Ravindra Jadeja | ಪುಷ್ಟ ಗುಂಗಲ್ಲಿ ರಾಕ್ ಸ್ಟಾರ್ ಜಡ್ಡು..!
ಶ್ರೀಲಂಕಾ ವಿರುದ್ಧದ ಟಿ20 ಸರಣಿಯೊಂದಿಗೆ ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಕಂ ಬ್ಯಾಕ್ ಮಾಡಿದ್ದಾರೆ.
ಗುರುವಾರ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಜಡೇಜಾ ಕಣಕ್ಕಿಳಿದ್ರೂ ಬ್ಯಾಟಿಂಗ್ ನಲ್ಲಿ ಮಿಂಚುವ ಅವಕಾಶ ಸಿಗಲಿಲ್ಲ.
ಆದ್ರೆ ಬೌಲಿಂಗ್ ನಲ್ಲಿ ಮಾತ್ರ ಜಡ್ಡು ತಮ್ಮ ಮಾರ್ಕ್ ಆಟವನ್ನಾಡಿದರು.
ಬುಧವಾರದ ಪಂದ್ಯದಲ್ಲಿ ನಾಲ್ಕು ಓವರ್ ಗಳನ್ನು ಎಸೆದ ಜಡೇಜಾ, 28 ರನ್ ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು.
Ravindra Jadeja be like:-
Jhukega nahi saala #IndianCricketTeam #IndvsSL #CricketLive #GAMEDAY pic.twitter.com/Sbl7H2Pdbn— Rutuja Umale (@rutuja_umale) February 24, 2022
10 ರನ್ ಗಳಿಸಿದ್ದ ಲಂಕಾ ವಿಕೆಟ್ ಕೀಪರ್ ಚಂಡಿಮಾನ್ ಅವರನ್ನ ಮಾಡುತ್ತಿದ್ದಂತೆ, ಜಡ್ಡು ಪುಷ್ಪ ಸಿನಿಮಾದ ಮ್ಯಾನರಿಸಂ ಅನ್ನು ಅನುಕರಿಸಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಮೂರು ಪಂದ್ಯಗಳ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 62 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತ್ತು. ನಂತರ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್‌ಗಳಿಗೆ ಸೀಮಿತವಾಯಿತು.
ravindra-jadeja-pushpa-style-celebration saaksha tv