ADVERTISEMENT
Friday, December 5, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

ಶಕ್ತಿಪೀಠ ದರ್ಶನ ಮಾಡಿದರೆ ಮನೆಯಲ್ಲಿ ಅಷ್ಟೈಶ್ವರ್ಯ ವೃದ್ಧಿ, ಸಂಕಷ್ಟ ದೂರ

ಶಕ್ತಿಪೀಠ ದರ್ಶನ ಮಾಡಿದರೆ ಮನೆಯಲ್ಲಿ ಅಷ್ಟೈಶ್ವರ್ಯ ವೃದ್ಧಿ, ಸಂಕಷ್ಟ ದೂರ

Saaksha Editor by Saaksha Editor
September 21, 2025
in Uncategorized
Shakti Peetha Darshan Benefits: Attract Wealth and Remove Life Troubles

ದೇವಿ

Share on FacebookShare on TwitterShare on WhatsappShare on Telegram

ತ್ರಿದೇವಿ ಸ್ವರೂಪಿ ಶಕ್ತಿ ಪೀಠ ಶ್ರೀ ಕ್ಷೇತ್ರಕ್ಕೆ ದರ್ಶನ ಮಾಡಿ ಬಂದರೆ ಮನೆಯಲ್ಲಿ ಸದಾಕಾಲ ಅಷ್ಟೈಶ್ವರ್ಯ ವೃದ್ಧಿಯಾಗಿ ಸಂಕಷ್ಟ ದೂರವಾಗುತ್ತದೆ..!! ಇಲ್ಲಿನ ಐತಿಹ್ಯಗಳ ಅನುಸಾರ, ಇಲ್ಲಿ ತಪಸ್ಸು ಮಾಡುತ್ತಿದ್ದ ಕೋಲ ಮಹರ್ಷಿಗೆ ಓರ್ವ ರಾಕ್ಷಸನು ತೊಂದರೆ ನೀಡಿದ; ಈ ರಾಕ್ಷಸನೂ ಸಹ ತನ್ನ ಸ್ವಾಮಿ ಶಿವನನ್ನು ಮೆಚ್ಚಿಸಿ ಅವನಿಂದ ವರವೊಂದನ್ನು ಪಡೆಯುವುದಕ್ಕಾಗಿ ಶಿವನ ಕುರಿತು ತಪಸ್ಸಿನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ.

Related posts

Even dull kids can become intelligent chant Saraswati mantra

ಮೂರ್ಖ ಮಕ್ಕಳು ಕೂಡ ವಿದ್ಯಾವಂತರಾಗಲು ಈ ಉಪಾಯ ಮಾಡಿ

November 10, 2025
India vs West Indies 2nd Test: Blue Boys Close to Victory Match Highlights

ಭಾರತ-ವಿಂಡೀಸ್‌ 2ನೇ ಟೆಸ್ಟ್‌- ಗೆಲುವಿನ ಸನೀಹದಲ್ಲಿ ಬ್ಲೂ ಬಾಯ್ಸ್‌

October 13, 2025

ಈ ರಾಕ್ಷಸನು ತನ್ನ ದುಷ್ಟ ಬಯಕೆಯನ್ನು ಪೂರೈಸಿಕೊಳ್ಳದಂತೆ ಅವನನ್ನು ತಡೆಗಟ್ಟುವ ಸಲುವಾಗಿ, ಆದಿಶಕ್ತಿಯು ಅವನನ್ನು ಮಾತುಬಾರದ (ಮೂಕ) ವ್ಯಕ್ತಿಯನ್ನಾಗಿಸಿದಳು. ಹೀಗಾಗಿ ಸ್ವಾಮಿ ಶಿವನು ಅವನ ಮುಂದೆ ಕಾಣಿಸಿಕೊಂಡಾಗ (ಅಂದರೆ ಪ್ರತ್ಯಕ್ಷನಾದಾಗ) ಅವನಿಂದ ಏನನ್ನು ಕೇಳಲೂ ರಾಕ್ಷಸನಿಗೆ ಆಗದಂತಾಯಿತು. ತತ್ಪರಿಣಾಮವಾಗಿ ಅವನು ರೋಷಗೊಂಡ ಮತ್ತು ವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸಿದ ಕೋಲ ಮಹರ್ಷಿಗೆ ತಕ್ಷಣವೇ ತೊಂದರೆ ಕೊಡಲು ಆರಂಭಿಸಿದ.

ಮೂಕಾಸುರ ರಾಕ್ಷಸನನ್ನು ಪರಾಭವಗೊಳಿಸಿದ ಆದಿಶಕ್ತಿಯನ್ನು ಕುರಿತು ದೇವರುಗಳು ಗುಣಗಾನ ಮಾಡಿ ಅವಳನ್ನು ಮೂಕಾಂಬಿಕಾ ಎಂದು ಕರೆದರು. ಕೋಲ ಮಹರ್ಷಿಯ ಪ್ರಾರ್ಥನೆಯ ಅನುಸಾರವಾಗಿ, ಆ ದಿವ್ಯಮಾತೆಯು ಎಲ್ಲಾ ದೇವರುಗಳ ಜೊತೆಗೂಡಿ ಅಲ್ಲಿಯೇ ನೆಲೆಗೊಂಡಳು ಹಾಗೂ ಭಕ್ತರಿಂದ ಶಾಶ್ವತವಾಗಿ ಪೂಜಿಸಲ್ಪಡುವಂಥ ಭಕ್ತಿ-ಪರಂಪರೆಗೆ ಈ ಸನ್ನಿವೇಶವು ನಾಂದಿಯಾಯಿತು. ಶ್ರೀ ಆದಿ ಶಂಕರಾಚಾರ್ಯರು ತಾವು ಪಡೆದ ಶ್ರೀ ಮೂಕಾಂಬಿಕಾ ದೇವಿಯ ಒಂದು ದರ್ಶನ ಅಥವಾ ಅಂತರ್ದೃಷ್ಟಿಯ ಅನುಸಾರವಾಗಿ ಈ ದೇವತೆಯನ್ನು ಇಲ್ಲಿ ಪ್ರತಿಷ್ಠಾಪಿಸಿದರು ಎಂಬುದಾಗಿ ನಂಬಲಾಗಿದೆ.

ಆ ಕಥೆಯು ಹೀಗೆ ಸಾಗುತ್ತದೆ. ಕೊಡಚಾದ್ರಿ ಬೆಟ್ಟಗಳಲ್ಲಿ ಆದಿ ಶಂಕರರು ಧ್ಯಾನಮಾಡಿದರು ಮತ್ತು ಅವರ ಮುಂದೆ ಪ್ರತ್ಯಕ್ಷಳಾದ ದೇವಿಯು ಅವರ ಬಯಕೆಯೇನೆಂದು ಕೇಳಿದಳು. ತಾನು ಪೂಜಿಸಲು ಬಯಸಿರುವ ಕೇರಳದಲ್ಲಿನ ಸ್ಥಳವೊಂದರಲ್ಲಿ ದೇವಿಯನ್ನು ಸಂಘಟಿಸಿ-ಸ್ಥಾಪಿಸುವ ತಮ್ಮ ಬಯಕೆಯನ್ನು ಅವರು ಹೊರಗೆಡವಿದರು.ಇದಕ್ಕೆ ದೇವಿ ಸಮ್ಮತಿಸಿದಳು ಮತ್ತು ಅವರ ಮುಂದೆ ಒಂದು ಸವಾಲನ್ನೂ ಇರಿಸಿದಳು.

ಇದನ್ನೂ ಓದಿ: ಪಿತೃಪಕ್ಷ ಪೂಜೆ ಮಾಡುವ ಮುನ್ನ ತಿಳಿಯಲೇಬೇಕಾದ ವಿಚಾರಗಳಿವು

ತಾನು ಶಂಕರರನ್ನು ಅನುಸರಿಸುವುದಾಗಿಯೂ ಮತ್ತು ಶಂಕರರು ತಮ್ಮ ಗಮ್ಯಸ್ಥಾನವನ್ನು ತಲುಪುವರೆಗೂ ಹಿಂದಿರುಗಿ ನೋಡಬಾರದೆಂಬುದೇ ಈ ಸವಾಲಾಗಿತ್ತು. ಆದರೆ ಶಂಕರರನ್ನು ಪರೀಕ್ಷಿಸುವ ದೃಷ್ಟಿಯಿಂದ ದೇವಿಯು ತನ್ನ ನಡೆಗೆ ಉದ್ದೇಶಪೂರ್ವಕವಾಗಿ ಅಲ್ಪವಿರಾಮ ನೀಡಿದಳು.

ದೇವಿಯ ಕಾಲ್ಗೆಜ್ಜೆಗಳ ಧ್ವನಿಯು ಶಂಕರರಿಗೆ ಕೇಳದಾದಾಗ, ಅವರು ತತ್‌ಕ್ಷಣವೇ ಹಿಂದಿರುಗಿ ನೋಡಿದರು. ಆಗ ದೇವಿಯು ಅವರನ್ನು ಅನುಸರಿಸುವುದನ್ನು ನಿಲ್ಲಿಸಿದಳು ಮತ್ತು ತನ್ನನ್ನು ಶಂಕರರು ನೋಡುತ್ತಿದ್ದಂತೆ ಆ ಸ್ಥಳದಲ್ಲಿ ತನ್ನ ವಿಗ್ರಹವನ್ನು ಪ್ರತಿಷ್ಠಾಪಿಸುವಂತೆ ಶಂಕರರಿಗೆ ತಿಳಿಸಿದಳು. ಕೊಲ್ಲೂರು ಕ್ಷೇತ್ರವು, ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ಹಬ್ಬಿದ್ದ ಪ್ರಾಚೀನ ಕೇರಳದ ಒಂದು ಭಾಗವೂ ಆಗಿತ್ತು.

ಕೇರಳ ಹುಟ್ಟಿದ್ದು ಹೇಗೆ?

ಕೇರಳದ ಹುಟ್ಟಿನ ಕುರಿತಾದ ಒಂದಷ್ಟು ಪುರಾಣ ಕಥೆಗಳನ್ನು ಕಾಣಬಹುದಾಗಿದೆ. ಓರ್ವ ಯೋಧಸನ್ಯಾಸಿ ಅಥವಾ ವೀರಸನ್ಯಾಸಿಯಾಗಿದ್ದ ಪರಶುರಾಮನಿಂದ ಕೇರಳವು ಸೃಷ್ಟಿಯಾದದ್ದು ಅಂಥದ್ದೊಂದು ಪುರಾಣ ಕಥೆ ಎನಿಸಿಕೊಂಡಿದೆ.

ಬ್ರಾಹ್ಮಣರ ಪುರಾಣವು ಪ್ರಕಟಪಡಿಸುವ ಪ್ರಕಾರ, ಮಹಾವಿಷ್ಣುವಿನ ಒಂದು ಅವತಾರವಾದ ಪರಶುರಾಮನು ತನ್ನ ಕದನ ಕೊಡಲಿಯನ್ನು ಸಮುದ್ರದೊಳಗೆ ಎಸೆದ. ಇದರ ಪರಿಣಾಮವಾಗಿ ಕೇರಳದ ಭೂಭಾಗವು ಹುಟ್ಟಿಕೊಂಡಿತು ಮತ್ತು ಜಲರಾಶಿಯಿಂದ ಇದನ್ನು ವಾಸಯೋಗ್ಯವನ್ನಾಗಿ ಪರಿವರ್ತಿಸಲಾಯಿತು.

ವಿಷ್ಣುವಿನ ಹತ್ತು ಅವತಾರಗಳ (ಮೈದಾಳುವಿಕೆ) ಪೈಕಿ ಪರಶುರಾಮನದು ಆರನೆಯ ಅವತಾರವಾಗಿತ್ತು. ಪರಶು ಎಂಬ ಪದವು ಸಂಸ್ಕೃತದಲ್ಲಿ ‘ಕೊಡಲಿ’ ಎಂಬ ಅರ್ಥವನ್ನು ನೀಡುತ್ತದೆ. ಆದ್ದರಿಂದ ಪರಶುರಾಮ ಎಂದರೆ ‘ಕೊಡಲಿಯನ್ನು ಹೊಂದಿರುವ ರಾಮ’ ಎಂದರ್ಥ.

ಆಳುವ ಕುಲಕ್ಕೆ ಸೇರಿದ ಕ್ಷತ್ರಿಯರ ಸೊಕ್ಕಿನ ಪೀಡನೆಯಿಂದ ಪ್ರಪಂಚವನ್ನು ವಿಮೋಚನೆಗೊಳಿಸುವುದು ಅವನ ಜನನದ ಗುರಿಯಾಗಿತ್ತು. ಭೂಮಿಯ ಮೇಲಿನ ಎಲ್ಲಾ ಪುರುಷ ಕ್ಷತ್ರಿಯರನ್ನು ಅವನು ಸಾಯಿಸಿದ ಮತ್ತು ಅವರ ರಕ್ತವನ್ನು ಐದು ಸರೋವರಗಳಲ್ಲಿ ಭರ್ತಿಮಾಡಿದ. ಕ್ಷತ್ರಿಯ ರಾಜರನ್ನು ನಾಶಪಡಿಸಿದ ನಂತರ, ತನ್ನ ಪಾಪಗಳಿಗಾಗಿ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವ ಮಾರ್ಗವೊಂದನ್ನು ಕಂಡುಕೊಳ್ಳಲು ಅವನು ವಿದ್ವಜ್ಜನರ ಸಮೂಹವನ್ನು ಸಂಪರ್ಕಿಸಿದ.

ಶಾಶ್ವತ ನರಕ-ಶಿಕ್ಷೆಯಿಂದ ತನ್ನ ಆತ್ಮವನ್ನು ರಕ್ಷಿಸಿಕೊಳ್ಳಬೇಕೆಂದರೆ, ತಾನು ಜಯಿಸಿದ್ದ ಭೂಭಾಗಗಳನ್ನು ಬ್ರಾಹ್ಮಣರಿಗೆ ಅವನು ಹಸ್ತಾಂತರಿಸಬೇಕು ಎಂಬ ಸಲಹೆಯು ಅವನಿಗೆ ದಕ್ಕಿತು. ಅವರು ಸಲಹೆ ನೀಡಿದಂತೆಯೇ ಅವನು ನಡೆದುಕೊಂಡ ಮತ್ತು ಗೋಕರ್ಣಂನಲ್ಲಿ ಧ್ಯಾನಕ್ಕೆ ಕುಳಿತುಕೊಂಡ.

ಅಲ್ಲಿ ಸಾಗರಗಳ ದೇವರಾದ ವರುಣ ಮತ್ತು ಭೂಮಿಯ ದೇವತೆಯಾದ ಭೂಮಿದೇವಿ ಅವನನ್ನು ಹರಸಿದರು. ಗೋಕರ್ಣಂನಿಂದ ಹೊರಟು ಅವನು ಕನ್ಯಾಕುಮಾರಿಯನ್ನು ತಲುಪಿದ ಮತ್ತು ತನ್ನ ಕೊಡಲಿಯನ್ನು ಸಾಗರದ ಆ ಬದಿಯ ಉತ್ತರದ ಕಡೆಗೆ ಎಸೆದ. ಆ ಕೊಡಲಿಯು ಬಂದು ನೆಲೆಗೊಂಡ ಸ್ಥಳವು ಕೇರಳವಾಗಿತ್ತು. ಇದು ಗೋಕರ್ಣಂ ಮತ್ತು ಕನ್ಯಾಕುಮಾರಿಗಳ ನಡುವೆ ನೆಲೆಗೊಂಡಿರುವ 160 ಕಾತಮ್‌ನಷ್ಟಿರುವ (ಒಂದು ಹಳೆಯ ಅಳತೆ) ಭೂಭಾಗವಾಗಿತ್ತು.

ಪುರಾಣಗಳು ಹೇಳುವ ಪ್ರಕಾರ, ಪರಶುರಾಮನು 64 ಬ್ರಾಹ್ಮಣ ಕುಟುಂಬಗಳನ್ನು ಕೇರಳದಲ್ಲಿ ನೆಲೆಗೊಳಿಸಿದ; ಕ್ಷತ್ರಿಯರನ್ನು ತಾನು ಕೊಂದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲೆಂದು ಇವರನ್ನು ಆತ ಉತ್ತರದಿಂದ ಕರೆತಂದ. ಪುರಾಣಗಳ ಅನುಸಾರ, ಕೇರಳವು ಪರಶುರಾಮ ಕ್ಷೇತ್ರಂ, ಅಂದರೆ, ‘ಪರಶುರಾಮನ ಭೂಭಾಗ’ ಎಂಬುದಾಗಿಯೂ ಕರೆಯಲ್ಪಡುತ್ತದೆ; ಸಮುದ್ರದಿಂದ ಸದರಿ ಭೂಭಾಗವನ್ನು ಅವನು ವಾಸಯೋಗ್ಯವಾಗಿಸಿದ ಎಂಬ ಐತಿಹ್ಯವೇ ಈ ಹೆಸರಿಗೆ ಕಾರಣ.

ಲೇಖಕರು: ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ, ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್

ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Tags: Benefits of Shakti Peetha VisitdasaraDevi temples for prosperityGoddess blessings for successPilgrimage for successPowerful temples for wealthReligious travel IndiaRemove problems through DarshanShakti Peetha DarshanShakti Temples in IndiaWealth through Shakti Peethaಐಶ್ವರ್ಯ ಹೆಚ್ಚುವ ದರ್ಶನಕಷ್ಟ ನಿವಾರಣೆಗೆ ಶಕ್ತಿಪೀಠಕಷ್ಟ ಪರಿಹಾರ ದರ್ಶನದೇವಿಯ ಆಶೀರ್ವಾದಧಾರ್ಮಿಕ ಪ್ರವಾಸಮನೆಯಲ್ಲಿ ಐಶ್ವರ್ಯಲಕ್ಷ್ಮಿ ಶಕ್ತಿ ದರ್ಶನಶಕ್ತಿ ದೇವಸ್ಥಾನದಲ್ಲಿ ಶ್ರದ್ಧೆಶಕ್ತಿ ದೇವಾಲಯಶಕ್ತಿ ಪೂಜಾ ಮಹಿಮೆಶಕ್ತಿಪೀಠ ದರ್ಶನಶಕ್ತಿಪೀಠ ಲಾಭಗಳು
ShareTweetSendShare
Join us on:

Related Posts

Even dull kids can become intelligent chant Saraswati mantra

ಮೂರ್ಖ ಮಕ್ಕಳು ಕೂಡ ವಿದ್ಯಾವಂತರಾಗಲು ಈ ಉಪಾಯ ಮಾಡಿ

by Saaksha Editor
November 10, 2025
0

ಕೆಲವೊಂದು ಬಾರಿ ತರಗತಿಯಲ್ಲಿ ಚೆನ್ನಾಗಿ ಓದುತ್ತಿದ್ದ ಮಕ್ಕಳು ಮಂಕಾಗುತ್ತಾರೆ, ಇನ್ನು ಕೆಲವೊಂದು ಬಾರಿ ತರಗತಿಯಲ್ಲಿ ಕೂತಿದ್ದರು ಸಹ ಮನಸ್ಸು ಮಾತ್ರ ಬೇರೆ ಕಡೆ ಇರುತ್ತದೆ ಮತ್ತು ವಿದ್ಯಾಭ್ಯಾಸದ...

India vs West Indies 2nd Test: Blue Boys Close to Victory Match Highlights

ಭಾರತ-ವಿಂಡೀಸ್‌ 2ನೇ ಟೆಸ್ಟ್‌- ಗೆಲುವಿನ ಸನೀಹದಲ್ಲಿ ಬ್ಲೂ ಬಾಯ್ಸ್‌

by Saaksha Editor
October 13, 2025
0

ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ (Team India) ಗೆಲುವಿನ ಸನೀಹದಲ್ಲಿದೆ. ಪಂದ್ಯ ಐದನೇ ದಿನ  ಟೀಮ್‌ ಇಂಡಿಯಾಗೆ ಬೇಕಾಗಿರೋದು ಕೇವಲ 58 ರನ್‌...

ನವರಾತ್ರಿಯ ನವದಿನಗಳ ಅರ್ಥ ಹಾಗೂ ಮಹತ್ವ ತಿಳಿಯಿರಿ

ನವರಾತ್ರಿಯ ನವದಿನಗಳ ಅರ್ಥ ಹಾಗೂ ಮಹತ್ವ ತಿಳಿಯಿರಿ

by Saaksha Editor
September 26, 2025
0

'ರಾತ್ರಿ' ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು ‘ಕಾಲರಾತ್ರಿ’ ಎಂದಾಗಿದೆ. ‘ಕಾಲರಾತ್ರಿ’ ಎಂದರೆ. ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು. ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ. ಬದಲಾವಣೆಗಳು...

Chowkidar Gets U/A Certificate After Censor Clearance

ಸೆನ್ಸಾರ್ ಪಾಸಾದ ‘ಚೌಕಿದಾರ್’ಗೆ ಸಿಕ್ತು ಯು/ಎ ಸರ್ಟಿಫಿಕೇಟ್

by Saaksha Editor
September 22, 2025
0

ಸೆನ್ಸಾರ್ ಮಂಡಳಿಯಿಂದ ಚೌಕಿದಾರ್‌ಗೆ (Chowkidar) ಮೆಚ್ಚುಗೆ.. ಪೃಥ್ವಿ-ಧನ್ಯ ಸಿನಿಮಾಗೆ ಯು/ಎ ಸರ್ಟಿಫಿಕೇಟ್ (U/A Certificate) ನೀಡಲಾಗಿದೆ. ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್ಕುಮಾರ್ ಅಭಿನಯದ ಬಹುನಿರೀಕ್ಷಿತ 'ಚೌಕಿದಾರ್'...

India vs Pakistan: Is Handshake Compulsory in Cricket Matches? What the Rules Say

ದಿ…ಶೇಕ್‌ ಹ್ಯಾಂಡ್‌ ರಿಯಲ್‌ ಕಹಾನಿ..!

by Saaksha Editor
September 16, 2025
0

ಶೇಕ್‌ ಹ್ಯಾಂಡ್‌ ಮಾಡಲೇಬೇಕು ಎಂಬ ರೂಲ್ಸ್‌ ಯಾವ ಕ್ರೀಡಾ ರೂಲ್ಸ್‌ ಬುಕ್‌ಗಳಲ್ಲೂ ಇಲ್ಲ. ಅದು ಕ್ರಿಕೆಟ್‌ ಇರಲಿ.. ಬೇರೆ ಯಾವುದೇ ಕ್ರೀಡೆಯೇ ಆಗಿರಲಿ.. ಶೇಕ್‌ ಹ್ಯಾಂಡ್‌ ಅನ್ನೋದು...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram