ಅಭಿನಯ ಚಕ್ರವರ್ತಿ ಬರ್ತ್ ಡೇ – ‘ವಿಕ್ರಾಂತ್ ರೋಣ’ ಡೆಡ್ ಮ್ಯಾನ್ ಆಂಥಮ್ ಟೀಸರ್ ಔಟ್ : ಕಿಚ್ಚನ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ..!
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸೆಲೆಬ್ರಿಟಿಗಳು ಕಿಚ್ಚನಿಗೆ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.. ಅಭಿಮಾನಿಗಳಂತೂ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚನ ಹಹೆಸರಲ್ಲಿ ಜಾತ್ರೆ ಮಾಡುತ್ತಿದ್ದಾರೆ.. ಕಿಚ್ಚನ ಫೋಟೋಗಳೇ ಸೋಷಿಯಲ್ ಮೀಡಿಯಾ ತುಂಬ ರಾರಾಜಿಸುತ್ತಿದೆ..
ಸ್ಯಾಂಡಲ್ ವುಡ್ ಅಷ್ಟೇ ಅಲ್ದೇ, ಕಾಲಿವುಡ್ , ಬಾಲಿವುಡ್ , ಟಾಲಿವುಡ್ ಹೀಗೆ ಹಲವು ಭಾಷೆಗಳಲ್ಲಿ ಕಿಚ್ಚ ಅಭಿನಯಿಸಿದ್ದು,, ಅಪಾರ ಪ್ರಮಾಣದ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.. ಎಲ್ಲಾ ರೀತಿಯ ಪಾತ್ರಗಳು ಕಿಚ್ಚನಿಗೆ ಸ್ಯೂಟ್ ಆಗುತ್ತೆ.. ಸದಾ ಸ್ಟೈಲಿಶ್ ಆಗಿಯೇ ಕಾಣಿಸಿಕೊಳ್ಳುವ ಕಿಚ್ಚನ ಚಾರ್ಮ್ ಗೆ ಮನಸೋಲದವರೇ ಇಲ್ಲ..
ಕಿಚ್ಚನ ಹುಟ್ಟಹಬ್ಬದ ಪ್ರಯುಕ್ತ ಅವರ ಬಹುನಿರೀಕ್ಷೆಯ ‘ವಿಕ್ರಾಂತ್ ರೋಣ’ ಸಿನಿಮಾದ ಡೆಡ್ ಮ್ಯಾನ್ ಆಂಥಮ್ ಟೀಸರ್ ರಿಲೀಸ್ ಮಾಡಲಾಗಿದೆ.. ಪ್ಯಾನ್ ಇಂಡಿಯಾ ಸಿನಿಮಾವಾದ ವಿಕ್ರಾಂತ್ ರೋಣನ ಹೊಸ ಟೀಸರ್ ನಲ್ಲಿ ಥ್ರಿಲ್ಲಿಂಗ್ , ಸಸ್ಪೆನ್ಸ್ ಎಲಿಮೆಂಟ್ಸ್ ರೋಮಾಂಚನ ಮೂಡಿಸಿದ್ರೆ ಕಕಿಚ್ಚನ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದ್ರೆ ಕೋವಿಡ್ ಭೀತಿಯಿಂದ ಈ ವರ್ಷವೂ ಅಭಿನಯ ಚಕ್ರವರ್ತಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸಂಭ್ರಮಿಸುತ್ತಿಲ್ಲ. ಆದರೆ, ಆನ್ ಲೈನ್ ಮೂಲಕ ಫ್ಯಾನ್ಸ್ ಜೊತೆ ಸಂವಾದ ಮಾಡ್ತೇನೆ ಎಂದು ಸುದೀಪ್ ಹೇಳಿದ್ದಾರೆ.
ಟೀಸರ್ ನಲ್ಲಿ ಕಿಚ್ಚ ಒಂದು ಭಯಾನಕ ಮನೆಗೆ ಎಂಟ್ರಿ ಕೊಟ್ಟಿದ್ದು, ಮಾಸ್ ಲುಕ್ ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಬ್ಯಾಕ್‌ಗ್ರೌಂಡ್ ನಲ್ಲಿ ಬರುವ ಡೆಡ್ ಮ್ಯಾನ್ಸ್ ಆಂಥಮ್ ಧ್ವನಿ ಗಮನ ಸೆಳೆಯುತ್ತಿದೆ. ಡೆಡ್ ಮ್ಯಾನ್ಸ್ ಆಂಥಮ್ ಟೀಸರ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಂದ್ಹಾಗೆ ಈ ಹಿಂದೆಯೇ ಹುಟ್ಟುಹಬ್ಬದ ದಿನ ವಿಕ್ರಾಂತ್ ರೋಣ ಡೆಡ್ ಮ್ಯಾನ್ಸ್ ಟೀಸರ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಅಂದರಂತೆ ಇಂದು ಟೀಸರ್ ಬಿಡುಗಡೆಯಾಗಿದೆ.
ನಿರ್ದೇಶಕ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಜಾಕ್ ಮಂಜು ಬಂಡವಾಳ ಹೂಡುತ್ತಿದ್ದಾರೆ. ಅಷ್ಟೇ ಅಲ್ದೇ ಚಿತ್ರದಲ್ಲಿ ನಿರೂಪ್ ಭಂಡಾರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ನೀತಾ ಅಶೋಕ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಬಾಲಿವುಡ್ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಿನಿಮಾದ ವಿಶೇಷ ಹಾಡೊಂದ್ರಲ್ಲಿ ಕಿಚ್ಚನ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ದೇ ಸಿನಿಮಾದಲ್ಲಿ ನಟಿಸಿದ್ದಾರೆ.. ಈ ಮೂಲಕ ಮೊದಲ ಬಾರಿಗೆ ಜಾಕ್ವೆಲಿನ್ ಕನ್ನಡ ಸಿನಿಮಾದಲ್ಲಿ ನಟಿಸಿರುವುದು ವಿಶೇಷವಾಗಿದೆ.
ಬಾಲಿವುಡ್ ನ ಖ್ಯಾತ ನಟ ಸಿದ್ಧಾರ್ಥ್ ಶುಕ್ಲಾ ನಿಧನ..!