ಆಧುನಿಕ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿರುವ ‘ಮಾಲ್ಟೋಡೆಕ್ಸ್‌ಟ್ರಿನ್’ (Maltodextrin) ಎಂಬ ಸಂಸ್ಕರಣಾ ಅಂಶವು ಸಕ್ಕರೆಗಿಂತಲೂ ಮೂರು ಪಟ್ಟು ಹೆಚ್ಚು ಅಪಾಯಕಾರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆಹಾರವನ್ನು ಹೆಚ್ಚು ದಿನಗಳವರೆಗೆ ತಾಜಾ ಆಗಿರಿಸಲು, ರುಚಿ ಹೆಚ್ಚಿಸಲು ಮತ್ತು ತಕ್ಷಣ ಶಕ್ತಿಯನ್ನು ನೀಡುವ ಉದ್ದೇಶದಿಂದ ಈ ಅಂಶವನ್ನು ಅನೇಕ ಪ್ಯಾಕೇಜ್ಡ್ ಆಹಾರಗಳಲ್ಲಿ ಬಳಸಲಾಗುತ್ತಿದೆ.
ಮಾಲ್ಟೋಡೆಕ್ಸ್‌ಟ್ರಿನ್ ಒಂದು ಬಿಳಿ ಪುಡಿ ರೂಪದ ಕಾರ್ಬೋಹೈಡ್ರೇಟ್, ಇದು ದೇಹದಲ್ಲಿ ಬೇಗನೆ ಗ್ಲೂಕೋಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದರ ಪರಿಣಾಮವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ತ್ವರಿತವಾಗಿ ಏರಿಳಿತಗೊಳ್ಳುತ್ತದೆ. ವೈದ್ಯರ ಪ್ರಕಾರ, ಇದು ಮಧುಮೇಹ ರೋಗಿಗಳಿಗೆ ಅತ್ಯಂತ ಅಪಾಯಕಾರಿ.
ಯಾವ ಆಹಾರಗಳಲ್ಲಿ ಇದು ಹೆಚ್ಚಾಗಿ ಬಳಕೆಯಾಗುತ್ತದೆ?
ಸಿಹಿತಿಂಡಿಗಳು
ಪ್ರೋಟೀನ್ ಶೇಕ್ಸ್
ಇನ್‌ಸ್ಟಂಟ್ ಚಹಾ ಮತ್ತು ಕಾಫಿ
ಪ್ಯಾಕೇಜ್ ಮಾಡಿದ ಸೂಪ್
ಕಡಲೆಕಾಯಿ ಬೆಣ್ಣೆ (Peanut Butter)
ಆಲೂಗಡ್ಡೆ ಚಿಪ್ಸ್
ಪಾಸ್ತಾ ಮತ್ತು ಬೇಯಿಸಿದ ಆಹಾರಗಳು
ಆರೋಗ್ಯದ ಮೇಲೆ ಬೀರುವ ಪರಿಣಾಮಗಳು
ಮಾಲ್ಟೋಡೆಕ್ಸ್‌ಟ್ರಿನ್‌ನ ಅತಿಯಾದ ಸೇವನೆಯಿಂದ
ಮೂತ್ರಪಿಂಡಗಳು (Kidney) ಮೇಲೆ ಒತ್ತಡ ಹೆಚ್ಚಾಗುತ್ತದೆ
ಯಕೃತ್ತಿನ (Liver) ಕಾರ್ಯಕ್ಷಮತೆ ಕುಂಠಿತವಾಗಬಹುದು
ತೂಕ ಹೆಚ್ಚಳ, ಇನ್ಸುಲಿನ್ ಪ್ರತಿರೋಧ, ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು
ದೀರ್ಘಾವಧಿಯಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಗೂ ಕಾರಣವಾಗಬಹುದು
ವೈದ್ಯರು ಮತ್ತು ಪೌಷ್ಠಿಕ ತಜ್ಞರು ಪ್ಯಾಕೇಜ್ಡ್ ಹಾಗೂ ಪ್ರೊಸೆಸ್ಡ್ ಆಹಾರಗಳ ಲೇಬಲ್‌ಗಳನ್ನು ಗಮನದಿಂದ ಓದಲು ಸಲಹೆ ನೀಡಿದ್ದಾರೆ. ಸಾಧ್ಯವಾದಷ್ಟು ತಾಜಾ, ಮನೆಯಲ್ಲಿ ಮಾಡಿದ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳಿತು. ವಿಶೇಷವಾಗಿ ಮಧುಮೇಹ, ಕಿಡ್ನಿ ಅಥವಾ ಲಿವರ್ ಸಮಸ್ಯೆ ಇರುವವರು ಈ ಅಂಶ ಇರುವ ಆಹಾರಗಳಿಂದ ದೂರವಿರುವುದು ಉತ್ತಮ.






