ಕೋವಿಡ್ ನಿಯಂತ್ರಣಕ್ಕೆ ಪ್ರಧಾನಿ ಸೂಚನೆ ನೀಡಿದ್ದಾರೆ – ಸಚಿವ ಡಾ.ಕೆ. ಸುಧಾಕರ್
ಪ್ರಧಾನಿ ನರೆಂದ್ರ ಮೋದಿಯವರ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, “ದೇಶದ 6 ಲಕ್ಷ ಸಕ್ರಿಯ ಕೊರೊನಾ ಪ್ರಕರಣದಲ್ಲಿ ಶೇ.80 ರಷ್ಟು ಪ್ರಕರಣ ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಇದೆ. ಈ ರಾಜ್ಯಗಳಲ್ಲಿ ನಿಯಂತ್ರಣ ಸಾಧಿಸಿದರೆ ಇಡೀ ದೇಶದಲ್ಲಿ ನಿಯಂತ್ರಣ ತರಬಹುದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಸೋಂಕಿತರು ಪತ್ತೆಯಾದ 72 ಗಂಟೆಯೊಳಗೆ ಸಂಪರ್ಕಿತರನ್ನು ಪತ್ತೆ ಮಾಡಬೇಕು ಎಂದೂ ಅವರು ಸೂಚಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಮುಖ್ಯಮಂತ್ರಿಗಳು ಕೂಡ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಕೋವಿಡ್ ಅಲ್ಲದೆ, ಮುಂದೆ ಯಾವುದೇ ಸಾಂಕ್ರಮಿಕ ರೋಗ ಬಂದಾಗಲೂ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರ ಕೊರತೆ ನೀಗಿಸಬೇಕು ಎಂದು ಕೋರಲಾಗಿದೆ” ಎಂದರು.
ಇಡೀ ರಾಜ್ಯದಲ್ಲಿ ಬೂತ್ ಮಟ್ಟದ ಕಾರ್ಯಪಡೆ ಆರಂಭಿಸಿ ಅವರಿಗೆ ವಿವಿಧ ಜವಾಬ್ದಾರಿ ನೀಡಲಾಗಿದೆ. ಅವರ ಮೂಲಕ ಕ್ವಾರಂಟೈನ್ ಮಾಡುವುದು, ಅರಿವು ಮೂಡಿಸುವುದು, ಮನೆ ಸಮೀಕ್ಷೆ ಮೊದಲಾದ ಕಾರ್ಯ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ 8,154 ಕಾರ್ಯಪಡೆ ರಚಿಸಲಾಗಿದೆ. ಕೊರೊನಾ ಮರಣ ಪ್ರಮಾಣವು ರಾಜ್ಯದಲ್ಲಿ ಶೇ.1.8 ಹಾಗೂ ಬೆಂಗಳೂರಿನಲ್ಲಿ ಶೇ.1.7 ಇದೆ ಎಂದು ವಿವರಿಸಲಾಗಿದೆ” ಎಂದು ತಿಳಿಸಿದರು.