ವಿಕ್ರಾಂತ್ ರೋಣ ಬಳಿಕ ಕಿಚ್ಚನ ಸಿನಿಮಾ ಯಾವ್ದು..?
ವಿಕ್ರಾಂತ್ ರೋಣ ಸಿನಿಮಾ ಬಳಿಕ ಸ್ಯಾಂಡಲ್ ವುಡ್ ನ ಬಾದ್ ಶಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು..?
ಸುದೀಪ್ ನೆಕ್ಸ್ಟ್ ಯಾವ ನಿರ್ದೇಶಕರೊಂದಿಗೆ ಸಿನಿಮಾ ಮಾಡಲಿದ್ದಾರೆ..? ಅನ್ನೋ ಪ್ರಶ್ನೆಗಳಿಗೆ ಶುಕ್ರವಾರ ಬೆಳ್ಳಂ ಬೆಳಿಗ್ಗೆ ಉತ್ತರ ಸಿಕ್ಕಿದೆ.
ಸುದೀಪ್ ಅವರು ತಮ್ಮ ಮುಂದಿನ ಸಿನಿಮಾವನ್ನು ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಬಂಡಾರಿ ಅವರೊಂದಿಗೆ ಮಾಡಲಿದ್ದಾರೆ.
ಹೌದು..! ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಸದ್ಯ ವಿಕ್ರಾಂತ್ ರೋಣ ಸಿನಿಮಾದ ಕೆಲಸಗಳಲ್ಲಿ ಬುಸಿಯಾಗಿರುವ ಸುದೀಪ್ ಶುಕ್ರವಾರ ತಮ್ಮ ಮುಂದಿನ ಸಿನಿಮಾ ಬಗ್ಗೆ ಮೇಜರ್ ಅಪ್ ಡೇಟ್ ಕೊಟ್ಟಿದ್ದಾರೆ.
ವಿಕ್ರಾಂತ್ ರೋಣ ತ್ರಿಡಿ ಅದ್ಭುತವಾಗಿ ಮೂಡಿ ಬಂದಿದೆ. ಈ ಸಿನಿಮಾದ ಬಿಡುಗಡೆಯ ದಿನಾಂಕಕ್ಕಾಗಿ ನಾನು ಕಾಯುತ್ತಿದ್ದೇನೆ.
ಜತೆಗೆ ನಿರ್ದೇಶಕ ಅನೂಪ್ ಭಂಡಾರಿ ಅವರ ಜತೆಗಿನ ಮತ್ತೊಂದು ಸಿನಿಮಾ ಕುರಿತಾದ ಮಾಹಿತಿ ಹಂಚಿಕೊಳ್ಳಲು ಕಾತುರನಾಗಿದ್ದೇನೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
Reaching out to our own Limits and Pushing it a lil more, is a great high.
3D of #VikrantRona looks beautiful. Thanks to the whole team.
Await its release date.
Also await the announcement of my nxt collaboration with @anupsbhandari 🤜🏻🤛🏻 @SupriyanviPicS 🥳 @iampriya06 and ?? 😉 pic.twitter.com/m1GmDJlryL— Kichcha Sudeepa (@KicchaSudeep) February 18, 2022
ಅಂದಹಾಗೆ ಸುದೀಪ್ ಮತ್ತು ಅನೂಪ್ ಭಂಡಾರಿ ಅವರು ಒಂದಾಗಿದ್ದು, ಬಿಲ್ಲ ರಂಗ ಬಾಷಾ ಸಿನಿಮಾಗಾಗಿ.
ಆದ್ರೆ ಇದರ ಕಥೆಯಲ್ಲಿ ಒಂದು ಕ್ಲಾರಿಟಿ ಬರದೇ ಇದ್ದಾಗ, ಆ ಸಿನಿಮಾವನ್ನು ಪಕ್ಕಕ್ಕೆ ಇಟ್ಟು ವಿಕ್ರಾಂತ್ ರೋಣ ಸಿನಿಮಾ ಮಾಡಿದರು.
ಸದ್ಯ ವಿಕ್ರಾಂತ್ ರೋಣ ರಿಲೀಸ್ ಗೆ ರಿಲೀಸ್ ಗೆ ಸಿದ್ಧವಾಗಿದೆ.ಎಲ್ಲವೂ ಸರಿಯಾಗಿದ್ದಿದ್ದರೇ ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್ ಆಗಬೇಕಿತ್ತು.
ಆದ್ರೆ ಕೊರೊನಾ ಕಾರಣದಿಂದಾಗಿ ವಿಕ್ರಾಂತ್ ರೋಣ ರಿಲೀಸ್ ಆಗಲಿಲ್ಲ.
ಇನ್ನೊಂದೆಡೆ ಕಿಚ್ಚ ಮತ್ತೆ ಅನೂಪ್ ಅವರೊಂದಿಗೆ ಸಿನಿಮಾ ಮಾಡ್ತಿರೋದು ತೀವ್ರ ಕುತೂಹಲ ಕೆರಳಿಸಿದೆ.
ಈ ಹಿಂದೆ ಘೋಷಿಸಿದ್ದಂತೆ ಬಿಲ್ಲ ರಂಗ ಬಾಷ ಸಿನಿಮಾವನ್ನೇ ಮಾಡಲಿದ್ದಾರೋ..?
ಅಥವಾ ಬೇರೆ ಕಥೆಗೆ ಸುದೀಪ್ ಬಣ್ಣ ಹಚ್ಚಲಿದ್ದರೋ ಎಂಬುದಕ್ಕೆ ಸುದೀಪ್ ಅವರೇ ಉತ್ತರ ನೀಡಬೇಕಾಗಿದೆ.