ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟ ಸಾಯಿ ದುರ್ಗಾ ತೇಜ್ ತಮ್ಮ ಭಿನ್ನವಾದ ಪಾತ್ರಗಳಿಂದ ಗುರುತಿಸಿಕೊಂಡಿದ್ದಾರೆ. ವಿರೂಪಾಕ್ಷ ಸಿನಿಮಾದಲ್ಲಿ ತಮ್ಮ ದಿಟ್ಟ ಪರ್ಫಾರ್ಮೆನ್ಸ್ನಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ ಅವರು, ಈಗ ‘ಸಂಬರಾಲ ಏಟಿಗಟ್ಟು’ ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಲುಕ್ನಲ್ಲಿ ಆಕರ್ಷಣೆ ಮೂಡಿಸಿದ್ದಾರೆ.
ಇತ್ತೀಚೆಗಷ್ಟೇ ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಈ ಚಿತ್ರದ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಿದರು. ಆಕ್ಷನ್ ಪ್ಯಾಕ್ಡ್ ಟೀಸರ್ನಲ್ಲಿ ಸಾಯಿ ದುರ್ಗಾ ತೇಜ್ರ ಹೊಸ ಅವತಾರ ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲವನ್ನು ಹುಟ್ಟಿಸಿದೆ. ಟೀಸರ್ ನೋಡಿದ ತಕ್ಷಣವೇ ಇದು ರಕ್ತಸಿಕ್ತ ಇತಿಹಾಸ ಕಥೆಯೊಂದಿಗೆ ಪ್ರೇಕ್ಷಕರನ್ನು ರೋಮಾಂಚಕ ಅನುಭವಕ್ಕೆ ಕರೆದೊಯ್ಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದೆನಿಸುತ್ತದೆ.
‘ಸಂಬರಾಲ ಏಟಿಗಟ್ಟು’ ಸಿನಿಮಾ ಯುವ ಪ್ರತಿಭೆ ರೋಹಿತ್ ಕೆ. ಪಿ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ವೃತ್ತಿ ಛಾಯಾಗ್ರಾಹಕ ವೆಟ್ರಿವೇಲ್ ಪಳನಿಸ್ವಾಮಿ ಅವರ ಕ್ಯಾಮೆರಾ, ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ, ಮತ್ತು ನವೀನ್ ವಿಜಯಕೃಷ್ಣ ಅವರ ಸಂಕಲನ ಈ ಚಿತ್ರಕ್ಕಿದೆ.
“ಹನುಮಾನ್” ಚಿತ್ರವನ್ನು ಹಿಟ್ ಮಾಡಿದ ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಅವರ ಪ್ರೈಮ್ ಶೋ ಎಂಟರ್ಟೈನ್ಮೆಂಟ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರಮಂದಿರಗಳಲ್ಲಿ ಅದ್ಧೂರಿ ಅನುಭವ ನೀಡಲು ಸಜ್ಜಾಗಿದೆ.
‘ಸಂಬರಾಲ ಏಟಿಗಟ್ಟು’ ತೆಲುಗು, ಕನ್ನಡ, ತಮಿಳು, ಮಲಯಾಳಂ, ಮತ್ತು ಹಿಂದಿ ಭಾಷೆಗಳಲ್ಲಿ 2025ರ ಸೆಪ್ಟೆಂಬರ್ 25ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಈ ಟೀಸರ್ ಸಾಕಷ್ಟು ಹೈಪನ್ನು ಸೃಷ್ಟಿಸಿದ್ದು, ಸಾಯಿ ದುರ್ಗಾ ತೇಜ್ರ ಈ ಹೊಸ ಯತ್ನ ಬ್ಲಾಕ್ಬಸ್ಟರ್ ಆಗುವ ನಿರೀಕ್ಷೆಯಿದೆ.