ADVERTISEMENT
Wednesday, April 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಪ್ರಣಬ್ ಮುಖರ್ಜಿ- ಗುಮಾಸ್ತನಿಂದ ದೇಶದ ಮೊದಲ ಪ್ರಜೆಯ ವರೆಗಿನ ಸಾರ್ಥಕ ಜೀವನ

admin by admin
August 31, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಪ್ರಣಬ್ ಮುಖರ್ಜಿ- ಗುಮಾಸ್ತನಿಂದ ದೇಶದ ಮೊದಲ ಪ್ರಜೆಯ ವರೆಗಿನ ಸಾರ್ಥಕ ಜೀವನ

ಹೊಸದಿಲ್ಲಿ, ಅಗಸ್ಟ್31:  ದೇಶಕ್ಕೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಪ್ರಣಬ್ ದಾ ಇನ್ನಿಲ್ಲ. ನವ ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ 84 ವರ್ಷದ ಪ್ರಣಬ್ ದಾ ಕೊನೆಯುಸಿರೆಳೆದಿದ್ದಾರೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಮೊದಲು ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಆ ಬಳಿಕ ಅವರ ಆರೋಗ್ಯ ಗಂಭೀರವಾಗಿಯೇ ಮುಂದುವರಿದಿದ್ದು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ‌ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.

Related posts

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

April 1, 2026
ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

April 1, 2026

ದಶಕಗಳವರೆಗೆ ನಿಸ್ವಾರ್ಥ ಮತ್ತು ದಣಿವರಿಯದ ಸೇವೆ ಸಲ್ಲಿಸಿದ ಮುಖರ್ಜಿ 2012ರಿಂದ 2017 ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಪ್ರಧಾನಿ ಪದವಿಯನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ್ದಾರೆ.
ಪಶ್ಚಿಮ ಬಂಗಾಳದ ಮೀರತಿಯಲ್ಲಿ 1935ರ ಡಿಸೆಂಬರ್ 11ರಂದು ಜನಿಸಿದ ಮುಖರ್ಜಿ ತಮ್ಮ ವೃತ್ತಿಜೀವನವನ್ನು ಕಲ್ಕತ್ತಾದ ಡೆಪ್ಯೂಟಿ ಅಕೌಂಟೆಂಟ್-ಜನರಲ್ (ಪೋಸ್ಟ್ ಮತ್ತು ಟೆಲಿಗ್ರಾಫ್) ಕಚೇರಿಯಲ್ಲಿ ಉನ್ನತ ವಿಭಾಗದ ಗುಮಾಸ್ತರಾಗಿ ಪ್ರಾರಂಭಿಸಿದರು. 1963 ರಲ್ಲಿ, ಅವರು ಕೋಲ್ಕತ್ತಾದ ವಿದ್ಯಾನಗರ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನದ ಉಪನ್ಯಾಸಕರು (ಸಹಾಯಕ ಪ್ರಾಧ್ಯಾಪಕರು) ಆದರು ನಂತರ ಬಂಗಾಲಿ ಭಾಷೆಯ ಒಂದು ಮಾಸಪತ್ರಿಕೆಗೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. 1969 ರಲ್ಲಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಗಮನಸೆಳೆದ ಮುಖರ್ಜಿ ಕಾಂಗ್ರೆಸ್ ಟಿಕೆಟ್‌ನಲ್ಲಿ ರಾಜ್ಯಸಭೆ ಮೂಲಕ ಭಾರತೀಯ ಸಂಸತ್ತಿನಲ್ಲಿ ಪ್ರವೇಶಿಸಿದ್ದರು. ಸಕ್ರಿಯ ರಾಜಕಾರಣದ ಕೆಲವೇ ಸಮಯದಲ್ಲಿ ಶ್ರೀಮತಿ ಗಾಂಧಿಯವರ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿ 1973 ರಲ್ಲಿ ಅವರ ಸಂಪುಟದಲ್ಲಿ ಸಚಿವರಾದರು.ಮುಂದೆ 1975, 1981, 1993 ಮತ್ತು 1999 ರಲ್ಲಿ ಹಲವು ಬಾರಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾದರು.

1984 ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯ ಹತ್ಯೆಯ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅನನುಭವಿ ರಾಜೀವ್ ಗಾಂಧಿಯನ್ನು ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತ್ತು. 1984 ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯ ಹತ್ಯೆಯ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅನನುಭವಿ ರಾಜೀವ್ ಗಾಂಧಿಯನ್ನು ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತ್ತು. ಅದೇಕೋ ಅನುಭವಿ ಮತ್ತು ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದ ಅರಿತ ಮುಖರ್ಜಿ, ಕಾಂಗ್ರೆಸ್ ನಿಂದ ದೂರ ಸರಿದು ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಅನ್ನು ಹುಟ್ಟುಹಾಕಿದರು. ಆದರೆ ರಾಜಕಾರಣದ ತಳಮಟ್ಟ ತಿಳಿಯದಿದ್ದ ಮುಖರ್ಜಿ 1989 ರಲ್ಲಿ ತನ್ನ ಪಕ್ಷವನ್ನು ಕಾಂಗ್ರೆಸ್ಸಿನೊಂದಿಗೆ ವಿಲೀನಗೊಳಿಸಿದರು.

ರಾಜೀವ್ ಗಾಂಧಿಯವರ ಹತ್ಯೆಯ ನಂತರ ಅಂದಿನ ಪ್ರಧಾನಿ , ಪಿ.ವಿ. ನರಸಿಂಹ ರಾವ್, ಪ್ರಣಬ್ ಮುಖರ್ಜಿಗೆ ಯೋಜನಾ ಆಯೋಗ (1991) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (1995) ಜವಾಬ್ದಾರಿಯನ್ನು ನೀಡಿದರು . ಮುಂದೆ ಅವರು ಸೋನಿಯಾ ಗಾಂಧಿಯನ್ನು ರಾಜಕೀಯ ಪ್ರವೇಶಕ್ಕೆ ಬಲವಾಗಿ ಬೆಂಬಲಿಸಿದರು. ದೇಶದ ರಾಜಕಾರಣದಿಂದ ಹಿಂದೆ ಸರಿದಿದ್ದ ಸೋನಿಯಾ 1998 ರಲ್ಲಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡಾಗ ಅವರಿಗೆ ಮಾರ್ಗದರ್ಶನ ನೀಡಿದರು. ಮುಖರ್ಜಿ ಯುಪಿಎ ಅಧಿಕಾರಕ್ಕೆ ಬಂದಾಗ 2004 ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. ಕೌಶಲ್ಯಪೂರ್ಣ ಆಡಳಿತಗಾರ ಮತ್ತು ಸಕ್ರಿಯ ರಾಜಕಾರಣಿಯಾಗಿ, ಮುಖರ್ಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಕ್ಯಾಬಿನೆಟ್ ಸಭೆಗಳ ಅಧ್ಯಕ್ಷತೆ ವಹಿಸುತ್ತಿದ್ದರು.
ವಿವಾದಾತ್ಮಕ ಇಂಡೋ-ಯುಎಸ್ ಪರಮಾಣು ಒಪ್ಪಂದ – 123 ಒಪ್ಪಂದ ಮತ್ತು ಪರಮಾಣು ಸರಬರಾಜುದಾರರ ಗುಂಪಿನಿಂದ ಭಾರತಕ್ಕೆ ವಿನಾಯಿತಿ ಗಳಿಸುವಲ್ಲಿ ಮುಖರ್ಜಿ ನಿರ್ಣಾಯಕ ಪಾತ್ರ ವಹಿಸಿದ್ದರು. 2012 ರಿಂದ 2017 ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರಿಗೆ ಸರಕಾರ 2008 ರಲ್ಲಿ ಪದ್ಮವಿಭೂಷಣ್ ಮತ್ತು 2019 ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಒಟ್ಟಿನಲ್ಲಿ ಗುಮಾಸ್ತನಿಂದ ಶುರು ಆದ ಬದುಕಿನ ಪ್ರಯಾಣ ದೇಶದ ಅಧ್ಯಕ್ಷ ಗಾದಿಯವರೆಗೆ ನಡೆದು ಬಂದ ರಾಜಕೀಯ ಪಯಣ … ಕೊನೆಗೊಂಡಿದೆ

Tags: Army Research and Referral Hospital in New DelhiFormer President Pranab MukherjeeFormer President Pranab Mukherjee no moreGreat leaderindiapranab mukherji
ShareTweetSendShare
Join us on:

Related Posts

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

by Shwetha
April 1, 2026
0

ಭಾರೀ ನಿರೀಕ್ಷೆ ಮೂಡಿಸಿರುವ ರಾಮಾಯಣ ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್ ಹೊರಬಿದ್ದಿದೆ. ಯಶ್ ಮತ್ತು ರಣಬೀರ್ ಕಪೂರ್ ನಟನೆಯ ಈ ಸಿನಿಮಾದ ಟೀಸರ್ ಇದೇ ಏಪ್ರಿಲ್ 2ರಂದು,...

ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

by Shwetha
April 1, 2026
0

ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ದಿನದಿಂದ ದಿನಕ್ಕೆ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದೆ. ಚಹಾ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್ ಗಳವರೆಗೆ ಎಲ್ಲರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ...

ಅಚ್ಛೇ ದಿನ ಹೋಗಿ ಕಚ್ಚಾ ದಿನ ಬಂದಿದೆ ಕೇಂದ್ರ ಸರ್ಕಾರದಿಂದ ಜನರಿಗೆ ಸೌದೆ ಭಾಗ್ಯ ಬೆಲೆ ಏರಿಕೆ ವಿರುದ್ಧ ಬಿಜೆಪಿ ಮೇಲೆ ಡಿ ಕೆ ಶಿವಕುಮಾರ್ ತೀವ್ರ ವಾಗ್ದಾಳಿ

ಅಚ್ಛೇ ದಿನ ಹೋಗಿ ಕಚ್ಚಾ ದಿನ ಬಂದಿದೆ ಕೇಂದ್ರ ಸರ್ಕಾರದಿಂದ ಜನರಿಗೆ ಸೌದೆ ಭಾಗ್ಯ ಬೆಲೆ ಏರಿಕೆ ವಿರುದ್ಧ ಬಿಜೆಪಿ ಮೇಲೆ ಡಿ ಕೆ ಶಿವಕುಮಾರ್ ತೀವ್ರ ವಾಗ್ದಾಳಿ

by Shwetha
April 1, 2026
0

ಬೆಂಗಳೂರು: ಜಾಗತಿಕ ಯುದ್ಧಗಳ ನೆಪ ಹೇಳಿಕೊಂಡು ದೇಶದಲ್ಲಿ ಮಿತಿಮೀರುತ್ತಿರುವ ಬೆಲೆ ಏರಿಕೆಯನ್ನು ಮರೆಮಾಚುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ...

ಏಪ್ರಿಲ್ 1ರಿಂದ ದುಬಾರಿ ಜೀವನ; ವಿದ್ಯುತ್, ಟೋಲ್, ನೀರಿನ ದರ ಏರಿಕೆ

ಏಪ್ರಿಲ್ 1ರಿಂದ ದುಬಾರಿ ಜೀವನ; ವಿದ್ಯುತ್, ಟೋಲ್, ನೀರಿನ ದರ ಏರಿಕೆ

by Shwetha
April 1, 2026
0

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದ್ದು, ಜನರ ಜೀವನ ವೆಚ್ಚದಲ್ಲೂ ಏರಿಕೆ ಕಾಣಲಿದೆ. ಏಪ್ರಿಲ್ 1ರಿಂದಲೇ ವಿದ್ಯುತ್, ಟೋಲ್ ಹಾಗೂ ಬೆಂಗಳೂರಿನ ನೀರಿನ ದರ ಹೆಚ್ಚಳವಾಗುತ್ತಿದ್ದು, ಇದು...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (01-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 1, 2026
0

ದಿನ ಭವಿಷ್ಯ: 01-04-2026 1. ಮೇಷ ರಾಶಿ ಇಂದು ನಿಮಗೆ ಅತ್ಯಂತ ಉತ್ಸಾಹಭರಿತ ದಿನವಾಗಲಿದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗುತ್ತದೆ ಹಾಗೂ ಮೇಲಧಿಕಾರಿಗಳ ವಿಶ್ವಾಸ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram