ಇರಾನ್-ಅಮೆರಿಕಾ ನಡುವೆ ಕದನವಿರಾಮಕ್ಕೆ ನಾವು ಕಾರಣ ಎಂಬಂತೆ ಪಾಕಿಸ್ತಾನ ಹೇಳಿಕೊಳ್ಳುತ್ತಿರುವ ಹಿನ್ನೆಲೆ, ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೂವೆನ್ ಅಜರ್ ಪಾಕ್ನ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಸಂಶಯ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನವು ನಂಬಿಕೆಗೆ ಅರ್ಹವಾದ ಮಧ್ಯಸ್ಥಿಕೆದಾರನಲ್ಲ ಎಂದು ಸ್ಪಷ್ಟವಾಗಿ ಹೇಳಿದ ಅವರು, ಯುನೈಟೆಡ್ ಸ್ಟೇಟ್ಸ್ ತನ್ನದೇ ತಂತ್ರಾತ್ಮಕ ಕಾರಣಗಳಿಂದ ಪಾಕಿಸ್ತಾನವನ್ನು ಈ ವಿಚಾರದಲ್ಲಿ ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಅವರು ಉದಾಹರಣೆ ನೀಡುತ್ತಾ, “ಈ ಹಿಂದೆ ಹಮಾಸ್ ಜೊತೆ ಒಪ್ಪಂದಕ್ಕಾಗಿ ಕತಾರ್ ಮತ್ತು ಟರ್ಕಿ ದೇಶಗಳನ್ನು ಅಮೆರಿಕಾ ಹೇಗೆ ಬಳಸಿಕೊಂಡಿತ್ತು ಎಂಬುದು ಗೊತ್ತೇ ಇದೆ ಎಂದು ಹೇಳಿದ್ದಾರೆ.
ಈ ಹೇಳಿಕೆಗಳು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.







