ADVERTISEMENT
Sunday, February 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

Shwetha by Shwetha
February 22, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಅಧಿಕಾರ ಹಂಚಿಕೆಯ ಕಿತ್ತಾಟ ತಾರಕಕ್ಕೇರಿರುವಾಗಲೇ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಒಂದು ‘ಬ್ರೇಕ್ ಫಾಸ್ಟ್ ಮೀಟಿಂಗ್’ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಎಂದೇ ಗುರುತಿಸಿಕೊಂಡಿರುವ ಕೆ.ಎನ್. ರಾಜಣ್ಣ ಮತ್ತು ಕೇಂದ್ರ ಸಚಿವ, ಬಿಜೆಪಿಯ ಪ್ರಭಾವಿ ನಾಯಕ ವಿ. ಸೋಮಣ್ಣ ಅವರ ದಿಢೀರ್ ಭೇಟಿ ಕಾಂಗ್ರೆಸ್ ಹೈಕಮಾಂಡ್ ನಿದ್ದೆಗೆಡಿಸಿದೆ.

ಸಿದ್ದು ಆಪ್ತನ ನಡೆ, ಹೈಕಮಾಂಡ್ ಕಡೆ!

Related posts

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

February 22, 2026
ಸುಪ್ರೀಂ ಕೋರ್ಟ್ ಏಟಿನ ಬೆನ್ನಲ್ಲೇ ಎಚ್ಚೆತ್ತ ಟ್ರಂಪ್ – ಅಮೆರಿಕದ ಟ್ಯಾರಿಫ್ ಕದನದಲ್ಲಿ ಭಾರತಕ್ಕೆ ಬೃಹತ್ ಜಯ;ಸುಂಕ ಶೇ.10ಕ್ಕೆ ಇಳಿಕೆ

ಸುಪ್ರೀಂ ಕೋರ್ಟ್ ಏಟಿನ ಬೆನ್ನಲ್ಲೇ ಎಚ್ಚೆತ್ತ ಟ್ರಂಪ್ – ಅಮೆರಿಕದ ಟ್ಯಾರಿಫ್ ಕದನದಲ್ಲಿ ಭಾರತಕ್ಕೆ ಬೃಹತ್ ಜಯ;ಸುಂಕ ಶೇ.10ಕ್ಕೆ ಇಳಿಕೆ

February 22, 2026

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಕ್ಷಣಾ ಕವಚದಂತೆ ವರ್ತಿಸುವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರೋಧಿ ಬಣದ ಪ್ರಮುಖ ಧ್ವನಿಯಾಗಿರುವ ಕೆ.ಎನ್. ರಾಜಣ್ಣ, ಬಹಳ ದಿನಗಳ ನಂತರ ದೆಹಲಿಗೆ ಬಂದಿಳಿದಿದ್ದಾರೆ. ಮೇಲ್ನೋಟಕ್ಕೆ ಸ್ನೇಹಿತರೊಬ್ಬರ ಮೊಮ್ಮಗನ ಮದುವೆ ನೆಪವಿದ್ದರೂ, ಅಸಲಿ ಉದ್ದೇಶ ಮಾತ್ರ ರಾಜಕೀಯ ಲಾಬಿ ಎಂಬುದು ಗುಟ್ಟಾಗಿ ಉಳಿದಿಲ್ಲ. ಈ ಭೇಟಿಯ ನಡುವೆಯೇ ಅವರು ಕೇಂದ್ರ ಸಚಿವ ವಿ. ಸೋಮಣ್ಣ ಅವರೊಂದಿಗೆ ಉಪಾಹಾರ ಸೇವಿಸುತ್ತಾ ಮಾತುಕತೆ ನಡೆಸಿರುವುದು, ರಾಜಣ್ಣ ‘ಕೈ’ ಬಿಟ್ಟು ‘ಕಮಲ’ದತ್ತ ಮುಖಮಾಡುತ್ತಿದ್ದಾರೆಯೇ ಎಂಬ ಅನುಮಾನಗಳಿಗೆ ಇಂಬು ನೀಡಿದೆ.

ಡಿಕೆಶಿ ವಿರುದ್ಧ ರಣತಂತ್ರ?

ಕೆ.ಎನ್. ರಾಜಣ್ಣ ಅವರು ಮೊದಲಿನಿಂದಲೂ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಏಕಚಕ್ರಾಧಿಪತ್ಯಕ್ಕೆ ತಡೆಯೊಡ್ಡಲು ಯತ್ನಿಸುತ್ತಲೇ ಬಂದಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಸೂತ್ರ ಜಾರಿಯಾಗಬೇಕು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕು ಅಥವಾ ಡಿಸಿಎಂ ಸ್ಥಾನವನ್ನಾದರೂ ಬಿಡಬೇಕು ಎಂದು ರಾಜಣ್ಣ ಬಹಿರಂಗವಾಗಿಯೇ ಆಗ್ರಹಿಸಿದ್ದರು. ಇದೀಗ ದೆಹಲಿಯಲ್ಲಿ ಬೀಡುಬಿಟ್ಟಿರುವ ಅವರು, ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲ ಅವರನ್ನು ಭೇಟಿಯಾಗಿ, ರಾಜ್ಯದಲ್ಲಿನ ನಾಯಕತ್ವ ಗೊಂದಲದ ಬಗ್ಗೆ ನೇರ ಮಾತುಕತೆ ನಡೆಸಲು ಮುಂದಾಗಿದ್ದಾರೆ.

ಸತೀಶ್ ಜಾರಕಿಹೊಳಿ ಬೆನ್ನಲ್ಲೇ ರಾಜಣ್ಣ ಎಂಟ್ರಿ

ಅಸ್ಸಾಂ ಚುನಾವಣೆ ಉಸ್ತುವಾರಿ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಅವರು ವಾಪಸಾಗುತ್ತಿದ್ದಂತೆಯೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ಆಗಮಿಸಿ ವರಿಷ್ಠರ ಜೊತೆ ಚರ್ಚೆ ನಡೆಸಿದ್ದರು. ಈಗ ಅವರ ಬೆನ್ನಲ್ಲೇ ರಾಜಣ್ಣ ಕೂಡ ದೆಹಲಿಗೆ ಆಗಮಿಸಿರುವುದು ಸಿದ್ದರಾಮಯ್ಯ ಬಣದ ಒಗ್ಗಟ್ಟು ಪ್ರದರ್ಶನ ಎಂದೇ ಬಿಂಬಿತವಾಗಿದೆ. ಒಂದು ವೇಳೆ ಸಿಎಂ ಬದಲಾವಣೆ ಅನಿವಾರ್ಯವಾದರೆ, ದಲಿತ ಅಥವಾ ಹಿಂದುಳಿದ ವರ್ಗಗಳಿಗೆ (ಅಹಿಂದ) ಅಧಿಕಾರ ನೀಡಬೇಕು ಎಂಬ ದಾಳವನ್ನು ಉರುಳಿಸಲು ಸಿದ್ದರಾಮಯ್ಯ ಬಣ ಸಜ್ಜಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸ್ವಪಕ್ಷದ ಸರ್ಕಾರದ ವಿರುದ್ಧವೇ ಗುಡುಗು!

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, ತಮ್ಮದೇ ಸರ್ಕಾರದ ಆಡಳಿತ ವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ದೆಹಲಿಯ ಕರ್ನಾಟಕ ಭವನಕ್ಕಾಗಿ ಖರೀದಿಸಿದ 12 ವಾಹನಗಳನ್ನು ದೆಹಲಿಯಲ್ಲೇ ನೋಂದಣಿ ಮಾಡಿಸುವ ಮೂಲಕ ರಾಜ್ಯಕ್ಕೆ ಬರಬೇಕಿದ್ದ ಕೋಟ್ಯಂತರ ರೂಪಾಯಿ ತೆರಿಗೆ ನಷ್ಟವಾಗಿದೆ. ಅಧಿಕಾರಿಗಳು ಕರ್ನಾಟಕದ ಪರವಾಗಿದ್ದಾರೋ ಅಥವಾ ದೆಹಲಿ ಸರ್ಕಾರದ ಪರವಾಗಿದ್ದಾರೋ ಎಂಬ ಅನುಮಾನ ಕಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಈ ಮೂಲಕ ಪರೋಕ್ಷವಾಗಿ ಆಡಳಿತ ಯಂತ್ರ ಕುಸಿದಿದೆ ಎಂಬ ಸಂದೇಶ ರವಾನಿಸಿದ್ದಾರೆ.

ಹೈಕಮಾಂಡ್ ಅಂಗಳದಲ್ಲಿ ಚೆಂಡು

ಮತಗಳ್ಳತನ ವಿವಾದದ ಹೇಳಿಕೆ ತಿರುಚಿ ತಮ್ಮ ವಿರುದ್ಧ ಹೈಕಮಾಂಡ್ಗೆ ದೂರು ನೀಡಲಾಗಿದೆ ಎಂದು ರಾಜಣ್ಣ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ. ನಾಯಕತ್ವದ ಗೊಂದಲವನ್ನು ಹೈಕಮಾಂಡ್ ಶೀಘ್ರವೇ ಇತ್ಯರ್ಥಪಡಿಸಬೇಕು, ವಿಳಂಬ ಮಾಡಿದರೆ ಅದು ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂದು ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ, ರಾಜಣ್ಣ ಮತ್ತು ಸೋಮಣ್ಣ ಅವರ ಈ ಅನಿರೀಕ್ಷಿತ ಭೇಟಿ ಹಾಗೂ ರಾಜಣ್ಣ ಅವರ ಆಕ್ರೋಶದ ಮಾತುಗಳು, ರಾಜ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳುತ್ತಿವೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಯಾವ ರಾಜಕೀಯ ಸ್ಫೋಟಕ್ಕೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ShareTweetSendShare
Join us on:

Related Posts

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

by Shwetha
February 22, 2026
0

ಸಣ್ಣನೀರಾವರಿ ಇಲಾಖೆಯ ಕಾಮಗಾರಿ ಗುತ್ತಿಗೆ ನೀಡುವ ವಿಚಾರದಲ್ಲಿ ₹5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಿಜೆಪಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ....

ಸುಪ್ರೀಂ ಕೋರ್ಟ್ ಏಟಿನ ಬೆನ್ನಲ್ಲೇ ಎಚ್ಚೆತ್ತ ಟ್ರಂಪ್ – ಅಮೆರಿಕದ ಟ್ಯಾರಿಫ್ ಕದನದಲ್ಲಿ ಭಾರತಕ್ಕೆ ಬೃಹತ್ ಜಯ;ಸುಂಕ ಶೇ.10ಕ್ಕೆ ಇಳಿಕೆ

ಸುಪ್ರೀಂ ಕೋರ್ಟ್ ಏಟಿನ ಬೆನ್ನಲ್ಲೇ ಎಚ್ಚೆತ್ತ ಟ್ರಂಪ್ – ಅಮೆರಿಕದ ಟ್ಯಾರಿಫ್ ಕದನದಲ್ಲಿ ಭಾರತಕ್ಕೆ ಬೃಹತ್ ಜಯ;ಸುಂಕ ಶೇ.10ಕ್ಕೆ ಇಳಿಕೆ

by Shwetha
February 22, 2026
0

ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ ವಹಿವಾಟಿನಲ್ಲಿ ಭಾರತಕ್ಕೆ ಮಹತ್ವದ ಮುನ್ನಡೆ ದೊರೆತಿದೆ. ಅಮೆರಿಕದ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಬಿಗ್ ಬಾಸ್ ಸಾಮ್ರಾಜ್ಯ ಗೆದ್ದರೂ ಸಿನಿಮಾ ಕೋಟೆಯಲ್ಲಿ ಸೋತ ಗಿಲ್ಲಿ; ಭರ್ಜರಿ ಹೈಪ್ ನಡುವೆಯೂ ನೆಲಕಚ್ಚಿದ ಚಿತ್ರಗಳು, ಮುಂದೇನು ಎನ್ನುವ ಚಿಂತೆಯಲ್ಲಿ ನಟ

ಬಿಗ್ ಬಾಸ್ ಸಾಮ್ರಾಜ್ಯ ಗೆದ್ದರೂ ಸಿನಿಮಾ ಕೋಟೆಯಲ್ಲಿ ಸೋತ ಗಿಲ್ಲಿ; ಭರ್ಜರಿ ಹೈಪ್ ನಡುವೆಯೂ ನೆಲಕಚ್ಚಿದ ಚಿತ್ರಗಳು, ಮುಂದೇನು ಎನ್ನುವ ಚಿಂತೆಯಲ್ಲಿ ನಟ

by Shwetha
February 22, 2026
0

ರಿಯಾಲಿಟಿ ಶೋಗಳು ನೀಡುವ ಜನಪ್ರಿಯತೆ ಶಾಶ್ವತವಲ್ಲ, ಅದು ಕೇವಲ ನಾಲ್ಕು ದಿನದ ಹಬ್ಬ ಎನ್ನುವ ಮಾತು ಚಿತ್ರರಂಗದಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದ್ದಾರೆ...

ಕುರಿ ಕಾಯುವವನು ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು: ನನ್ನನ್ನು ಮುಗಿಸಲು ಸಂಚು ಎಂದ ಸಿದ್ದರಾಮಯ್ಯ

ಕುರಿ ಕಾಯುವವನು ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು: ನನ್ನನ್ನು ಮುಗಿಸಲು ಸಂಚು ಎಂದ ಸಿದ್ದರಾಮಯ್ಯ

by Shwetha
February 22, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದೇ ಒಂದು ಟ್ವೀಟ್ ಈಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ನಾಯಕತ್ವ ಬದಲಾವಣೆಯ ಚರ್ಚೆಗಳು,...

ಮಹಿಳೆಯರಿಗೆ ತಿಂಗಳಿಗೆ ₹25,000 ಯೋಜನೆ ಇಲ್ಲ: PIB ಫ್ಯಾಕ್ಟ್ ಚೆಕ್ ಸ್ಪಷ್ಟನೆ

ಮಹಿಳೆಯರಿಗೆ ತಿಂಗಳಿಗೆ ₹25,000 ಯೋಜನೆ ಇಲ್ಲ: PIB ಫ್ಯಾಕ್ಟ್ ಚೆಕ್ ಸ್ಪಷ್ಟನೆ

by Shwetha
February 22, 2026
0

ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಮನೆಯಿಂದ ಕೆಲಸ ಮಾಡುವ ಯೋಜನೆ ತಂದಿದ್ದು, ತಿಂಗಳಿಗೆ ₹25,000 ಸಂಬಳ ನೀಡಲಿದೆ ಎಂಬ ಸಂದೇಶ ವೈರಲ್ ಆಗುತ್ತಿದೆ. ಆದರೆ ಈ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram