ಎಂ.ಬಿ.ಪಾಟೀಲ್ ಅವರದ್ದು ಊಳಿಗಮಾನ್ಯ ಮನಸ್ಥಿತಿ : ಎನ್.ಮಹೇಶ್
ಚಾಮರಾಜನಗರ : ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ಅವರದ್ದು ಊಳಿಗಮಾನ್ಯ ಮನಸ್ಥಿತಿ ಎಂದು ಶಾಸಕ ಎನ್.ಮಹೇಶ್ ಆಕ್ರೋಶ ಹೊರಹಾಕಿದ್ದಾರೆ.
ಮಾಜಿ ಸಚಿವ M. B ಪಾಟೀಲ್, ಸಚಿವ ಗೋವಿಂದ ಕಾರಜೋಳ ವಿರುದ್ಧ ಮೂರ್ಖ ಎಂಬ ಪದಬಳಕೆ ಮಾಡಿದ್ದರು. ಇದಕ್ಕೆ ಶಾಸಕ ಎನ್. ಮಹೇಶ್ ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಮಹೇಶ್, ದಲಿತ ಮುಖಂಡ ಗೋವಿಂದ ಕಾರಜೋಳ ರನ್ನು ಮೂರ್ಖ ಎಂದು ಕರೆದಿರುವ M. B. ಪಾಟೀಲ್ ರದು ಊಳಿಗಮಾನ್ಯ ಮನಸ್ಥಿತಿ.
ಇಂತಹ ಮನಸ್ಥಿತಿ ಹೋಗಿ ಬಹಳ ವರ್ಷಗಳಾಗಿವೆ. ಸಂವಿಧಾನದ ಆಶಯದಂತೆ MB ಪಾಟೀಲರಿಗೂ ಒಂದೇ ವೋಟು ಅವರ ಮನೆ ಕೆಲಸದವರಿಗೂ ಒಂದೇ ವೋಟು.
ಒನ್ ಮ್ಯಾನ್ ಇಸ್ ಇಕ್ವಲ್ ಟು ಒನ್ ವ್ಯಾಲ್ಯೂ ಎನ್ನುವುದನ್ನು ಮರೆಯಬಾರದು. ಇಂತಹ ಸಂದರ್ಭದಲ್ಲಿ MB ಪಾಟೀಲ್ ರು ಮೂರ್ಖ ನಾಲಾಯಕ್ ಪದವನ್ನು ಯಾರಮೇಲೂ ಬಳಸಬಾರದು ಎಂದು ಹೇಳಿದ್ದಾರೆ.