ಕೊಲ್ಕತ್ತಾ: ಕರ್ತವ್ಯದಲ್ಲಿದ್ದ ನರ್ಸ್ ಖಾಸಗಿ ಅಂಗ ಮುಟ್ಟಿ ರೋಗಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬಂಗಾಳದ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಆರ್.ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣದ ತನಿಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಂಗಾಳದ (Bengal) ಬಿರ್ಭಮ್ನ ಇಲಂಬಜರ್ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆಸಿದೆ. ನರ್ಸ್ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ರೋಗಿಯೊಬ್ಬ ಈ ರೀತಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ವೈದ್ಯರ ಸೂಚನೆಯಂತೆ ನಾನು ಚಿಕಿತ್ಸೆ ನೀಡುತ್ತಿದೆ. ಆಗ ರೋಗಿಯು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ನನ್ನ ಖಾಸಗಿ ಅಂಗಗಳನ್ನು ಮುಟ್ಟಿ ಕಿರುಕುಳ ನೀಡುವ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ನರ್ಸ್ ಆರೋಪಿಸಿದ್ದಾರೆ. ಈ ವೇಳೆ ರೋಗಿಯ ಕುಟುಂಬಸ್ಥರು ಕೂಡ ಜೊತೆಗೆ ಇದ್ದರು ಎಂದು ಆರೋಪಿಸಿದ್ದಾರೆ.







