K L Rahul – ಸಾಕು ರಾಹುಲ್ ಸಹವಾಸ… ಅವ್ರನ್ನ ಪಕ್ಕಕ್ಕಿಡಿ
ಟೀಂ ಇಂಡಿಯಾದ ರಾಕಿಂಗ್ ಸ್ಟಾರ್ ಉಪನಾಯಕ ಕೆ.ಎಲ್.ರಾಹುಲ್ ವೈಫಲ್ಯ ಮುಂದುವರೆದಿದೆ. ಮಹತ್ವದ ಪಂದ್ಯವಾದ ಸೌಥ್ ಆಫ್ರಿಕಾ ವಿರುದ್ಧದ ಮ್ಯಾಚ್ ನಲ್ಲಿ ಕೆ.ಎಲ್.ರಾಹುಲ್ ಮತ್ತೆ ನಿರಾಸೆ ಅನುಭವಿಸಿದ್ದಾರೆ.
ರಾಹುಲ್ ವೀಕ್ನೆಸ್ ಬಗ್ಗೆ ಗೊತ್ತಿದ್ದ ಆಫ್ರಿಕನ್ ಬೌಲರ್ ಗಳು ಅಫ್ ಸ್ಟಂಪ್ ಮೇಲೆ ಬಾಲ್ ಹಾಕಿ ಖೆಡ್ಡಾಗೆ ತೋಡಿದರು. ಈ ಬಲಹೀನತೆ ರಾಹುಲ್ ಗೆ ಮತ್ತೊಮ್ಮೆ ಮುಳುವಾಗಿದೆ.
ಸೌತ್ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಬಂದ ಕೆ.ಎಲ್ ರಾಹುಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ವಿಶ್ವಕಪ್ ನಲ್ಲಿ ಆಡಿದ ಕಳೆದ ಎರಡು ಪಂದ್ಯಗಳಲ್ಲಿ ರಾಹುಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಅಬ್ಬರಿಸುತ್ತಾರೆ ಎಂದು ಎಲ್ಲರೂ ಅಂದಾಜಿಸಿದ್ದರು. ಹಾಗೇ ಕ್ರಿಕೆಟ್ ಪಂಡಿತರು ನಿರೀಕ್ಷೆ ಮಾಡಿದ್ದರು. ಅದಕ್ಕೆ ತಕ್ಕಂತೆ ಇನ್ನಿಂಗ್ಸ್ ನ ಎರಡನೇ ಓವರ್ ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಐ ಯಾಮ್ ಬ್ಯಾಕ್ ಅಂತಾ ಹೇಳಲು ಪ್ರಯತ್ನಿಸಿದರು. ಆದ್ರೆ ನಂತರ ಆಗಿದ್ದೇ ಬೇರೆ.
ಎನ್ಗಿಡಿ ಬೌಲಿಂಗ್ ನಲ್ಲಿ ಆಫ್ ಸ್ಟಂಪ್ ಮೇಲೆ ಬಂದ ಎಸೆತವನ್ನು ಎದುರಿಸಲಾಗದೇ ರಾಹುಲ್ ಮಾರ್ಕ್ರಾಂಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಇದಕ್ಕು ಮೊದಲು ಪಾಕಿಸ್ತಾನ, ನೆದರ್ ಲೆಂಡ್ ವಿರುದ್ದದ ಪಂದ್ಯಗಳಲ್ಲೂ ರಾಹುಲ್ ಕಡಿಮೆ ರನ್ ಗಳಿಸಿದ್ದರು. ಇದರಿಂದ ಸೋಶಿಯಲ್ ಮಿಡಿಯಾದಲ್ಲಿ ರಾಹುಲ್ ಮೇಲೆ ಟ್ರೋಲ್ಸ್ ಶುರುವಾಗಿದೆ. ರಾಹುಲ್ ಬದಲಿಗೆ ರಿಷಬ್ ಪಂತ್ ಗೆ ಅವಕಾಶ ನೀಡಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಆಗ ತಂಡದ ಟಾಪ್ ಆರ್ಡರ್ ನಲ್ಲಿ ಎಡಗೈ ಬ್ಯಾಟರ್ ಸಿಕ್ಕಂತಾಗುತ್ತದೆ ಎಂದು ವಾದಿಸುತ್ತಿದ್ದಾರೆ.
ಆದ್ರೆ ಟೀಂ ಮ್ಯಾನೇಜ್ ಮೆಂಟ್ ಗೆ ಕೆ.ಎಲ್.ರಾಹುಲ್ ಮೇಲೆ ನಂಬಿಕೆ ಇದೆ. ಇದೇ ಕಾರಣಕ್ಕೆ ಅವರಿಗೆ ಅವಕಾಶಗಳನ್ನು ನೀಡಲಾಗುತ್ತಿದೆ.
ಆದ್ರೆ ಸೋಶಿಯಲ್ ಮೀಡಿಯಾ ಕ್ರಿಕೆಟ್ ಪಂಡಿತರು ಮಾತ್ರ ರಾಹುಲ್ ಗೆ ಕೋಕ್ ಕೊಡುವ ಟೈಂ ಬಂದಾಗಿದೆ. ಅವರನ್ನ ಪ್ಲೇಯಿಂಗ್ 11 ನಿಂದ ಹೊರಗಾಕಿ ಎಂದು ಸಲಹೆಗಳನ್ನು ನೀಡುತ್ತಿದ್ದಾರೆ. ಅಂದಹಾಗೆ ರಾಹುಲ್ ವಿಶ್ವಕಪ್ ಗಾಗಿ ನಡೆದ ವಾರ್ಮ್ ಅಪ್ ಮ್ಯಾಚ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದರು.
ಸದ್ಯ ಅವರು ತಮ್ಮ ಮೈಂಡ್ ಸೆಟ್ ಚೇಂಜ್ ಮಾಡಿಕೊಂಡು ಯಾವುದೇ ಒತ್ತಡವಿಲ್ಲದೇ ತಮ್ಮ ನೈಜ ಪ್ರದರ್ಶನ ನೀಡಬೇಕು ಎಂದು ಕ್ರಿಕೆಟ್ ವಿಶ್ಲೇಷಕರು ಸಲಹೆ ನೀಡುತ್ತಿದ್ದಾರೆ.