ಭಾರತ ಪ್ರವಾಸಕ್ಕೆ ಬರುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭದ್ರತಾ ವ್ಯವಸ್ಥೆಯ ಬಗ್ಗೆ ಈಗ ಜಾಗತಿಕ ಮಟ್ಟದಲ್ಲೇ ಚರ್ಚೆ ಶುರುವಾಗಿದೆ. ಸಾಮಾನ್ಯ ರಾಷ್ಟ್ರಾಧ್ಯಕ್ಷರಿಗೆ ನೀಡುವ ಭದ್ರತೆಗಿಂತಲೂ 5 ಮಟ್ಟ ಹೆಚ್ಚಿಸಿರುವ ‘ಫೈವ್-ಲೆವಲ್ ಸೆಕ್ಯುರಿಟಿ’ ಪುಟಿನ್ ಅವರಿಗೆ ಜಾರಿಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಭದ್ರತೆಯಲ್ಲಿ ಒಂದು ನಿಯಮ ಅತ್ಯಂತ ವಿಚಿತ್ರವಾಗಿ ಕಾಣಿಸಿಕೊಂಡಿದೆ. ಪುಟಿನ್ ಅವರು ಭಾರತದಲ್ಲಿ ತಂಗಿರುವ ಸಮಯದಲ್ಲಿ ಮಾಡಿದ ಮಲ ಹಾಗೂ ಮೂತ್ರವನ್ನು ವಿಶೇಷ ಸೂಟ್ಕೇಸ್ನಲ್ಲಿ ಸಂಗ್ರಹಿಸಿ ರಷ್ಯಾಕ್ಕೆ ವಾಪಸ್ ಕಳುಹಿಸಲಾಗುತ್ತದೆ.
ಈ ಕ್ರಮಕ್ಕೆ ಹಲವು ಕಾರಣಗಳಿವೆ. ಪುಟಿನ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ರಾಷ್ಟ್ರ, ಗುಪ್ತಚರ ಸಂಸ್ಥೆ ಅಥವಾ ವೈದ್ಯಕೀಯ ತಂಡ ಮಾಹಿತಿ ಕಲೆಹಾಕಬಾರದು.
ಯಾವುದೇ ವಿಧದ ಡಿಎನ್ಎ ಅನಾಲಿಸಿಸ್, ಹಾರ್ಮೋನ್ ಪರೀಕ್ಷೆ ಅಥವಾ ಆರೋಗ್ಯ ಸಂಬಂಧಿತ ಸುಳಿವು ವಿದೇಶಿ ಸಂಸ್ಥೆಗಳ ಕೈಗೆ ಸಿಗಬಾರದು ಎಂದು ರಷ್ಯಾ ಸರ್ಕಾರ ಕಠೋರ ನಿಯಮವನ್ನು ಜಾರಿ ಮಾಡಿದೆ.
ಈ ಪ್ರಕ್ರಿಯೆಗೆ ಬಳಸುವ ಹೈ-ಸಿಕ್ಯುರಿಟಿ ‘ಬಯೋ–ಕಲೆಕ್ಷನ್’ ಸೂಟ್ಕೇಸ್ ಕೂಡಾ ಪುಟಿನ್ ಜೊತೆಗೇ ವಿಶೇಷ ಭದ್ರತಾ ತಂಡದ ಮೂಲಕ ವಿಶ್ವಪ್ರಯಾಣ ಮಾಡುತ್ತದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಲಾಸ್ಕಾದಲ್ಲಿ ಭೇಟಿಯಾದಾಗಲೂ ಇದೇ ರೀತಿಯ ವಿಧಾನ ಅನುಸರಿಸಲಾಗಿತ್ತು. ಜಗತ್ತಿನಲ್ಲಿ ಅತಿ ಹೆಚ್ಚು ರಹಸ್ಯ ಹಾಗೂ ಕಟ್ಟುನಿಟ್ಟಿನ ಭದ್ರತೆ ಹೊಂದಿರುವ ರಾಷ್ಟ್ರಾಧ್ಯಕ್ಷರಲ್ಲಿ ಪುಟಿನ್ ಪ್ರಮುಖರು ಎಂದು ಈ ಕ್ರಮವು ಮತ್ತೊಮ್ಮೆ ತೋರಿಸಿದೆ.
ಪುಟಿನ್ ಅವರ ಭಾರತ ಪ್ರವಾಸಕ್ಕೆ ಆಗಮಿಸುತ್ತಿರುವಾಗ ಅತೀ-ಕಠಿಣ ಭದ್ರತೆ ಈಗ ರಾಜತಾಂತ್ರಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.








