Manoranjan Ravichandran Marriage | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೋರಂಜನ್
ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ಮದುವೆ
ಬೆಂಗಳೂರಿನ ಪ್ಯಾಲೆಟ್ ವೈಟ್ ಪೆಟಲ್ಸ್ನಲ್ಲಿ ಮದುವೆ
ಸಂಗೀತ ದೀಪಕ್ ಜೊತೆ ಮನೋರಂಜನ್ ವಿವಾಹ
ಸ್ಯಾಂಡಲ್ ವುಡ್ ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮೊದಲ ಪುತ್ರ ಮನೋರಂಜನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿನ್ನೆ ಮೆಹಂದಿ, ಹಾಗೂ ಆರತಕ್ಷತೆ ಕಾರ್ಯಕ್ರಮ ವೈಭವದಿಂದ ನಡೆದಿದೆ. ಬೆಂಗಳೂರಿನ ಪ್ಯಾಲೆಟ್ ವೈಟ್ ಪೆಟಲ್ಸ್ನಲ್ಲಿ ಮದುವೆ ಸಮಾರಂಭ ನಡೆಯುತ್ತಿದೆ.
ಸಂಗೀತ ದೀಪಕ್ ಜೊತೆ ಮನೋರಂಜನ್ ರವಿಚಂದ್ರನ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಆಗಸ್ಟ್ 21 ರಂದು 8.30ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಸಂಗೀತಾ ಎಂಬವರನ್ನು ವರಿಸಿದ್ದಾರೆ.
ಕನ್ನಡ ಚಿತ್ರರಂಗದ ಗಣ್ಯರು ನವ ಜೋಡಿಗಳಿಗೆ ಶುಭ ಹಾರೈಸಿ ಆಶೀರ್ವಾದ ಮಾಡಿದ್ದಾರೆ.
ಶಿವರಾಜ್ ಕುಮಾರ್ ದಂಪತಿ, ನಟಿ ಖುಷ್ಖು, ಹಂಸಲೇಖ ದಂಪತಿ, ಅಕುಲ್ ಬಾಲಾಜಿ, ರಾಘವೇಂದ್ರ ರಾಜ್ ಕುಮಾರ್, ಮಾಸ್ಟರ್ ಆನಂದ್ ಸೇರಿದಂತೆ ಅನೇಕ ಗಣ್ಯರು ಬಂದು ನವ ದಂಪತಿಗೆ ಶುಭ ಹಾರೈಸಿದ್ದಾರೆ.
2017 ರಲ್ಲಿ ಸಾಹೇಬ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಮನೋರಂಜನ್ ಆ ಬಳಿಕ ಬೃಹಸ್ಪತಿ, ಮುಗಿಲ್ಪೇಟೆ, ಪ್ರಾರಂಭ ಹೆಸರಿನ ಚಿತ್ರಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು.