Ramya : ಚಂದನವನದ ಮೋಹಕ ತಾರೆ ರಮ್ಯಾಗೆ ಹುಟ್ಟು ಹಬ್ಬದ ಸಂಭ್ರಮ…
ಚಂದನವನದ ಮೋಹಕ ತಾರೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ ಹತ್ತು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಕ್ವೀನ್ ನಂತೆ ನಟಿಸಿ ಚಿತ್ರರಂಗದಿಂದ ಸುಮಾರು 10 ವರ್ಷಗಳ ಕಾಲ ದೂರವವಾದರೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ.
2003 ರಲ್ಲಿ ಅಪ್ಪು ನಾಯಕನಾಗಿ ನಟಿಸಿದ ಅಭಿ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಚೆಲುವೆ ಕೊನೆಯದಾಗಿ 2016 ತೆರೆಕಂಡ ನಾಗರಹಾವು ಚಿತ್ರದ ಮೂಲಕ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.
40 ನೇ ವಸಂತಕ್ಕೆ ಕಾಲಿಟ್ಟಿರುವ ರಮ್ಯಾ ರಾಜಕೀಯದಿಂದ ದೂರ ಉಳಿದಿದ್ದು, ಇದೀಗ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಡಾಲಿ ಧನಂಜಯ್ ಜೊತೆಗೆ ಉತ್ತರಕಾಂಡ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ.
ಇದಲ್ಲದೇ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದು, ಆಪಲ್ ಬಾಕ್ಸ್ ಸಂಸ್ಥೆ ಮೂಲಕ ನಿರ್ಮಾಪಕರಾಗಿಯೂ ಬಡ್ತಿ ಪಡೆದಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ನಟಿ ರಮ್ಯಾ 1982ರ ನವೆಂಬರ್ 29ರಂದು ಬೆಂಗಳೂರಿನಲ್ಲಿ ಜನಿಸಿದರು. ದಿವ್ಯಾ ಸ್ಪಂದನ ರಮ್ಯಾ ಹುಟ್ಟು ಹೆಸರು. ರಮ್ಯಾ ಪೋಷಕರು ಮೂಲತಃ ಮಂಡ್ಯದವರು. ತಾಯಿ ರಂಜಿತಾ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯೆ ಹಾಗೂ ತಂದೆ ಆರ್ ಟಿ ನಾರಾಯನ್ ಓರ್ವ ಉದ್ಯಮಿಯಾಗಿದ್ದರು.
ಅಮೃತಧಾರೆ , ಅರಸು , ಆಕಾಶ್ , ಎಕ್ಸ್ ಕ್ಯೂಸ್ ಮಿ ಅಂತಹ ಹಿಟ್ ಸಿನಿಮಾಗಳಲ್ಲಿ ರಮ್ಯಾ ನಟಿಸಿದ್ದಾರೆ.
sandalwood queen Ramya birthday celebration