ADVERTISEMENT
Saturday, April 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಮೋದಿಗೆ ಸಾಮಾನ್ಯ ಜ್ಞಾನವಿಲ್ಲ ತಿಲಕ ಇಡುವ ಕೇಸರಿ ಬರುವುದೂ ಮುಸ್ಲಿಂ ರಾಷ್ಟ್ರಗಳಿಂದಲೇ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

Shwetha by Shwetha
April 11, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನಿಷ್ಠ ಸಾಮಾನ್ಯ ಪ್ರಜ್ಞೆಯೂ ಇಲ್ಲ ಎಂದು ನೇರವಾಗಿ ಟೀಕಿಸಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅಷ್ಟೊಂದು ಅಸಮಾಧಾನ ಮತ್ತು ಬೇಸರವಿದ್ದರೆ, ಮೊದಲು ಇಸ್ಲಾಮಿಕ್ ದೇಶಗಳ ಜೊತೆಗಿನ ವ್ಯಾಪಾರ ಸಂಬಂಧವನ್ನು ಕಡಿದುಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ದೇಶಪ್ರೇಮದ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ, ಈ ದೇಶದ ಅಲ್ಪಸಂಖ್ಯಾತರು, ಆದಿವಾಸಿಗಳು ಮತ್ತು ದಲಿತರು ನಮ್ಮ ನಾಗರಿಕರಲ್ಲ ಎಂದು ಬಹಿರಂಗವಾಗಿ ಹೇಳಲಿ ನೋಡೋಣ ಎಂದು ಗುಡುಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ದ್ವಂದ್ವ ನೀತಿಯನ್ನು ಕಟುವಾಗಿ ಟೀಕಿಸಿದರು. ಒಂದು ಕಡೆ ಅಲ್ಪಸಂಖ್ಯಾತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಪ್ರಧಾನಿಗಳು, ಮತ್ತೊಂದು ಕಡೆ ಇಸ್ಲಾಮಿಕ್ ದೇಶಗಳಿಗೆ ಹೋದಾಗ ಅಲ್ಲಿನ ದೊರೆಗಳನ್ನು ಅಪ್ಪಿಕೊಂಡು ಮೈ ಫ್ರೆಂಡ್, ಮೈ ಬ್ರದರ್ ಎಂದು ಟ್ವೀಟ್ ಮಾಡುತ್ತಾರೆ. ಭಾರತಕ್ಕೆ ಬೇಕಾದ ಶೇಕಡಾ 78 ರಷ್ಟು ಪೆಟ್ರೋಲಿಯಂ ಉತ್ಪನ್ನಗಳು, ಕಚ್ಚಾ ತೈಲ ಮತ್ತು ಯೂರಿಯಾ ಇಸ್ಲಾಮಿಕ್ ರಾಷ್ಟ್ರಗಳಿಂದಲೇ ಬರಬೇಕು. ವ್ಯಾಪಾರಕ್ಕಾಗಿ ಆ ದೇಶಗಳ ಮೇಲೆ ಅವಲಂಬಿತರಾಗಿರುವ ಪ್ರಧಾನಿ ಮೋದಿಯವರಿಗೆ ವಾಸ್ತವದ ಅರಿವಿಲ್ಲದೆ ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Related posts

ಯುಪಿಐ ಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಇನ್ನು ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣ ಕಳುಹಿಸಿದರೆ ಒಂದು ಗಂಟೆ ಕಾಯಲೇಬೇಕು : ಕಿಲ್ ಸ್ವಿಚ್ ಆಯ್ಕೆ ಬಗ್ಗೆ ನಿಮ್ಗೆ ಗೊತ್ತಾ?

ಯುಪಿಐ ಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಇನ್ನು ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣ ಕಳುಹಿಸಿದರೆ ಒಂದು ಗಂಟೆ ಕಾಯಲೇಬೇಕು : ಕಿಲ್ ಸ್ವಿಚ್ ಆಯ್ಕೆ ಬಗ್ಗೆ ನಿಮ್ಗೆ ಗೊತ್ತಾ?

April 11, 2026
‘ಪಾಕ್ ವಿಶ್ವಾಸಾರ್ಹ ಮಧ್ಯಸ್ಥಿಕೆದಾರನಲ್ಲ’.. ಇಸ್ರೇಲ್ ಅನುಮಾನ

‘ಝೂಂಬಿ ಡ್ರಗ್ಸ್’ ಸುಳ್ಳು ವಿಡಿಯೋ ವೈರಲ್: ಆರೋಪಿಯ ಬಂಧನ

April 11, 2026

ಇದೇ ವೇಳೆ ಕೇಸರಿ ತಿಲಕದ ಬಗ್ಗೆ ಕುತೂಹಲಕಾರಿ ಅಂಕಿಅಂಶ ನೀಡಿದ ಖರ್ಗೆ, ನಾವು ಭಕ್ತಿಯಿಂದ ಹಣೆಗೆ ಹಚ್ಚುವ ತಿಲಕಕ್ಕೆ ಬಳಸುವ ಕೇಸರಿ ಎಲ್ಲಿಂದ ಬರುತ್ತದೆ ಎಂಬುದು ಬಿಜೆಪಿಯವರಿಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದರು. ತಿಲಕಕ್ಕೆ ಬಳಸುವ ಶೇಕಡಾ 90 ರಷ್ಟು ಕೇಸರಿ ಇರಾನ್ ಮತ್ತು ಆಫ್ಘಾನಿಸ್ತಾನದಂತಹ ಮುಸ್ಲಿಂ ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ನಮ್ಮ ಕಾಶ್ಮೀರದಲ್ಲಿ ಬೆಳೆಯುವುದು ಕೇವಲ ಶೇಕಡಾ 5 ರಷ್ಟು ಮಾತ್ರ. ಈ ಸತ್ಯದ ಅರಿವಿಲ್ಲದೆ ಬಿಜೆಪಿಯವರು ಕೇವಲ ಭಾವನಾತ್ಮಕವಾಗಿ ಜನರನ್ನು ಕೆರಳಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇದೇ ಸಂದರ್ಭದಲ್ಲಿ ಅಮಿತ್ ಶಾ ಪುತ್ರ ಜಯ್ ಶಾ ಅವರ ನಡೆಯನ್ನು ಟೀಕಿಸಿದ ಅವರು, ದೇಶದಲ್ಲಿ ಕೊರೊನಾ ಸಂಕಷ್ಟದ ಸಮಯವಿದ್ದಾಗ ದುಬೈನಲ್ಲಿ ಐಪಿಎಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಆಗ ಬಿಜೆಪಿಯವರ ದೇಶಪ್ರೇಮ ಎಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದರು. ಬಿಜೆಪಿಯವರಲ್ಲಿ ಯಾವುದೇ ತರ್ಕಬದ್ಧ ನಿಲುವುಗಳಿಲ್ಲ. ಅವರು ಕೇವಲ ವಾಟ್ಸಾಪ್ ಯೂನಿವರ್ಸಿಟಿಯ ಸುಳ್ಳು ಮಾಹಿತಿಗಳನ್ನೇ ಬಾಯಿಪಾಠ ಮಾಡಿ ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಬಿಜೆಪಿಯವರ ಈ ದ್ವಂದ್ವ ನೀತಿಯನ್ನು ಸಮರ್ಥಿಸಿಕೊಳ್ಳಲು ಅವರ ನಾಯಕರಿಗೇ ಸಾಧ್ಯವಾಗುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ShareTweetSendShare
Join us on:

Related Posts

ಯುಪಿಐ ಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಇನ್ನು ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣ ಕಳುಹಿಸಿದರೆ ಒಂದು ಗಂಟೆ ಕಾಯಲೇಬೇಕು : ಕಿಲ್ ಸ್ವಿಚ್ ಆಯ್ಕೆ ಬಗ್ಗೆ ನಿಮ್ಗೆ ಗೊತ್ತಾ?

ಯುಪಿಐ ಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಇನ್ನು ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣ ಕಳುಹಿಸಿದರೆ ಒಂದು ಗಂಟೆ ಕಾಯಲೇಬೇಕು : ಕಿಲ್ ಸ್ವಿಚ್ ಆಯ್ಕೆ ಬಗ್ಗೆ ನಿಮ್ಗೆ ಗೊತ್ತಾ?

by Shwetha
April 11, 2026
0

ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ದೇಶದಾದ್ಯಂತ ಕ್ರಾಂತಿ ಮಾಡಿರುವ ಯುಪಿಐ ಪಾವತಿ ಕ್ರಮದಲ್ಲಿ ಶೀಘ್ರದಲ್ಲೇ ದೊಡ್ಡ ಮಟ್ಟದ ಬದಲಾವಣೆಯಾಗುವ ಸಾಧ್ಯತೆ ಇದೆ. ನೀವು ಪದೇ ಪದೇ ಹತ್ತು ಸಾವಿರ...

‘ಪಾಕ್ ವಿಶ್ವಾಸಾರ್ಹ ಮಧ್ಯಸ್ಥಿಕೆದಾರನಲ್ಲ’.. ಇಸ್ರೇಲ್ ಅನುಮಾನ

‘ಝೂಂಬಿ ಡ್ರಗ್ಸ್’ ಸುಳ್ಳು ವಿಡಿಯೋ ವೈರಲ್: ಆರೋಪಿಯ ಬಂಧನ

by Shwetha
April 11, 2026
0

‘ಝೂಂಬಿ ಡ್ರಗ್ಸ್’ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ....

ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ; ಉದ್ವಿಗ್ನತೆ ಹೆಚ್ಚಳ

ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ; ಉದ್ವಿಗ್ನತೆ ಹೆಚ್ಚಳ

by Shwetha
April 11, 2026
0

ಪಾಕಿಸ್ತಾನದಲ್ಲಿ ಇಂದು ಅಥವಾ ನಾಳೆ ನಡೆಯಬೇಕಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನ ಸಭೆ ಮುಂದೂಡಿಕೆಯಾಗಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಈ ಮಹತ್ವದ ಶಾಂತಿ ಮಾತುಕತೆ ನಡೆಯಬೇಕಾಗಿತ್ತು....

ಆಘಾತಕಾರಿ ಘಟನೆ: ತರಗತಿಯಲ್ಲೇ ಬಾಲಕಿಯ ಮೇಲೆ ಶಿಕ್ಷಕನಿಂದ ದೌರ್ಜನ್ಯ ಆರೋಪ

ಆಘಾತಕಾರಿ ಘಟನೆ: ತರಗತಿಯಲ್ಲೇ ಬಾಲಕಿಯ ಮೇಲೆ ಶಿಕ್ಷಕನಿಂದ ದೌರ್ಜನ್ಯ ಆರೋಪ

by Shwetha
April 11, 2026
0

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಅತ್ಯಂತ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕಿಯ ಮೇಲೆ ಗಣಿತ ಶಿಕ್ಷಕನೊಬ್ಬ ತರಗತಿ ಕೊಠಡಿಯಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ...

ಪಾಕ್ ಸಚಿವರ ವಿರುದ್ಧ ಇಸ್ರೇಲ್ ಕೆಂಡ; ವಿವಾದಾತ್ಮಕ ಪೋಸ್ಟ್ ಡಿಲೀಟ್

ಪಾಕ್ ಸಚಿವರ ವಿರುದ್ಧ ಇಸ್ರೇಲ್ ಕೆಂಡ; ವಿವಾದಾತ್ಮಕ ಪೋಸ್ಟ್ ಡಿಲೀಟ್

by Shwetha
April 11, 2026
0

ಇಸ್ರೇಲ್ ವಿರುದ್ಧ ಪಾಕಿಸ್ತಾನದ ಸಚಿವ ಖವಾಜಾ ನೀಡಿದ ತೀಕ್ಷ್ಣ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇಸ್ರೇಲ್ ಮಾನವಕುಲಕ್ಕೆ ಶಾಪ ಎಂದು ಹಾಗೂ ಲೆಬನಾನ್‌ನಲ್ಲಿ ನರಮೇಧ ನಡೆಸುತ್ತಿದೆ ಎಂದು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram