ಖಡಕ್ ಟೈಟಲ್, ಕಿಚ್ಚನ ವಿಕ್ರಾಂತ್ ರೋಣ ಕ್ಯಾರೆಕ್ಟರ್ ಮತ್ತು ಲುಕ್ಕಿನಿಂದ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸಿನಿಮಾ ಫ್ಯಾಂಟಮ್. ಚಿತ್ರದ ಟೈಟಲ್ ನಿಂದಲೇ ಒಂದು ರೇಂಜಿನ ಕುತೂಹಲ ಕೆರಳಿಸಿರೋ ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಕೀ ರೋಲ್ ಪ್ಲೇ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಸುದೀಪ್ ಲಾಕ್ ಡೌನ್ ಟೈಮಲ್ಲಿ ಮನೆಯಲ್ಲೇ ವರ್ಕ್ ಔಟ್ ಮಾಡಿ ವಿಕ್ರಾಂತ್ ರೋಣ ಪಾತ್ರಕ್ಕಾಗಿ ದೇಹ ಹುರಿಗೊಳಿಸಿಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳು ವಿಕ್ರಾಂತ್ ರೋಣ ಆರ್ಭಟ ನೋಡೋಕ್ಕೆ ಕಾಯ್ತಿದ್ದಾರೆ.
ಈಗಾಗಲೇ ದೇವನಹಳ್ಳಿ ಬಳಿ ಸೆಟ್ ಹಾಕಿ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಮಾಡಿದ್ದ ಚಿತ್ರತಂಡ ಸೆಕೆಂಡ್ ಶೆಡ್ಯೂಲ್ ಗೆ ಪ್ಲಾನ್ ಮಾಡ್ತಿದೆ. ಕೊರೊನಾ ಕಾಟದ ಮಧ್ಯೆಯೂ ಫ್ಯಾಂಟಮ್ ಟೀಂ 150 ಜನ ಕಾರ್ಮಿಕರನ್ನ ಬಳಸಿಕೊಂಡು ಹೈದ್ರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಗಳನ್ನ ನಿರ್ಮಾಣ ಮಾಡ್ತಿದೆ. ಕೆಜಿಎಫ್ ಖ್ಯಾತಿಯ ಆರ್ಟ್ ಡೈರೆಕ್ಟರ್ ಶಿವಕುಮಾರ್ ಫ್ಯಾಂಟಮ್ ಗಾಗಿ ಹೊಸ ಲೋಕವನ್ನೇ ಸೃಷ್ಟಿಸುತ್ತಿದ್ದಾರೆ.
ಅಂದಹಾಗೆ ಈ ಸೆಟ್ ನಿರ್ಮಾಣಕ್ಕಾಗಿ ರಾಜಮಂಡ್ರಿಯಿಂದ ಲಾರಿಗಳಲ್ಲಿ ಲಕ್ಷ ಲಕ್ಷ ಗಿಡ-ಮರಗಳನ್ನ ತರಲಾಗಿತ್ತು. ಅಷ್ಟರಲ್ಲಿ ದೇಶಕ್ಕೆ ಕೊರೊನಾ ವಕ್ಕರಿಸಿದ ಕಾರಣ ಲಾಕ್ ಡೌನ್ ಜಾರಿಯಾಯ್ತು. ಇದೀಗ ತೆಲಂಗಾಣದಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ್ದು, ಫ್ಯಾಂಟಮ್ ಚಿತ್ರಕ್ಕಾಗಿ ಕಾಡಿನ ಸೆಟ್ ಹಾಕುವ ಕೆಲಸ ನಡೀತಿದೆ. ಇನ್ನೊಂದು ವಾರದಲ್ಲಿ ಫ್ಯಾಂಟಮ್ ಚಿತ್ರದ ಸೆಟ್ ಸಂಪೂರ್ಣವಾಗಿ ನಿರ್ಮಾಣವಾಗಲಿದೆ. ಶೀಘ್ರದಲ್ಲೇ ಸುದೀಪ್ ಅಂಡ್ ಟೀಂ ಶೂಟಿಂಗ್ ಗಾಗಿ ಹೈದರಾಬಾದ್ ಗೆ ತೆರಳಲಿದೆ.