Pakistan vs Bangladesh: ಸೆಮಿಪೈನಲ್ ಗೆ ಏರಲು ಪಾಕ್ ಗೆ ಅವಕಾಶ…
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಭಾನುವಾರ ಎರಡನೇ ಪಂದ್ಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿದೆ.
ಅಡಿಲೇಡ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು. ತಂಡದ ಆರಂಭಿಕ ಆಟಗಾರ ನಜ್ಮುಲ್ ಹೊಸೈನ್ ಶಾಂಟೊ (54) ಅರ್ಧಶತಕ ಗಳಿಸಿದರು. ಅದರ ಹೊರತಾಗಿಯೂ, ತಂಡವ ಕಡಿಮೆ ಮೊತ್ತಕ್ಕೆ ಕುಸಿದು ಬಿದ್ದಿತು.
ಅಫೀಫ್ ಹೊಸೈನ್ (24) ಮತ್ತು ಸೌಮ್ಯ ಸರ್ಕಾರ್ (20) ಮಾತ್ರ ಒಂದಿಷ್ಟು ರನ್ ಪೇರಿಸಿದರು. ಉಳಿದ ಬ್ಯಾಟ್ಸ್ಮನ್ಗಳು 10 ರ ಗಡಿ ದಾಟಲು ಸಾಧ್ಯವಾಗಲಿಲ್ಲ.
ಬೌಲಿಂಗ್ ನಲ್ಲಿ ಪಾಕ್ ಪರ ಶಾಹೀನ್ ಶಾ ಆಫ್ರಿದಿ 4 ವಿಕೆಟ್ ಪಡೆದು ಮಿಂಚಿದರು. ಶಾದಾಬ್ ಖಾನ್ 2 ವಿಕೆಟ್ ಹ್ಯಾರಿಸ್ ರೌಫ್ ಮತ್ತು ಇಫ್ತಿಕರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೆ ಪ್ರತ್ಯೂತ್ತರವಾಗಿ ಪಾಕಿಸ್ತಾನ 14 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತು. ಮೊಹಮ್ಮದ್ ನವಾಜ್ ಮತ್ತು ಮೊಹಮ್ಮದ್ ಹ್ಯಾರಿಸ್ ಕ್ರೀಸ್ನಲ್ಲಿದ್ದಾರೆ.
ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್ ಪ್ರವೇಶಿಸಲಿದೆ. ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ ಸೋತ ನಂತರ ಗ್ರೂಪ್ -2 ಸಮೀಕರಣ ರೋಚಕವಾಗಿದೆ. ಭಾರತ ಜಿಂಬಾಬ್ವೆ ವಿರುದ್ಧ ಪಂದ್ಯಕ್ಕೂ ಮುನ್ನವೆ ಸೆಮಿಫೈನಲ್ ಪ್ರವೇಶಿಸಿದೆ.
ಪ್ರಸ್ತುತ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಲಾ 4 ಅಂಕಗಳನ್ನು ಹೊಂದಿವೆ. ವಿಜೇತ ತಂಡವು 6 ಅಂಕಗಳನ್ನು ಪಡೆದು ಸೆಮಿಫೈನಲ್ಗೆ ಪ್ರವೇಶಿಸಲಿದೆ.
Pakistan vs Bangladesh: A chance for Pakistan to advance to the semi-finals…







