Mohammed Siraj – ಆಸ್ಟ್ರೇಲಿಯಾಗೆ ಸಿರಾಜ್, ಉಮ್ರಾನ್ ಮಾಲಿಕ್ !
ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾ ವೇದಿಕೆಯಾಗಿ ನಡೆಯಲಿರುವ ಟಿ 20 ವಿಶ್ವಕಪ್ ಗೆ ಟೀಂ ಇಂಡಿಯಾ ಜೊತೆಗೆ ವೇಗಿಗಳಾದ ಮೊಹ್ಮದ್ ಸಿರಾಜ್, ಉಮ್ರಾನ್ ಮಾಲಿಕ್ ಅವರು ವಿಮಾನ ಹೇರಲಿದ್ದಾರೆ.
ಟೀಂ ಇಂಡಿಯಾದ ಆಟಗಾರರು ಅಕ್ಟೋಬರ್ ಆರರಂದು ಆಸ್ಟ್ರೇಲಿಯಾಗೆ ಪಯಣ ಬೆಳಸಲಿದ್ದಾರೆ.
ಇವರ ಜೊತೆಗೆ ಸಿರಾಜ್, ಮಾಲಿಕ್ ಆಸ್ಟ್ರೇಲಿಯಾಗೆ ಹೋಗಲಿದ್ದಾರೆ ಎಂದು ಬಿಸಿಸಿಐ ಪ್ರತಿನಿಧಿ ತಿಳಿಸಿದ್ದಾರೆ.
ಬುಮ್ರಾ ಬೆನ್ನು ನೋವಿನ ಸಮಸ್ಯೆಯಿಂದ ಟಿ 20 ವಿಶ್ವಕಪ್ ಗೆ ದೂರವಾಗುವ ಅವಕಾಶಗಳಿವೆ.
ಒಂದು ವೇಳೆ ಅಲ್ಲಿಯವರೆಗೂ ಬೇರೆ ಬೌಲರ್ ಗಳು ಕೂಡ ಗಾಯಗೊಂಡರೇ ಪರಿಸ್ಥಿತಿ ದಾರುಣವಾಗಲಿದೆ.
ಅದಕ್ಕಾಗಿಯೇ ಬ್ಯಾಕಪ್ ಪ್ಲೇಯರ್ಸ್, ನೆಟ್ ಬೌಲರ್ಸ್ ಲಭ್ಯವಿರಬೇಕು ಎಂಬ ಉದ್ದೇಶದಿಂದ ಸಿರಾಜ್, ಉಮ್ರಾನ್ ಮಲಿಕ್ ಅವರನ್ನು ಆಸ್ಟ್ರೇಲಿಯಾಗೆ ಕಳುಹಿಸುತ್ತಿರುವುದಾಗಿ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಆದ್ರೆ ಬುಮ್ರಾ ಗಾಯದ ವಿಚಾರವಾಗಿ ಬಿಸಿಸಿಐ ಕ್ಲಾರಿಟಿ ಕೊಟ್ಟಿಲ್ಲ.
ಸೌತ್ ಆಫ್ರಿಕಾ ವಿರುದ್ಧ ಇನ್ನುಳಿದ ಟಿ 20 ಪಂದ್ಯಗಳಿಗೆ ಬುಮ್ರಾ ದೂರವಾಗಿದ್ದು, ಸಿರಾಜ್ ಆಯ್ಕೆ ಆಗಿದ್ದಾರೆ.+
mohammed-siraj-umran-malik-travel-australia