ಬದುಕು ಕೊಟ್ಟ ದೇವತೆಗಾಗಿ ಈ ದಿನ – ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು Saakshatv Lahari mothers day
ಅಮ್ಮ ನಮ್ಮೆಲ್ಲರ ಬಾಳಿನ ಮಧುರಗೀತೆ.. ಅಮ್ಮ ಎಂಬ ಎರಡಕ್ಷರದಲ್ಲಿ ತ್ಯಾಗ ಪ್ರೀತಿ, ಮಮತೆ ವಾತ್ಸಲ್ಯವೇ ಅಡಗಿದೆ.
ನಮಗೆ ಬದುಕು ಕೊಟ್ಟ ಆ ದೇವತೆಗೆ ನಾವಿಟ್ಟ ಹೆಸರೇ ಅಮ್ಮ…
ತನ್ನೆಲ್ಲಾ ನೋವುಗಳನ್ನು ಮಗುವಿನ ನಗುವಲ್ಲಿ ಮರೆತು ಅವರ ಏಳಿಗೆಯಲ್ಲಿ ತನ್ನ ಸಂತೋಷ ಕಾಣುವ ಏಕ ಮಾತ್ರ ಜೀವಿ ಎಂದರೆ ‘ಅಮ್ಮ’.
ಕಷ್ಟಗಳು ನನಗಿರಲಿ.. ಸುಖವೆಲ್ಲ ನಿನಗಿರಲಿ ಎಂದು ಹಾರೈಸುವ ಜೀವವೊಂದಿದ್ದರೆ ಅದು ಅಮ್ಮ ಮಾತ್ರ.. Saakshatv Lahari mothers day

ಮಗುವಿನ ಬಗೆಗಿನ ಕನಸುಗಳಿಂದ ಅಮ್ಮನ ಬದುಕು ಪ್ರಾರಂಭವಾಗುತ್ತದೆ.. ಮಗುವಿನ ಆಗಮನದ ಬಳಿಕ ತನಗಾಗಿ ಬದುಕುವುದನ್ನು ಮರೆತು ಮಗುವಿನ ಬದುಕಲ್ಲಿ ತನ್ನ ಬದುಕನ್ನು ಕಾಣುವ ಹೊಸ ಅಧ್ಯಾಯ ಆಕೆಯ ಬಾಳಲ್ಲಿ ಆರಂಭವಾಗುತ್ತದೆ.
ತಾನು ಸಾವಿನ ದಡದಲ್ಲಿದ್ದರೂ ಮಗುವಿನ ಸುಭದ್ರತೆ, ಕಾಳಜಿ ಅವಳನ್ನು ಬದುಕಿನ ಕಡೆಗೆ ಹಿಡಿದಿಡುತ್ತದೆ. ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತು ಅಕ್ಷರಶಃ ಸತ್ಯ. ತಾಯಿಯ ಪ್ರೀತಿಗೆ ಈ ಕೆಳಗಿನ ಕಥೆ ಒಂದು ಸುಂದರ ನಿದರ್ಶನ.
ಒಬ್ಬ ತನ್ನ ಪ್ರೇಯಸಿಯ ಕೋರಿಕೆ ಈಡೇರಿಸಲು ತನ್ನ ತಾಯಿಯನ್ನು ಕೊಂದು ಆಕೆಯ ಹೃದಯವನ್ನು ಪ್ರೇಯಸಿಗೆ ಕಾಣಿಕೆ ಕೊಡಲು ತೆಗೆದುಕೊಂಡು ಹೋಗುವಾಗ ಕಲ್ಲು ಎಡವಿ ಬಿದ್ದನಂತೆ. ಆಗ ತಾಯಿಯ ಆ ಹೃದಯ ಅಯ್ಯೋ ನೋವಾಯಿತಾ ಮಗನೇ ಎಂದು ಕೇಳಿತಂತೆ.
ತಾನು ಹೇಗೆ ಇರಲಿ, ತನ್ನ ಮಕ್ಕಳು ಚೆನ್ನಾಗಿ ಇರಲಿ ಎಂದು ಬಯಸುವ ತಾಯಿಯ ಪ್ರೀತಿಗೆ ಸಮನಾದದ್ದು ಬೇರೆ ಯಾವುದು ಇಲ್ಲ.

ತನ್ನ ಜೀವಮಾನವಿಡಿ ಮಕ್ಕಳನ್ನು ಪ್ರೀತಿಸಿ ಜೀವನ ಕಲಿಸುವ ತಾಯಿಯ ತ್ಯಾಗವನ್ನು ಜಗತ್ತಿಗೆ ತಿಳಿಸುವುದು ವಿಶ್ವ ಅಮ್ಮಂದಿರ ದಿನದ ಉದ್ದೇಶ..
ತನ್ನ ನೋವನ್ನು ಬಚ್ಚಿಟ್ಟು ಮಗುವಿನ ಮುಖದಲ್ಲಿ ನಗುವಿನ ಸೆಲೆಯನ್ನು ಚಿಮ್ಮುವ ತಾಯಿಯ ತ್ಯಾಗಕ್ಕೆ ಯಾವುದು ಸಾಟಿಯಲ್ಲ… ನಿಸ್ವಾರ್ಥ ಪ್ರೀತಿಯ ಸಾಕಾರ ಮೂರ್ತಿ ಅಮ್ಮನನ್ನು ಬಣ್ಣಿಸಲು ಯಾವುದೇ ಕಥೆ, ಕವನ, ಪದಪುಂಜಗಳಿಂದ ಸಾಧ್ಯವಿಲ್ಲ.
ಅಮ್ಮಂದಿರ ದಿನ ಇಂದು ಒಂದು ದಿನಕ್ಕೆ ಮಾತ್ರ ಮೀಸಲಲ್ಲ.. ಪ್ರತಿದಿನವೂ ಅಮ್ಮಂದಿರ ದಿನವೇ… ನಿಸ್ವಾರ್ಥ ಪ್ರೀತಿಯ ಸಾಕಾರ ಮೂರ್ತಿ ಅಮ್ಮಂದಿರಿಗೆ ಸಾಕ್ಷಾಟಿವಿ ವತಿಯಿಂದ ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು..

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ… ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ
https://twitter.com/SaakshaTv/status/1390506933489180675?s=19
https://twitter.com/SaakshaTv/status/1390494846192922625?s=19
https://twitter.com/SaakshaTv/status/1390144596563435521?s=19
https://twitter.com/SaakshaTv/status/1390132456125128706?s=19







