ವಿವಾದದಲ್ಲಿ ರವಿತೇಜ ಅಭಿನಯದ ಖಿಲಾಡಿ ಸಿನಿಮಾ
ತೆಲುಗು ನಟ ರವಿತೇಜ ಅಭಿನಯದ ಕಿಲಾಡಿ ಸಿನಿಮಾ ರಿಲೀಸ್ ಆಗುತ್ತಲೇ ವಿವಾದಗಳಲ್ಲಿ ಸಿಲುಕಿಕೊಂಡಿದೆ. ಬಾಲಿವುಡ್ ನಿರ್ಮಾಪಕ ರತನ್ ಜೈನ್ ಅವರು ಚಿತ್ರದ ಹೆಸರಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ರವಿ ತೇಜ ಅಭಿನಯದ ‘ಖಿಲಾಡಿ’ ಸಿನಿಮಾವನ್ನ ಅದೇ ಹೆಸರಿನಲ್ಲಿ ಹಿಂದಿಯಲ್ಲಿಯೂ ಬಿಡುಗಡೆ ಮಾಡಿದೆ ಚಿತ್ರ ತಂಡ. ಆದರೆ ಅಕ್ಷಯ್ ಕುಮಾರ್ ಅಭಿನಯದ ಸಿನಿಮಾ ಅದೇ ಹೆಸರಿನೊಂದಿಗೆ 1992 ರಲ್ಲಿ ಬಿಡುಗಡೆಯಾಗಿತ್ತು. ಇದೇ ಹೆಸರಿನಲ್ಲಿ ಹಲವು ಸೀಕ್ವೆನ್ಸ್ ಗಳು ಬಂದಿವೆ. ಈ ಚಿತ್ರದ ಶೀರ್ಷಿಕೆಗೆ ತೆಲುಗು ನಿರ್ಮಾಪಕರು ನನ್ನಿಂದ ಅನುಮತಿ ಪಡೆದಿಲ್ಲ ಎಂದು ರತನ್ ಜೈನ್ ಎಂಬುವವರು ಆರೋಪಿಸಿದ್ದಾರೆ. Ravi Teja’s Khiladi Lands In Legal Trouble, Ratan Jain Files a Case.
ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇಟ್ಟುಕೊಂಡು ರಿಲೀಸ್ ಆದ ಸಿನಿಮಾಗಳಿಂದಾಗಿ ಈ ರೀತಿ ತೊಂದರೆ ಉಂಟಾಗುತ್ತಿದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರತನ್ ಅವರು, ಕಿಲಾಡಿ ಹೆಸರಿನ ಟ್ರೇಡ್‌ಮಾರ್ಕ್ ನೋಂದಣಿಯನ್ನು ನಾವು ಹೊಂದಿದ್ದೇವೆ. ಈ ಟ್ರೇಡ್‌ಮಾರ್ಕ್ ಭಾರತದಾದ್ಯಂತ ಇದೆ. ಮನರಂಜನಾ ಉದ್ಯಮದಲ್ಲಿ ಯಾರು ಈ ಶೀರ್ಷಿಕೆಯ ಹೆಸರನ್ನು ಬಳಸುವಂತಿಲ್ಲ. ಸಬ್ಸೆ ಬಡಾ ಖಿಲಾಡಿ, ಖತ್ರೋನ್ ಕೆ ಕಿಲಾಡಿ ಅಂತಹ ಚಲನಚಿತ್ರಗಳು ವಿಭಿನ್ನವಾಗಿವೆ ಆದರೆ ಕಿಲಾಡಿ ಒಂದೇ ನಮ್ಮ ಟ್ರೇಡ್‌ಮಾರ್ಕ್ ಆಗಿದೆ ಎಂದಿದ್ದಾರೆ.
ಫೆಬ್ರವರಿ 11 ರಂದು ನಮ್ಮ ವಾದವನ್ನು ಆಲಿಸಿದ ನ್ಯಾಯಾಧೀಶರು ಈಗ ಚಿತ್ರದ ಬಿಡುಗಡೆಗೆ ತಡೆ ನೀಡಲು ತಡವಾಗಿದೆ ಎಂದು ಹೇಳಿದರು. ಚಿತ್ರದ ಬಿಡುಗಡೆಯನ್ನು ನಿಲ್ಲಿಸಲು ನಾವು ಬಯಸುವುದಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ನಿರ್ಮಾಪಕರು ಯಾಕೆ ಹೀಗೆ ಮಾಡಿದರು ಎಂಬುದು ನಮಗೆ ತಿಳಿದಿಲ್ಲ, ಅವರು ಚಿತ್ರದ ಟ್ರೇಲರ್ ಅನ್ನು ಫೆಬ್ರವರಿ 8 ರಂದು ತಡವಾಗಿ ಬಿಡುಗಡೆ ಮಾಡಿದರು, ಅಂದರೆ ಚಿತ್ರ ಬಿಡುಗಡೆಗೆ ಕೇವಲ 2 ದಿನಗಳ ಮೊದಲು.
ನಾವು ಫೆಬ್ರವರಿ 9 ರಂದು ಪ್ರಕರಣವನ್ನು ಸಿದ್ಧಪಡಿಸಿದ್ದೇವೆ ಮತ್ತು 10 ರಂದು ವಿಚಾರಣೆಗಾಗಿ ದೆಹಲಿ ಹೈಕೋರ್ಟ್‌ಗೆ ಹೋಗಿದ್ದೇವೆ. ಹಾಗಾಗಿ ನಮ್ಮ ಕಡೆಯಿಂದ ಯಾವುದೇ ವಿಳಂಬವಿಲ್ಲ. ಅದೇನೇ ಇರಲಿ, ಕಿಲಾಡಿ ಹೆಸರಿನ ಚಿತ್ರ ತೆಲುಗಿನಲ್ಲಿ ತಯಾರಾಗುತ್ತಿದ್ದರೆ ಮುಂಬೈನಲ್ಲಿ ಹೇಗೆ ಗೊತ್ತಾಗುತ್ತದೆ?’ ಎಂದಿದ್ದಾರೆ. ರತನ್ ಜೈನ್. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 16 ರಂದು ನಡೆಯಲಿದೆ.
ಬಿಡುಗಡೆಗೂ ಮುನ್ನವೇ ‘ಕಿಲಾಡಿ’ ಚಿತ್ರದ ವಿತರಣೆ ಹಕ್ಕುಗಳು ಭಾರಿ ಮೊತ್ತಕ್ಕೆ ಸೇಲ್ ಆಗಿದ್ದವು. ಒಟಿಟಿ, ಕಿರುತೆರೆ ಪ್ರಸಾರದ ಹಕ್ಕುಗಳ ವಿಚಾರದಲ್ಲಿಯೂ ದೊಡ್ಡ ಆಫರ್ ಬಂದಿದೆ.