ಜೀವನದ ಕೆಲ ರಿಯಲ್ ಫ್ಯಾಕ್ಟ್ಸ್: ಎಲ್ಲರ ಲೈಫ್ ನಲ್ಲೂ ಇವು ಅನುಭವಕ್ಕೆ ಬಂದೇ ಇರುತ್ತೆ..!
JELOUSY ( ಅಸೂಯೆ, ಹೊಟ್ಟೆ ಕಿಚ್ಚು)
ಅಸೂಯೆ ಯಾರೋ ಒಬ್ಬರ ಮೇಲೆ ನಿಮಗಿರುವ ಅತಿಯಾದ ಪ್ರೀತಿ ತೋರಿಸುವುದು, ಅವರನ್ನ ನೀವೆಷ್ಟು ಪ್ರೀತಿಸುತ್ತೀರಾ ಕೇರ್ ಮಾಡ್ತೀರಾ ಎಂಬುದನ್ನ ತೋರಿಸುವ ಮತ್ತೊಂದು ದಾರಿಯೇ JELOUSY ( ಅಸೂಯೆ, ಹೊಟ್ಟೆ ಕಿಚ್ಚು).
ಬೆಸ್ಟ್ ಫ್ರೆಂಡ್ಸ್ But No Longer ಫ್ರೆಂಡ್ಸ್..!
95 % ರಷ್ಟು ಜನರು ಯಾರೂ ಸಹ ಒಂದು ಕಾಲದಲ್ಲಿ ತಮ್ಮ ಬೆಸ್ಟ್ ಫ್ರೆಂಡ್ಸ್ ಎಂದು ಕರೆಯುತ್ತಿದ್ದವರ ಜೊತೆಗೆ ಸ್ನೇಹಿತರಾಗಿಯೇ ಉಳಿದಿರುವುದಿಲ್ಲ.
ಅಮ್ಮನಂತ ಜೀವನ ಸಂಗಾತಿ..!
ಬಹುತೇಕ ಹುಡುಗರು ತಮ್ಮ ಜೀವನ ಸಂಗಾತಿಯಾಗಿ ಬಯಸುವ ಹುಡುಗಿಯರಲ್ಲಿ ತಮ್ಮ ತಾಯಿಯಂತ ಗುಣಗಳು, ಹಾಗೂ ತಮ್ಮ ತಾಯಿಯ ಹೋಲುವಿಕೆಯನ್ನ ಹುಡುಕುತ್ತಾರೆ.
ಭಾವನೆಗಳು
ಮನೋವಿಜ್ಞಾನದ ಪ್ರಕಾರ ಮನುಷ್ಯನ ಭಾವನೆಗಳು ಎಷ್ಟು ಆಳವಾಗಿರುತ್ತವೋ , ಅವುಗಳನ್ನ ಎಕ್ಸ್ ಪ್ರೆಸ್ ಮಾಡುವುದು ಅಥವ ಅದನ್ನ ಹೇಳಿಕೊಳ್ಳುವುದು ಅಥವ ತೋರಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟವಾಗಿರುತ್ತೆ. 
ಕಾಲುಗಳು
ವೈಜ್ಞಾನಿಕವಾಗಿ ಉದ್ದ ಕಾಲುಗಳಿರುವವರು ಸಾಮಾನ್ಯವಾಗಿ ಕುಳ್ಳಗಿರುವರಿಗಿಂತಲೂ ಆರೋಗ್ಯವಾಗಿರುತ್ತಾರಂತೆ..
ಲವ್ ಬ್ರೇಕಪ್
40 % ರಷ್ಟು ಟೀನೇಜ್ ಹುಡುಗಿಯರು ತಮ್ಮ ಸ್ನೇಹಿತರು ಮಾತು ಕೇಳಿ ತಮ್ಮ ಲವರ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಳ್ತಾರೆ ಅನ್ನೋದು ಹಲವರ ಮಾತು.
ಒಯೆನೋಫೋಬಿಯಾ
ಕೆಲವರಿಗೆ ಈ ಒಯೆನೋಫೋಬಿಯಾ ಅನ್ನೋ ಒಂದು ಕಾಯಿಲೆ ಇರುತ್ತೆ. ಇಂತವರಿಗೆ ವೈನ್ ಅಂದ್ರೆ ಭಯವಿರುತ್ತೆ.
ಪಿಂಪಲ್ಸ್
ಮುಖದ ಮೇಲೆ ಪಿಂಪಲ್ಸ್ ಇರುವವರು , ಪಿಂಪಲ್ಸ್ ಇಲ್ಲದೇ ಇರುವವರಿಗಿಂತಲೂ ತುಂಬಾನೆ ಯಂಗ್ ಆಗಿ ಕಾಣಿಸುತ್ತಾರೆ.
ತಾಳ್ಮೆ
ಸಾಮಾನ್ಯವಾಗಿ ಮಹಿಳೆಯರು ವಾರಕ್ಕೆ 3 ಬಾರಿ ತಳ್ಮೆ ಕಳೆದುಕೊಳ್ತಾರೆ. ಅದೇ ರೀತಿ ಪುರುಷರು ವಾರಕ್ಕೆ 6 ಬಾರಿ ತಾಳ್ಮೆಯನ್ನ ಕಳೆದುಕೊಳ್ತಾರೆ.
ಹೆಡ್ ಫೋನ್ಸ್
ಬಹುತೇಕ ಜನರು ಹೆಡ್ ಫೋನ್ ಗಳನ್ನ ಹಾಕಿಕೊಳ್ಳುವ ಕಾರಣ ಬೇರೆಯವರು ಅವರ ಏಕಾಂತವನ್ನ / ಒಂಟಿತನವನ್ನ ಡಿಸ್ಟರ್ಬ್ ಮಾಡಬಾರದು ಎಂದು ಮನೋವಿಜ್ಞಾನ ತಿಳಿಸುತ್ತೆ.

ಖಿನ್ನತೆ
ಖಿನ್ನತೆಗೆ ಒಳಗಾಗಿರುವ ವ್ಯಕ್ತಿಗಳು ಖಿನ್ನತೆಯಿಂದ ಬಳಲದೇ ಇರುವವರಿಗಿಂತಲೂ ಹೆಚ್ಚು ಬಾರಿ ಅಂದ್ರೆ 1 ದಿನಕ್ಕೆ ಕನಿಷ್ಠ 3 ಬಾರಿ ಕನಸು ಕಾಣ್ತಾರೆ.
ಕಣ್ಣೀರು
ಅಳಬಾರದೆಂದು ಪ್ರಯತ್ನಿಸುತ್ತಿರುವಾಗಲೇ ಯಾರಾದರೂ ನೀವು ಚೆನ್ನಾಗಿದ್ದೀರಾ ಅಂತ ಕೇಳಿದ್ರೆ ನಾನ್ ಸ್ಟಾಪ್ ಕಣ್ಣೀರು ಬರುತ್ತೆ. ದುಃಖವನ್ನ ಕಂಟ್ರೋಲ್ ಮಾಡಿಕೊಳ್ಳುವುದು ಕಷ್ಟವಾಗುತ್ತೆ. ಕಣ್ಣೀರನ್ನ ಹಿಡಿದಿಟ್ಟುಕೊಳ್ಳುವುದು ಕಷ್ಟವಾಗುತ್ತೆ.
Don’t skip break fast
ಬೆಳಗಿನ ಬ್ರೇಕ್ ಫಾಸ್ಟ್ ಅನ್ನ ಬಿಟ್ಟರೆ ಅಥವಾ ಸರಿಯಾಗಿ ಮಾಡದೇ ಹೋದರೆ ಸಮಯಕ್ಕೂ ಮುಂಚೆಯೇ ಮುಖದ ಮೇಲೆ ರಿಂಕಲ್ಸ್ ಬರುತ್ತವೆ. ಹಾಗೆಯೇ ಹೆಚ್ಚು ವಯಸ್ಸಾದಂತೆ ಕಾಣಿಸುತ್ತಾರೆ.
ಮೈಂಡ್ ರೀಡಿಂಗ್
ತಮ್ಮ ಮುಂದಿರುವವರ ತಲೆಯಲ್ಲಿ ಏನು ಓಡುತ್ತಿದೆ ಎಂಬುದನ್ನ ಬಾವನೆಗಳಿಂದಲೇ ತಿಳಿದುಕೊಳ್ಳುವ ಸಾಮರ್ಥ್ಯ ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚಾಗಿರುತ್ತೆ.
ಡಿಸ್ ಲೈಕಿಂಗ್ / ದ್ವೇಷ
ಒಮ್ಮೆ ನೀವು ಯಾರನ್ನಾದ್ರೂ ಡಿಸ್ ಲೈಕ್ ಮಾಡೋದಕ್ಕೆ ಅಂದ್ರೆ ಅವರನ್ನ ಕಂಡರೆ ಇಷ್ಟ ಇಲ್ಲ ಎಂದರೆ ಅವರು ಮಾಡಿದ್ದೆಲ್ಲಾ ತಪ್ಪು, ಎನಿಸುತ್ತೆ. ಅವರು ಮಾಡಿದ ಪ್ರತಿಯೊಂದು ತಮಗೆ ತೊಂದರೆ ಎನಿಸುತ್ತೆ. ಕೋಪವೂ ಬರುತ್ತೆ.








