ಕನ್ನಡದ ಖಾಸಗಿ ವಾಹನವೊಂದರಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಚಿಕ್ಕಮಕ್ಕಳಿಂದ ಹಿಡಿದು ಹಿರಿಯವರೆಗೂ ಎಲ್ಲರ ಫೇವರೇಟ್ ಆಗಿದೆ. ಯಾರು ನೊಡಿದ್ರು ಮಹಾಭಾರತದ ಬಗ್ಗೆ ಅದರಲ್ಲಿ ಬರುವ ಪಾತ್ರಧಾರಿಗಳ ಬಗ್ಗೆಯೇ ಮಾತನಾಡುವಂತಾಗಿದೆ. ಅಷ್ಟರ ಮಟ್ಟಿಗೆ ಮಹಾಭಾರತ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳು ಜನರ ಅಚ್ಚುಮೆಚ್ಚಾಗಿದ್ದಾರೆ. ಅದ್ರಲ್ಲೂ ಮಹಾಭಾರತದ ಸೂತ್ರಧಾರಿ ಎಂದೇ ಕರೆಸಿಕೊಳ್ಳುವ ಶ್ರೀ ಕೃಷ್ಣನ ಪಾತ್ರದಲ್ಲಿ ನಟಿಸಿ, ಸ್ವಯಂ ಕೃಷ್ಣನನ್ನೇ ಹೋಲುವ ಮುಗ್ಧ ನಗುವಿನಿಂದಲೇ ಜನರ ಮನಗೆದ್ದಿರುವ ಕೃಷ್ಣ ಅತ್ಯಂತ ಜನಪ್ರಿಯ..
ಹಾಗಾದ್ರೆ ಶ್ರೀ ಕೃಷ್ಣಣ ಪಾತ್ರಕ್ಕೆ ಬಣ್ಣ ಹಚ್ಚಿರುವ ಇವರ ನಿಜವಾದ ಹೆಸರೇನು..? ಇವರು ಎಲ್ಲಿಯವರು..? ಈಗ ಏನ್ ಮಾಡ್ತಿದ್ದಾರೆ..? ಹಿಂದೆ ಏನ್ ಮಾಡ್ತಿದ್ರು..? ಹೀಗೆ ಇವರ ಜೀವನದ ಬಗ್ಗೆ ತಿಳಿಯೋ ಕುತೂಹಲ ಎಲ್ಲರಿಗೂ ಕಾಮನ್ ಆಗಿ ಇದ್ದೇ ಇರುತ್ತೆ ಅಲ್ವಾ.. ?
ಬಾಲ್ಯ
ಮುಗ್ಧ ನಗುವಿನಿಂದ ಎಂತಹದ್ದೇ ಕಷ್ಟವನ್ನೂ ಮರೆಸುವ , ಸಾಕ್ಷಾತ್ ಶ್ರೀಕೃಷ್ಣನನ್ನೇ ಹೋಲುವ ಇವರ ನಿಜವಾದ ಹೆಸರು ಸೌರಭ್ ರಾಜ್ ಜೈನ್ ಅಂತ. ಈ ಹ್ಯಾಂಡ್ಸಮ್ ನಟ ಮೂಲತಹ ದೆಹಲಿಯವರಾಗಿದ್ದು, ಮಧ್ಯಮ ವರ್ಗದ ಕುಟುಂಬವೊಂದರಲ್ಲಿ 1985 ರ ಡಿಸೆಂಬರ್ 1ರಂದು ಜನಿಸಿದ್ರು. ಸೌರಭ್ ಹೆಸರೇ ಹೇಳುವಂತೆ ಜೈನ ಪರಿವಾರದಲ್ಲಿ ಜನಿಸಿದ್ರೂ, ಅವರ ಪರಿವಾರದವರು ಬುದ್ದಿಸಮ್ ನ ಅನುಯಾಯಿಗಳಾಗಿದ್ದರು. ಹೀಗಾಗಿಯೇ ಸಹಜವಾಗಿಯೇ ಸೌರಭ್ ಅತ್ಯಂತ ಸೌಮ್ಯ ಸ್ವಭಾವದವರಾಗಿದ್ದಾರೆ. ಇವರ ತಾಯಿ ರಾಜ್ ಜೈನ್ ವೃತ್ತಿಪರ ಲಾಯರ್ ಆಗಿದ್ದು, ಇವರಿಗೆ ಇಬ್ಬರು ಸಹೋದರಿಯರಿದ್ದಾರೆ. 
ವಿದ್ಯಾಭ್ಯಾಸ
ದೆಹಲಿಯ ಕರ್ನಲ್ ಸತ್ಸಂಗೀಸ್ ಮೆಮೋರಿಯಲ್ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಹಂತದ ವಿಧ್ಯಾಭ್ಯಾಸ ಮುಗಿಸಿಕೊಂಡ ಬಳಿಕ ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ತ ವಿವಿಯಲ್ಲಿ ಬಿಸಿಎ ಪದವಿ ಪಡೆದುಕೊಂಡಿದ್ದಾರೆ. ಇನ್ನೂ ಪುಣೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸಿಂಬಿಯೋಸಿಸ್ ಇಂಟರ್ ನ್ಯಾಷನಲ್ ವಿವಿಯಲ್ಲಿ ಎಂಬಿಎ ಕಂಪ್ಲೀಟ್ ಮಾಡಿಕೊಂಡಿದ್ದಾರೆ. ಇವರು ಓದುವಾಗಲೇ ತಮ್ಮ ಜ್ಯೂನಿಯರ್ಸ್ ಗೆ ಟ್ಯೂಷನ್ ಮಾಡುತ್ತಿದ್ದರು. ಹೀಗೆ ಒಬ್ಬರಿಗೆ ತಲಾ 500 ರೂಪಾಯಿಯಂತೆ ಫೀಸ್ ಚಾರ್ಜ್ ಮಾಡುತ್ತಿದ್ದರು ಎಂಬ ಮಾಹಿತಿ ಇದೆ.

ವೈವಾಹಿಕ ಜೀವನ
ಸೌರಭ್ ಡ್ಯಾನ್ಸ್ ಟ್ರೈನಿಂಗ್ ಗಾಗಿ ಆಶ್ಲಿನ್ ಲೋಗೋ ಅಕಾಡೆಮಿಗೆ ಸೇರ್ಪಡೆಗೊಂಡಿದ್ದರು. ಅದೇ ಅಕಾಡೆಮಿಯಲ್ಲಿ ಸೌರಭ್ ಗೆ ಸಾಫ್ಟ್ ವೇರ್ ಇಂಜಿನಿಯರ್ ಆದ ರಿದಿಮಾರ ಪರಿಚಯವಾಗುತ್ತೆ. ಇವರು ಮೊದಲು ಸ್ನೇಹಿತರಾಗಿದ್ದು, ಕೆಲ ದಿನಗಳ ನಂತರ ಇವರ ಸ್ನೇಹ ಪ್ರೀತಿಗೆ ಬದಲಾಗುತ್ತೆ. ಇದಾದ ಬಳಿಕ ಸೌರಭ್ ಹಾಗೂ ರಿದಿಮಾ 2010 ರಲ್ಲಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೂ ಈ ಮುದ್ದಾದ ಜೋಡಿಗೆ ಇಬ್ಬರು ಅವಳಿಜವಳಿ ಮಕ್ಕಳಿದ್ದು, ಮಗಳ ಹೆಸರು ಹೃಷಿಕಾ ಹಾಗೂ ಮಗನ ಹೆಸರು ಹೃಷಿವ್. ಸದ್ಯ ಸೌರಭ್ ಮಕ್ಕಳು ಹಾಗೂ ಪತ್ನಿಯೊಂದಿಗೆ ಮುಂಬೈನ ತಮ್ಮ ನಿವಾಸದಲ್ಲಿ ನೆಲೆಸಿದ್ದಾರೆ.

ವೃತ್ತಿ ಜೀವನ
ಸೌರಭ್ ಕಾಲೇಜಿನಲ್ಲಿರುವಾಗಲೇ ಆಕ್ಟಿಂಗ್ ಕೆರಿಯರ್ ಪ್ರಾರಂಭಿಸಿದ್ದರು. ರಿಮಿಕ್ ಸೀರಿಯಲ್ ನ ಅಮಂದೀಪ್ ಚಡ್ಡಾ ಎಂಬ ಪಾತ್ರದ ಮೂಲಕ ಸೌರಭ್ ಮೊದಲ ಬಾರಿಗೆ ಆಕ್ಟಿಂಗ್ ಪ್ರಾರಂಭಿಸಿದ್ರು. ಈ ಶೋ ಅಂತ್ಯದವರೆಗೂ ಜೈನ್ ಇನ್ನೂ ಕಾಲೇಜಿನಲ್ಲೇ ಇದ್ದರು. ಹೀಗಾಗಿ ಈ ಶೋ ಮುಗಿಯುತ್ತಿದ್ದಂತೆ ಸತತ 2 ವರ್ಷಗಳ ಕಾಲ ಸೌರಭ್ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರು. ಬಳಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಸೌರಭ್ ಮತ್ತೆ ಎಂಟರ್ಟೈನ್ ಮೆಂಟ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ರು. ಬಳಿಕ 2008ರಲ್ಲಿ ಬಾಲಿವುಡ್ ನ ಕರ್ಮ ಚಿತ್ರದಲ್ಲಿ ಸಪೋರ್ಟಿಂಗ್ ರೋಲ್ ನಲ್ಲಿ ಆಕ್ಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಇದಾದ ಬಳಿಕ 2011ರಲ್ಲಿ ಪರಿಚಯ ಎಂಬ ಟಿವಿ ಶೋನಲ್ಲಿ ಆನಂದ್ ಹೆಸರಿನ ಪಾತ್ರ ನಿಭಾಯಿಸುವ ಚಾನ್ಸ್ ಸಿಕ್ಕಿತ್ತು.

ಸ್ಟಾರ್ ಪಟ್ಟ
ಕರ್ಮ ಎಂಬ ಹೆಸರಿಂದಲೇ ಕೆರಿಯರ್ ಪ್ರಾರಂಭಿಸಿದ ಸೌರಭ್ ಅವರ ಹೆಸರಿನ ಜೊತೆಗೆ ಶ್ರೀಕೃಷ್ಣನ ಹೆಸರು ಸೇರಿದರಲ್ಲಿ ಅಚ್ಚರಿ ಏನಿಲ್ಲ. ಸೌರಭ್ ಅವರು ಸಿಕ್ಕಾಪಟ್ಟೆ ಫೇಮಸ್ ಆಗೋದಕ್ಕೆ ಕಾರಣ ಅವರ ಮೈಥಾಲಾಜಿಕಲ್ ಪಾತ್ರಗಳು. ಅದ್ರಲ್ಲೂ ಶ್ರೀಕೃಷ್ಣ , ವಿಷ್ಣು, ಶಿವ ಈ ಎಲ್ಲಾ ಪಾತ್ರಗಳು ಸೌರಭ್ ಅವರಿಗೆ ಹೇಳಿ ಮಾಡಿಸಿದ್ದು ಎಂದರೂ ತಪ್ಪೇನಿಲ್ಲ. 2008 ಹಾಗೂ 2009 ರಲ್ಲಿ ಜೈ ಶ್ರೀಕೃಷ್ಣ ಧಾರಾವಾಹಿಯಲ್ಲಿ ವಿಷ್ಣುವಾಗಿ ಜಗತ್ ಪಾಲಕನ ಪಾತ್ರದಲ್ಲಿ ಜನರನ್ನ ಮೋಡಿ ಮಾಡಿದ್ದ ಸೌರಭ್ ಗೆ ಒಂದಾದ ಮೇಲೊಂದು ಒಳ್ಳೊಳ್ಳೆ ಆಫರ್ಸ್ ಸಿಕ್ಕಿದ್ವು. 2011ರಲ್ಲಿ ದೇವೋಂಕೆ ದೇವ್ ಮಹಾದೇವದಲ್ಲಿ ಮತ್ತೆ ಜಗತ್ ಪಾಲಕ ವಿಷ್ಣುವಿನ ಅವತಾರದಲ್ಲಿ ನಟಿಸಿದ ಸೌರಭ್ ಸದಾ ಹಸನ್ಮುಖಿಯಾಗಿಯೇ ಜನರ ಫೇವರೇಟ್ ಆದರು. ಅವರ ನಟನೆ ಸಾಕ್ಷಾತ್ ವಿಷ್ಣುವನ್ನೇ ಜನರಿಗೆ ನೆನೆಪಿಸುವಂತೆ ಮಾಡಿತ್ತು. ಇದಾದ ಬಳಿಕ ಅಂದ್ರೆ 2013ರಲ್ಲಿ ಪೌರಾಣಿಕ ಧಾರಾವಾಹಿಯಲ್ಲಿ ಸೌರಭ್ ಕೃಷ್ಣನಾಗಿ ಕಾಣಿಸಿಕೊಂಡರು. ಈ ಪಾತ್ರದಲ್ಲಿ ಸೌರಭ್ ಜನರ ಮನಸ್ಸಿಗೆ ತುಂಬ ಹತ್ತಿರವಾಗಿದ್ದು, ಹಾಗೇ ಈ ವಿಷ್ಣು ಹಾಗೂ ಕೃಷ್ಣನ ಪಾತ್ರದಿಂದಲೇ ಸೌರಭ್ ಅತ್ಯಂತ ಜನಮಣ್ಣನೆ ಪಡೆದರೂ ಎಂದರೂ ಅಚ್ಚರಿಯೇನಿಲ್ಲ. ಇದಲ್ಲದೆ ಮಹಾಭಾರತ ಶೋ ಶುರುವಾಗುವ 1 ವರ್ಷದ ಮುಂಚೆಯಿಂದಲೇ ಸೌರಭ್ ಅವರಿಗೆ ಯಾವುದೇ ಬೇರೆ ಪ್ರಾಜೆಕ್ಟ್ ಗಳನ್ನ ಒಪ್ಪಿಕೊಳ್ಳದಂತೆ ಮಹಾಭಾರತದ ಮೇಕರ್ಸ್ ಕೇಳಿಕೊಂಡಿದ್ರು ಎಂದು ಹೇಳಲಾಗಿದೆ. ಅಲ್ಲದೇ ಅವರಿಗೆ ಪ್ರತಿ ತಿಂಗಳು ಮಹಾಭಾರತದ ಟೀಂ ವತಿಯಿಂದ ಸಂಭಾವನೆಯನ್ನೂ ಕಳುಹಿಸಿಕೊಡಲಾಗಿತ್ತು ಎಂಬ ಮಾಹಿತಿಯೂ ಇದೆ. ಬಳಿಕ 2017ರಲ್ಲಿ ಮಹಾಕಾಳಿ ಧಾರಾವಹಿಯಲ್ಲಿ ಶಿವ ಶಂಕರನಾಗಿ ಜನಮನ್ನಣೆ ಪಡೆಯುತ್ತಾರೆ. ಇನ್ನೂ ಒಂದು ಪ್ರಮುಖ ಅಂಶವೆಂದ್ರೆ ಸೌರಭ್ ಅವರ ರೋಲ್ ಮಾಡಲ್ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್. ಇವರ ಮಹಾಭಾರತದಲ್ಲಿನ ಕೃಷ್ಣ ಪಾತ್ರ ಇಂಡೋನೇಷ್ಯಾದಲ್ಲೂ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಹೀಗಾಗಿ 2015ರಲ್ಲಿ ಇಂಡೋನೇಷ್ಯಾದ ಚೆಕ್ ಇನ್ ಬ್ಯಾಂಕ್ ಹಾಕ್ ಚಿತ್ರದಲ್ಲೂ ನಟಿಸಲು ಸೌರಭ್ ಗೆ ಆಫರ್ ಸಿಕ್ಕಿತ್ತು. 2017 ರಲ್ಲಿ ಟಾಲಿವುಡ್ ನ ಓಂ ನಮೋ ವೆಂಕಟೆಶಾಯದಲ್ಲಿ ವೆಂಕಟೆಶ್ವರನ ಪಾತ್ರದಲ್ಲಿ ಕಾಣಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ಖಾಸಗಿ ವಾಹಿಯೊಂದರಲ್ಲಿ ಪ್ರಸಾರವಾಗುತ್ತಿರುವ ಪಟಿಯಾಲಾ ಬೇಬ್ಸ್ ನಲ್ಲಿ ನೀಲ್ ಎಂಬ ನಾನ್ ಮೈಥಲಾಜಿಕಲ್ ಕ್ಯಾರೆಕ್ಟರ್ ನಲ್ಲಿ ನಟಿಸುತ್ತಿರುವ ಸೌರಭ್ ಹಾಗೂ ಸಹನಟಿ ಅಶ್ನೂರ್ ಕೌರ್ ಅವರ ಕೆಮಿಸ್ಟ್ರಿಗೆ ಜನರು ಫಿದಾ ಆಗಿದ್ದಾರೆ.

ನಿರೂಪಣೆ, ಆರ್ ಜೆ
ಬೆಸ್ಟ್ ಆಕ್ಟರ್ ಆಗಿರುವ ಜೊತೆಜೊತೆಗೆ ಸೌರಭ್ ಉತ್ತಮ ಹೋಸ್ಟ್ ಕೂಡ ಹೌದು. ಸಾವ್ ಧಾನ್ ಇಂಡಿಯಾ, ಭಕ್ತೋಂಕೆ ಭಕ್ತಿ ಮೇ ಶಕ್ತಿ, ಮಹಾಪುರಾಣದಂತದ ಟಿವಿ ಶೋಗಳಲ್ಲಿ ಹೋಸ್ಟ್ ಮಾಡಿ ನಿರೂಪಣೆಯಿಂದಲೂ ಜನರ ಅಚ್ಚುಮೆಚ್ಚಾದ್ರು. ಅಲ್ಲದೆ 92. ಬಿಗ್ ಎಫ್ ಎಂ ನಲ್ಲಿ ಅರ್ಥ್ ಎಂಬ ಹೆಸರಿನ ಸ್ಪೀಚುಯಲ್ ಕಾರ್ಯಕ್ರಮದಲ್ಲಿ ರೇಡಿಯೋ ಜಾಕಿಯಾಗಿ ಸಹ ಗುರುತಿಸಿಕೊಂಡಿದ್ದಾರೆ.

ಡ್ರೀಮ್
ರಾಷ್ಟ್ರಗೀತೆಯನ್ನು ಭಾರತಕ್ಕೆ ನೀಡಿದ ರಬೀಂದ್ರನಾಥ್ ಠಾಗೋರ್ ಅವರ ಜೀವನದ ಆಧಾರದ ಮೇಲೆ ಶೋ ಅಥವಾ ಚಿತ್ರ ಮಾಡಿದರೆ ಅದರಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸು ಸೌರಭ್ ಅವರದ್ದಾಗಿದೆ.

ಅತ್ಯಂತ ಸಾಧು ಸ್ವಭಾವದವರಾಗಿರುವ ಹಸನ್ಮುಖಿ ಸೌರಭ್ ರಾಜ್ ಜೈನ್ ಸದಾ ಪೌರಾಣಿಕ ಪಾತ್ರಗಳಲ್ಲೇ ಹೆಚ್ಚು ಹೆಚ್ಚು ಜನಮಣ್ಣನೆ ಪಡೆದು ಜನರ ಮನಸ್ಸಿಗೆ ಹತ್ತಿರವಾದವರು. ಅದ್ರಲ್ಲೂ ಕೃಷ್ಣ, ವಿಷ್ಣು ಭಗವಾನ್ ಎಂದರೆ ಥಟ್ ಅಂತ ಸೌರಭ್ ನ ಮುಖ ಕಣ್ಣೆದುರಿಗೆ ಬರುತ್ತೆ. ಅಷ್ಟರ ಮಟ್ಟಿಗೆ ಅವರು ಆ ಪಾತ್ರಗಳಿಗೆ ಜೀವ ತುಂಬಿದ್ರು.







