫ್ ಅಡ್ರೆಸ್ ಆಗಿವೆ. ನಮ್ಮ ಸಿನಿಮಾಗಳಲ್ಲಿ ಮೇಕಿಂಗ್, ಟೇಕ್, ಆ್ಯಕ್ಟಿಂಗ್ ಗೆ ದೇಶದಾದ್ಯಂತ ಭಾಷೆಯ ತಾರತಮ್ಯವಿಲ್ಲದೇ ಬ್ರಹ್ಮರಥ ಹಿಡಿಯುತ್ತಿದ್ದಾರೆ. ಸದ್ಯ ಬಾಲಿವುಡ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ‘ಕೆಜೆಎಫ್-2’ ಮೂಲಕ ದಾಖಲೆ ನಿರ್ಮಿಸುತ್ತಿದ್ದಾರೆ.
ಹೀಗಾಗಿ ಮುಂದೆ ಬರುವ ಸಿನಿಮಾಗಳ ಮೇಲೆ ಕೆಜಿಎಫ್ ಸಿನಿಮಾದ ಎಫೆಕ್ಟ್ ಇರುತ್ತಾ ಅಂದ್ರೆ ಹೌದು ಎನ್ನುತ್ತಿದ್ದಾರೆ ಸಿನಿಮಾ ವಿಶ್ಲೇಷಕರು.
ಕೆಜಿಎಫ್ ಚಾಪ್ಟರ್ 1 ಕ್ಕೆ ಹೋಲಿಕೆ ಮಾಡಿದ್ರೆ ಚಾಪ್ಟರ್ 2 ನಲ್ಲಿ ಕಥೆಯ ಜೊತೆಗೆ ಹೀರೋ ಎಲಿವೇಷನ್ಸ್ ಬೇರೆ ರೇಂಜ್ ನಲ್ಲಿದ್ದು, ಜನರನ್ನ ಆಕರ್ಷಿಸುತ್ತಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಯಶಸ್ಸು ಇತರೆ ಚಿತ್ರಗಳ ಮೇಕರ್ಸ್ ಗೆ ಸ್ವಲ್ಪ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಮೊದಲ ಭಾಗಕ್ಕೆ ಹೋಲಿಕೆ ಮಾಡಿದ್ರೆ ಸೀಕ್ವೆಲ್ ನಲ್ಲಿ ಯಾವ ವಿಚಾರದಲ್ಲಿಯೂ ಕಡಿಮೆ ಇರಬಾರದು. ಸ್ಪಲ್ಪ ಯಾಮಾರಿದ್ರೂ ಪ್ರೇಕ್ಷಕರು ಜೀರ್ಣಿಸಿಕೊಳ್ಳುವುದಿಲ್ಲ. ಇದು ಸಿನಿಮಾದ ಫಲಿತಾಂಶದ ಮೇಲೆ ಪ್ರಭಾವ ಬೀರುವ ಅವಕಾಶಗಳಿವೆ.
ಆದರೆ, ಸೀಕ್ವೆಲ್ಗಳ ವಿಷಯದಲ್ಲಿ, ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಅವರ ‘ಪುಷ್ಪ’ದ ಎರಡನೇ ಭಾಗವು ‘ಕೆಜೆಎಫ್’ ಚಿತ್ರದಂತೆಯೇ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆದ್ರೆ ರಾಖಿಭಾಯ್ ಪಾತ್ರದ ಎಲಿವೇಷನ್ ಇರುವಂತೆ ಪುಷ್ಪ ಪಾತ್ರಕ್ಕೂ ಇರುತ್ತಾ..? ಪುಷ್ಪ ಕೆಂಪು ಚಂದನದ ಸಿಂಡಿಕೇಟ್ ಅನ್ನು ಹೇಗೆ ನಡೆಸಿದರು..? ಅನ್ನೋ ಪ್ರಶ್ನೆಗಳು ಸಿನಿಮಾ ಪ್ರಿಯರನ್ನು ಕಾಡುತ್ತಿವೆ. kgf-2-effect-allu-arjun-pushpa-2