Jadeja | ಜಡೇಜಾ vs ದಿನೇಶ್ ಕಾರ್ತಿಕ್.. ಸಂಜಯ್ ಹೇಳಿದ್ಧೇನು..?
ಈ ವರ್ಷದ ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗೆ ಭಾರತ ಕ್ರಿಕೆಟ್ ತಂಡದಲ್ಲಿ ಯಾರು ಯಾರು ಸ್ಥಾನ ಪಡೆಯುತ್ತಾರೆ ಎಂಬ ಚರ್ಚೆ ಶುರುವಾಗಿದೆ.
ಅದರಂತೆ ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್, ಆಸ್ಟ್ರೇಲಿಯಾ ವೇದಿಕೆಯಾಗಿ ನಡೆಯಲಿರುವ ಟಿ 20 ವಿಶ್ವಕಪ್ ನಲ್ಲಿ ಭಾರತ ಪ್ಲೇಯಿಂಗ್ ಇಲೆವೆನ್ ನಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಸ್ಥಾನ ಪಡೆೋದು ತುಂಬಾ ಕಷ್ಟ ಎಂದು ಸಂಜಯ್ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯವಾಗಿ ಲೋಯರ್ ಆರ್ಡರ್ ನಲ್ಲಿ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಅದ್ಥುತವಾಗಿ ಆಡುತ್ತಿದ್ದಾರೆ.
ಹೀಗಾಗಿ ಸೆಲೆಕ್ಟರ್ ಗಳಿಗೆ ದೊಡ್ಡ ಸವಾಲು ಎದುರಾಗಲಿದೆ. ಏಳನೇ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಅದ್ಭುತವಾಗಿ ಮಿಂಚುತ್ತಿದ್ದಾರೆ.

ದಕ್ಷಿಣಾ ಆಫ್ರಿಕಾ ವಿರುದ್ಧ ನಡೆದ ಟಿ 20 ಸಿರೀಸ್ ನಲ್ಲಿ ಐಪಿಎಲ್ ನಲ್ಲಿ ಕಾರ್ತಿಕ್ ಅಬ್ಬರಿಸಿದ್ದಾರೆ.
ಹೀಗಾಗಿ ಕಾರ್ತಿಕ್ ಸ್ಥಾನದಲ್ಲಿ ಜಡೇಜಾ ತಂಡಕ್ಕೆ ಬರೋದು ಸುಲಭವಲ್ಲ ಎಂದಿದ್ದಾರೆ.
ಬ್ಯಾಟಿಂಗ್ ನಲ್ಲಿ ಟೀಂ ಇಂಡಿಯಾ ಸಾಲಿಡ್ ಆಗಿದೆ. ಆದ್ರೆ ಜಡೇಜಾ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವಿದೆ.
ತುಂಬಾ ಪಂದ್ಯಗಳಲ್ಲಿ ಜಡ್ಡು ಅದನ್ನ ಮಾಡಿ ತೋರಿಸಿದ್ದಾರೆ.
ಹೀಗಾಗಿ ಟಿ 20 ವಿಶ್ವಕಪ್ ನಲ್ಲಿ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡೋದು ತುಸು ಕಷ್ಟವಾಗಬಹುದು ಎಂದಿದ್ದಾರೆ.
ಅಂದಹಾಗೆ 2022ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದ ದಿನೇಶ್ ಕಾರ್ತಿಕ್ ಮಿಂಚಿನ ಪ್ರದರ್ಶನ ನೀಡಿದ್ದರು.
ಈ ಸೀಸನ್ ನಲ್ಲಿ 16 ಪಂದ್ಯಗಳನ್ನಾಡಿದ್ದ ದಿನೇಶ್ ಕಾರ್ತಿಕ್, 55ರ ಸರಾಸರಿಯಲ್ಲಿ 183.33ರ ಸ್ಟ್ರೈಕ್ ರೇಟ್ ನಲ್ಲಿ 330 ರನ್ ಗಳಿಸಿದ್ದರು.
ಅವರ ಗರಿಷ್ಠ ಸ್ಕೋರ್ 66 ರನ್ ಆಗಿದ್ದು, 27 ಬೌಂಡರಿ, 22 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಪ್ರದರ್ಶನದ ಕಾರಣ ದಿನೇಶ್ ಕಾರ್ತಿಕ್ ಮೂರು ವರ್ಷಗಳ ಬಳಿಕ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.
ಇತ್ತೀಚೆಗಷ್ಟೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮಿಂಚಿದ್ದ ಡಿ.ಕೆ. ಐರ್ಲೆಂಡ್ ಪ್ರವಾಸದಲ್ಲಿದ್ದಾರೆ.
ಇನ್ನು ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅತ್ಯಂತ ಕಳಫೆ ಪ್ರದರ್ಶನ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದ ಜಡೇಜಾ, ನಾಯಕತ್ವದ ಒತ್ತಡದಲ್ಲಿ ವೈಯುಕ್ತಿಕ ಪ್ರದರ್ಶನದ ಕಡೆ ಗಮನ ಹರಿಸಲಿಲ್ಲ. ಕ್ಯಾಪ್ಟನ್ ಆಗಿ 10 ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಮಾತ್ರ ಗೆದ್ದರು.
ಇನ್ನು ವೈಯುಕ್ತಿಕ ಪ್ರದರ್ಶನದ ಬಗ್ಗೆ ಬಂದರೇ ಈ ಸೀರಿಸ್ ನಲ್ಲಿ 10 ಪಂದ್ಯಗಳನ್ನಾಡಿದ ಜಡ್ಡು, 19.33ರ ಸರಾಸರಿಯಲ್ಲಿ 118.37ರ ಸ್ಟ್ರೈಕ್ ರೇಟ್ ನಲ್ಲಿ 116 ರನ್ ಗಳಿಸಿದ್ದಾರೆ. 10 ಪಂದ್ಯಗಳಲ್ಲಿ ಐದು ವಿಕೆಟ್ ಮಾತ್ರ ಪಡೆದಿದ್ದಾರೆ.
ಆದ್ರೆ ಟೂರ್ನಿಯ ಮಧ್ಯೆದಲ್ಲಿ ನಾಯಕತ್ವದಿಂದ ಕೆಳಗಿಳಿದ ಜಡೇಜಾ, ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಗಾಯಗೊಂಡರು. ಹೀಗಾಗಿ ಟೂರ್ನಿಯಿಂದ ಜಡೇಜಾ ಹೊರ ಬಂದರು.







