ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ `ಚೆಂಡನ ಬೆಡಗಿ’
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಕಿರುತೆರೆಯ ಬ್ಲಾಕ್ ಬಸ್ಟರ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟು ಇಂದಿನಿಂದ ಆರಂಭವಾಗಿದ್ದು, ಮೊಗ್ಗಿನ ಮನಸ್ಸು ಸಿನಿಮಾ ಖ್ಯಾತಿಯ ನಟಿ ಶುಭ ಪೂಂಜಾ ಅವರು ಎರಡನೇ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದಾರೆ.
ಅಂದಹಾಗೆ ಶುಭಾ ಪೂಂಜಾ ಅವರಿಗೆ ಕಳೆದ ಎಲ್ಲಾ ಸೀಸನ್ ಗೂ ಅವಕಾಶ ಸಿಕ್ಕಿತ್ತಂತೆ. ಇನ್ನು ಕಿಚ್ಚ ಸುದೀಪ್ ಶುಭಾ ಪೂಂಜಾ ಅವರನ್ನ ವೆಲ್ ಕಂ ಮಾಡಿದ್ರು. ಈ ವೇಳೆ ನಟಿ ಶುಭಾ ಪೂಂಜಾ ಮಾತನಾಡುತ್ತಾ, ಬಿಗ್ ಬಾಸ್ ಗೆ ಬರಲು ಅವರ ಭಾವಿ ಪತಿ ಸುಮಂತ್ ಅವರೇ ಕಾರಣ ಅಂತಾ ಹೇಳಿದ್ರು. ‘ಈ ವರ್ಷ ಹೇಗೋ ಮದುವೆ ಆಗುತ್ತೇವೆ, ಅದಾದ ಮೇಲೆ ನನ್ನ ಗಂಡ ನನ್ನನ್ನು ಗಂಡ ಬಿಡೊಲ್ಲ, ಈಗಾದರೂ ಹೋಗಿ, ನಿನ್ನಷ್ಟದ್ದಂತೆ ಇದ್ದು ಬಾ’ ಎಂದು ಸುಮಂತ್ ಬೆಂಬಲ ನೀಡಿದ್ದಾರೆ ಅಂತಾ ನಟಿ ಹೇಳಿದ್ದಾರೆ.
ಇನ್ನು ಬಿಗ್ ಬಾಸ್ ಬಗ್ಗೆ ಮಾತನಾಡಿ, ನನ್ನ ಲೈಫ್ ನಲ್ಲಿ ರೈಟ್ ಟೈಂ ನಲ್ಲಿ ಸರಿಯಾದ ಚಾನ್ಸ್ ನನಗೆ ಸಿಕ್ಕಿದೆ. ಈ ಅವಕಾಶವನ್ನ ತೆಗೆದುಕೊಂಡು, ನನ್ನನ್ನ ನಾನು ಪ್ರೋವ್ ಮಾಡಿಕೊಂಡು ಮುಂದಿನ ಜೀವನ ಸಾಗಿಸುತ್ತೇನೆ ಎಂದ ಶುಭ ಪೂಂಜಾ, ಮೊದಲು ಬಿಗ್ ಬಾಸ್ ಗೆ ಬರಲು ಅವರಿಗೆ ತುಂಬಾ ಹೆದರಿಕೆ ಎಂದ್ರು. ಅಲ್ಲದೆ ನಾನು ತುಂಬಾ ನರ್ವಸ್ ಆಗಿದ್ದೇನೆ. ಮೊದಲ ಬಾರಿ ಸಿನಿಮಾಗೆ ಬಂದಾಗ ಎಷ್ಟು ನರ್ವಸ್ ಆಗಿದ್ದೆನೋ ಈಗಲೂ ಅಷ್ಟೆ ನರ್ವಸ್ ಆಗಿದ್ದೇನೆ ಎಂದು ಹೇಳಿದ್ರು.
ಇದಾದ ಬಳಿಕ ಆಲ್ ದಿ ಬೆಸ್ಟ್ ಹೇಳಿ ಕಿಚ್ಚ ಸುದೀಪ್ ಶುಂಭಾ ಪೂಂಜಾ ಅವರನ್ನ ಬಿಗ್ ಬಾಸ್ ಮನೆಗೆ ಒಳಗೆ ಕಳುಹಿಸಿದರು.