ಹೈದರಾಬಾದ್ : ನ್ಯಾಚುರಲ್ ಸ್ಟಾರ್ ನಟ ನಾನಿ ಅಭಿನಯದ ಶ್ಯಾಮ್ ಸಿಂಗ್ ರಾಯ್ ಸಿನಿಮಾ ಟಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದುಕೂಡ ಕನ್ನಡತಿ ರಶ್ಮಿಕಾ ಮಂದಣ್ಣ ವಿಚಾರವಾಗಿ..! ಅರ್ರೆ ನಾನಿ ಸಿನಿಮಾಗೂ ರಶ್ನಿಕಾಗೂ ಏನು ಸಂಬಂಧ ಅಂದ್ಕೊಂಡ್ರಾ..? ಇದಕ್ಕೆ ಉತ್ತರ, ರಶ್ಮಿಕಾ ನಾನಿ ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದು, ಅಂದರೆ ಶ್ಯಾಮ್ ಸಿಂಗ್ ರಾಯ್ ಸಿನಿಮಾದ ಆಫರ್ ಅನ್ನ ರಶ್ಮಿಕಾ ರಿಜೆಕ್ಟ್ ಮಾಡಿದ್ದು. ಇದೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಯ್ಯೋ ರಾಮ..! ಇದ್ರಲ್ಲಿ ಅಷ್ಟೊಂದು ಚರ್ಚೆ ಮಾಡೋದೇನಿದೆ ಅಂದ್ಕೊಂಡ್ರಾ..? ಹಾಗಾದ್ರೆ ಮುಂದೆ ಓದಿ..
ನಾನಿಯ ಮುಂದಿನ ಸಿನಿಮಾ ಶ್ಯಾಮ್ ಸಿಂಗ್ ರಾಯ್, ಲಾಕ್ ಡೌನ್ ಹಿನ್ನೆಲೆ ಸಿನಿಮಾ ಕೆಲಸಗಳನ್ನು ನಿಲ್ಲಿಸಲಾಗಿತ್ತು. ಇದೀಗ ಚಿತ್ರ ತಂಡ ಹೀರೋಯಿನ್ ಆಯ್ಕೆಯಲ್ಲಿ ತೊಡಗಿದೆ. ಇನ್ನೂ ವಿಶೇಷವೆಂದರೆ ಈ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದಾರಂತೆ. ಪ್ರಮುಖ ಮಾತ್ರಕ್ಕೆ ನಟಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರಂತೆ, ಅದರಂತೆ ಎರಡನೇ ನಟಿಯಾಗಿ ನಟಿಸಲು ರಶ್ಮಿಕಾ ಮಂದಣ್ಣ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ರಶ್ಮಿಕಾ ಈ ಆಫರ್ ತಿರಸ್ಕರಿಸಿದ್ದು, ಶ್ಯಾಮ್ ಸಿಂಗ್ ರಾಯ್ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿಲ್ಲ.
ಹಾಗಾದ್ರೆ ರಶ್ಮಿಕಾ ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದೇಕೆ ಎಂಬ ಚರ್ಚೆ ಈಗ ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಗಿದ್ದು, ತೆಲುಗು ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿರುವ ನಟಿ ಯಾಕೆ ರಿಜೆಕ್ಟ್ ಮಾಡಿದರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಶ್ಯಾಮ್ ಸಿಂಗ್ ರಾಯ್ ಚಿತ್ರದಲ್ಲಿ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ರಶ್ಮಿಕಾ ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಶ್ಮಿಕಾಗೆ ತಮ್ಮ ಪಾತ್ರ ಇಷ್ಟವಾಗಿತ್ತಂತೆ ಆದರೆ ಸಾಯಿ ಪಲ್ಲವಿ ನಟಿಸುತ್ತಿರುವ ಒಂದೇ ಕಾರಣಕ್ಕೆ ಸಿನಿಮಾ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.
ಸೆನ್ಸೇಶನ್ ಕ್ವೀನ್ ಸಾಯಿ ಪಲ್ಲವಿ..!
ಹೌದು..! ಸಾಯಿ ಪಲ್ಲವಿ ಸದ್ಯ ಟಾಲಿವುಡ್ ನ ಸೆನ್ಸೇಶನ್ ಕ್ವೀನ್. ತಮ್ಮ ಅದ್ಭುತ ನಟನೆ ಮತ್ತು ಡ್ಯಾನ್ಸ್ ಮೂಲಕ ಇಡೀ ಸಿನಿಮಾವನ್ನು ಆವರಿಸುವ ಸಾಧ್ಯತೆ ಇದೆ. ಇದರಿಂದಾಗಿ ಉಳಿದ ನಾಯಕಿಯರ ಪಾತ್ರಗಳಿಗೆ ಅಷ್ಟು ಪ್ರಾಧಾನ್ಯತೆ ಸಿಗುವುದಿಲ್ಲ. ಹೀಗಾಗಿ ರಶ್ಮಿಕಾ ಈ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಎಂಬುದು ಸಾಯಿಪಲ್ಲವಿ ಅಭಿಮಾನಿಗಳ ವಾದವಾಗಿದೆ.
ಅಂದಹಾಗೆ ಶ್ಯಾಮ್ ಸಿಂಗ್ ರಾಯ್ ಸಿನಿಮಾವನ್ನು ರಾಹುಲ್ ನಿರ್ದೇಶಿಸುತ್ತಿದ್ದು, ಸಿತಾರಾ ಎಂಟರ್ ಟೈನ್ಮೆಂಟ್ಸ್ ಇದಕ್ಕೆ ಬಂಡವಾಳ ಹೂಡಿದೆ.