ರಾಜ್ಯಾದ್ಯಂತ ಪ್ರವಾಸ : ಪಕ್ಷ ಸಂಘಟನೆಗೆ ಮುಂದಾದ ಸಹೋದರರು
ಬೆಂಗಳೂರು : ನಾವಿಬ್ಬರೂ ರಾಜ್ಯಾದ್ಯಂತ ಪ್ರವಾಸ ಮಾಡ್ತೀವಿ. ನಾನು ಮತ್ತು ನಿಖಿಲ್ ಒಟ್ಟಾಗಿ ಸೇರಿ ಸಭೆ ಮಾಡಿ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಹೆಚ್ ಡಿ ದೇವೇಗೌಡ ಕುಟುಂಬದ ಯುವ ನಾಯಕರಾದ ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ನಡುವೆ ಮನಸ್ತಾಪವಿದೆ ಎಂಬ ಚರ್ಚೆಗೆ ಶನಿವಾರ ಸ್ವತಃ ನಿಖಿಲ್ ಮತ್ತು ಪ್ರಜ್ವಲ್ ಇಬ್ಬರೂ ಒಟ್ಟಾಗಿ ತೆರೆ ಎಳೆದಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಜೆಡಿಎಸ್ ನಾಯಕರ ಸಭೆಯಲ್ಲಿ ಯುವ ದಳಪತಿಗಳು ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಭೆಯಲ್ಲಿ ಮಾತು ಆರಂಭಿಸಿದ ನಿಖಿಲ್ ಕುಮಾರಸ್ವಾಮಿ, ಬಾ ಬ್ರದರ್ ಇಲ್ಲಿ ಎನ್ನತ್ತಾ ಸಂಸದ ಪ್ರಜ್ವಲ್ ಅವರ ಹೆಗಲ ಮೇಲೆ ಕೈ ಹಾಕಿದರು. ನಾನು ಶಿರಾದಲ್ಲಿ ಭಾಷಣ ಮಾಡುವ ವೇಳೆ ಎರಡೇ ನಿಮಿಷದಲ್ಲಿ ಮಾತು ಮುಗಿಸಬೇಕು ಎಂದು ಸಮಯ ನಿಗದಿ ಮಾಡಿದ್ರು.
ಹಾಗಾಗಿ ಪ್ರಜ್ವಲ್ ಹೆಸರನ್ನು ಹೇಳಲು ಆಗಲಿರಲಿಲ್ಲ. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಯ್ತು. ಆದ್ರೆ ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ನಿಖಿಲ್ ಅವರ ಮಾತಿಗೆ ದನಿಗೂಡಿಸಿದ ಪ್ರಜ್ವಲ್, ಅಂದಿನ ಸಮಾರಂಭದಲ್ಲಿ ನಾನು ವೇದಿಕೆಯಿಂದ ನಿರ್ಗಮಿಸಿದ್ದಕ್ಕೆ ಕೆಲವರು ಏನೇನೋ ಅರ್ಥ ಕಲ್ಪಿಸಿದ್ದರು. ಸೋತವರಿಗೆ ಸಚಿವ ಸ್ಥಾನ ಕೊಡುವುದು ಬೇಡ : ರಾಜುಗೌಡ
ಆದ್ರೆ ಅಂದು ಚುನಾವಣೆ ಪ್ರಚಾರದ ಕೊನೇ ದಿನವಾದ ಹಿನ್ನೆಲೆ ಮೂರ್ನಾಲ್ಕು ಗ್ರಾಮಗಳ ಪ್ರಚಾರಕ್ಕೆ 5 ಗಂಟೆಯೊಳಗೆ ಹೋಗಬೇಕಿತ್ತು. ಹೀಗಾಗಿ ನಾನು ಸಮಾರಂಭದಿಂದ ಎದ್ದು ಹೋದೆ.
ನನ್ನ ಮತ್ತು ನಿಖಿಲ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎನ್ನುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದರು. ಉಮಾಶ್ರೀ ಕಾರು ಅಪಘಾತ ಪ್ರಕರಣ: ಗಾಯಗೊಂಡಿದ್ದ ವೈದ್ಯೆ ಸಾವು
ಮುಂದುವರಿದು ಮಾತನಾಡಿದ ಪ್ರಜ್ವಲ್, ನಾವಿಬ್ಬರೂ ಸೇರಿ ರಾಜ್ಯಾದ್ಯಂತ ಪ್ರವಾಸ ಮಾಡ್ತೀವಿ. ಪಕ್ಷಕ್ಕೆ ಯುವಕರನ್ನು ಸೆಳೆಯಬೇಕಾದರೆ ನಮ್ಮ ಪಕ್ಷ ಯುವಕರಿಗೆ ಮೀಸಲಾತಿ ಕೊಡ್ತೀವಿ ಎಂದು ಘೋಷಣೆ ಮಾಡಬೇಕು.
ಇನ್ನು ಮುಂದಿನ ದಿನಗಳಲ್ಲಿ ನಿಖಿಲ್ ನಾನು ರಾಜ್ಯದಾದ್ಯಂತ ಪ್ರವಾಸ ಮಾಡ್ತೀವಿ. ಇಬ್ಬರೂ ಒಟ್ಟಾಗಿ ಸೇರಿ ಸಭೆ ಮಾಡಿ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡ್ತೀವಿ.
ಪಕ್ಷದ ನಿಷ್ಠಾವಂತರಿಗೆ ಅವಕಾಶ ಕೊಟ್ಟು, ಪಕ್ಷವನ್ನು ಪುನರ್ ಸಂಘಟನೆ ಮಾಡಬೇಕಿದೆ. ಕುಮಾರಣ್ಣ ಮತ್ತೆ ಸಿಎಂ ಆಗ್ತಾರೆ, ನಾವೆಲ್ಲ ಒಟ್ಟಿಗೆ ಹೋದ್ರೆ ಮುಂದಿನ ಬಾರಿ 150 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










