ಡಿಜಿಟಲ್ ವಂಚನೆ ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು 1.4 ಲಕ್ಷಕ್ಕೂ ಅಧಿಕ ನಕಲಿ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಿದೆ.
ದೂರ ಸಂಪರ್ಕ ಇಲಾಖೆ ಹಾಗೂ ಹೆಚ್ಚು ನಕಲಿ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಲಾಗಿದೆ.
ನಕಲಿ ಸಂಖ್ಯೆಗಳನ್ನು ಬ್ಯಾಂಕಿಂಗ್ ವಂಚನೆ, ಹಣಕಾಸು ಹಗರಣಗಳು ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ಈ ನಿಟ್ಟಿನಲ್ಲಿ ಈ ಸಂಖ್ಯೆಗಳನ್ನು ನಿರ್ಬಂಧಿಸಲಾಗಿದೆ ಎನ್ನಲಾಗಿದೆ.
ಅಲ್ಲದೇ, 2023ರಲ್ಲಿ ಶೇ. 12ರಷ್ಟು ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಹೆಚ್ಚಳವಾಗಿವೆ ಎಂದು ವರದಿಯಾಗಿದೆ. 19,776 ಸಂಸ್ಥೆಗಳನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಲಾಗಿದೆ. ಅಲ್ಲದೇ, 500ಕ್ಕೂ ಅಧಿಕ ಜನರನ್ನು ಬಧಿಸಲಾಗಿದ್ದು, ಸುಮಾರು 3.08 ಲಕ್ಷ ಸಿಮ್ಗಳನ್ನು ಬ್ಲಾಕ್ ಮಾಡಲಾಗಿದೆ.