Siddaramaiah | ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಆರಂಭ ಮಾಡಿದ್ದು ನಮ್ಮ ಸರ್ಕಾರ
ಬೆಂಗಳೂರು : ಸಂಗೊಳ್ಳಿರಾಯಣ್ಣನ ಸ್ಮರಣಾರ್ಥ ಅಭಿವೃದ್ದಿ ಪ್ರಾಧಿಕಾರ ರಚಿಸಿ ಅಂದಾಜು ರೂ.276.93 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು ನಮ್ಮ ಸರ್ಕಾರ. ಇದರಲ್ಲಿ ರಾಜಕೀಯ ಮಾಡದೆ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಬಿಜೆಪಿ ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣ ಅಭಿವೃದ್ದಿ ಪ್ರಾಧಿಕಾರದಡಿ ಸೈನಿಕ ಶಾಲೆ (ರೂ.179 ಕೋಟಿ), ರಾಕ್ ಗಾರ್ಡನ್ (ರೂ.16 ಕೋಟಿ), ಕೆರೆ ಅಭಿವೃದ್ಧಿ (ರೂ.2 ಕೋಟಿ), ವಸ್ತು ಸಂಗ್ರಹಾಲಯ (ರೂ.77 ಕೋಟಿ) ಮತ್ತು ಕಲ್ಯಾಣ ಮಂಟಪ (ರೂ.2 ಕೋಟಿ) ನಿರ್ಮಾಣವಾಗಬೇಕಾಗಿದೆ.
ಸಂಗೊಳ್ಳಿ ರಾಯಣ್ಣ ಅಭಿವೃದ್ದಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಪ್ರಾಧಿಕಾರದ ಹಮ್ಮಿಕೊಂಡಿರುವ ಯೋಜನೆಗಳಲ್ಲಿ 70-75% ಕಾಮಗಾರಿ ಮುಗಿದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೆಲಸ ಕುಂಠಿತ ಗೊಂಡಿದೆ.
ಸಂಗೊಳ್ಳಿ ರಾಯಣ್ಣನ ನೆನಪಲ್ಲಿ ರಾಕ್ ಗಾರ್ಡನ್, ಸೈನಿಕ ಶಾಲೆ, ರಾಯಣ್ಣ ನೇಣುಗಂಭಕ್ಕೇರಿದ ಜಾಗದಲ್ಲಿ ಸ್ಮಾರಕ, ಕೆರೆ ಅಭಿವೃದ್ದಿಗೆ ಅಗತ್ಯ ಅನುದಾನ ಮತ್ತು ಜಮೀನನ್ನು ನಮ್ಮ ಸರ್ಕಾರ ನೀಡಿ ಶಂಕುಸ್ಥಾಪನೆ ಕೂಡಾ ಮಾಡಲಾಗಿತ್ತು. @BJP4Karnataka ಸರ್ಕಾರ ಇದನ್ನು ಶೀಘ್ರ ಪೂರ್ಣಗೊಳಿಸಬೇಕು. 4/13#ಸಂಗೊಳ್ಳಿರಾಯಣ್ಣ
— Siddaramaiah (@siddaramaiah) November 7, 2022
ಸಂಗೊಳ್ಳಿ ರಾಯಣ್ಣನ ನೆನಪಲ್ಲಿ ರಾಕ್ ಗಾರ್ಡನ್, ಸೈನಿಕ ಶಾಲೆ, ರಾಯಣ್ಣ ನೇಣುಗಂಭಕ್ಕೇರಿದ ಜಾಗದಲ್ಲಿ ಸ್ಮಾರಕ, ಕೆರೆ ಅಭಿವೃದ್ದಿಗೆ ಅಗತ್ಯ ಅನುದಾನ ಮತ್ತು ಜಮೀನನ್ನು ನಮ್ಮ ಸರ್ಕಾರ ನೀಡಿ ಶಂಕುಸ್ಥಾಪನೆ ಕೂಡಾ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಇದನ್ನು ಶೀಘ್ರ ಪೂರ್ಣಗೊಳಿಸಬೇಕು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪ್ರಾಧಿಕಾರದ ಕೆಲಸ ಕುಂಟುತ್ತಾ ಸಾಗಿದೆ. ಎರಡು ವರ್ಷಗಳಲ್ಲಿ ಮುಗಿಸಬಹುದಾದ ಕೆಲಸ ವಿಳಂಬವಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾವು ಸಂಗೊಳ್ಳಿ ಅಭಿವೃದ್ಧಿ ಮಾಡಿರುವುದು ಎಂದು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಬಾರದು.
ಕಳೆದ ಸೆಪ್ಟಂಬರ್ ತಿಂಗಳಿನಿಂದಲೇ ಸೈನಿಕ ಶಾಲೆ ಆರಂಭವಾಗಿ ಮೊದಲ ಬ್ಯಾಚ್ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಶಾಲೆ ಪೂರ್ಣಗೊಳ್ಳಲು ಅಗತ್ಯ ಇರುವ ಅನುದಾನ ನೀಡಲು ಒಪ್ಪಿರುವ ಬಸವರಾಜ ಬೊಮ್ಮಾಯಿ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು.
ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ಎಲ್ಲ ಕಾಮಗಾರಿಗಳು 2023ರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಮುಕ್ತಾಯವಾಗಬೇಕು. ಇಂತಹ ವಿಷಯದಲ್ಲಿ ರಾಜಕೀಯ ಮಾಡಿದರೆ ರಾಯಣ್ಣನ ಬಲಿದಾನಕ್ಕೆ ಅಗೌರವ ಸಲ್ಲಿಸಿದಂತಾಗುತ್ತದೆ.
ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಹಣ ನೀಡಿಲ್ಲ ಎಂದು ನಾನು ಹೇಳುವುದಿಲ್ಲ. ಇದು ನಿರಂತರ ನಡೆಯಬೇಕಾದ ಕೆಲಸ. ಯಾವ ಪಕ್ಷದ ಸರ್ಕಾರ ಇದ್ದರೂ ಹಣ ನೀಡಬೇಕಾಗುತ್ತದೆ. ಹೀಗಿರುವಾಗ ಪ್ರಾಧಿಕಾರ ನಮ್ಮ ಸರ್ಕಾರದ ಸಾಧನೆ ಎಂದು ಮುಖ್ಯಮಂತ್ರಿಗಳು ತಪ್ಪು ಮಾಹಿತಿ ನೀಡಬಾರದು.
ಕೇಂದ್ರ ರಕ್ಷಣಾ ಇಲಾಖೆಯಡಿ ನಡೆಯುವ ಸಂಗೊಳ್ಳಿಯ ಸೈನಿಕ ಶಾಲೆಗೆ ಪ್ರತಿವರ್ಷ ರೂ.12 ಕೋಟಿ ಖರ್ಚಾಗುತ್ತದೆ. ಇದಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೋರಲು ರಾಜನಾಥ್ ಸಿಂಗ್ ಮತ್ತು ಬಸವರಾಜ ಬೊಮ್ಮಾಯಿ ಅವರ ಬಳಿ ಮಾತನಾಡುತ್ತೇನೆ.
ನಾನು ಹಿಂದೆ ಹಣಕಾಸು ಸಚಿವನಾಗಿದ್ದಾಗ ಕೊಡಗಿನಲ್ಲಿ ಸೈನಿಕ ಶಾಲೆಗೆ ಮಂಜೂರಾತಿ ನೀಡಿದ್ದೆ. ಕೊಡಗಿನ ಯುವಕರು ಸೈನ್ಯ ಸೇರಲು ಆಸಕ್ತಿ ತೋರುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿ ಸೈನಿಕ ಶಾಲೆ ಪ್ರಾರಂಭಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಂತೆ ಬಸವರಾಜ ಬೊಮ್ಮಾಯಿ ಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸಂಗೊಳ್ಳಿ ಅಭಿವೃದ್ದಿ ಪ್ರಾಧಿಕಾರ ಮಾತ್ರವಲ್ಲ ಕಾಗಿನೆಲೆಯನ್ನೂ ತಾವೇ ಅಭಿವೃದ್ದಿ ಮಾಡಿದ್ದೇವೆ ಎಂದು ಬೊಮ್ಮಾಯಿಯವರು ಸುಳ್ಳು ಹೇಳುತ್ತಿದ್ದಾರೆ.
ಕೇಂದ್ರ ರಕ್ಷಣಾ ಇಲಾಖೆಯಡಿ ನಡೆಯುವ ಸಂಗೊಳ್ಳಿಯ ಸೈನಿಕ ಶಾಲೆಗೆ ಪ್ರತಿವರ್ಷ ರೂ.12 ಕೋಟಿ ಖರ್ಚಾಗುತ್ತದೆ. ಇದಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೋರಲು @rajnathsingh ಮತ್ತು @BSBommai ಅವರ ಬಳಿ ಮಾತನಾಡುತ್ತೇನೆ. 9/13#ಸಂಗೊಳ್ಳಿರಾಯಣ್ಣ
— Siddaramaiah (@siddaramaiah) November 7, 2022
ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಆರಂಭ ಮಾಡಿದ್ದು ನಮ್ಮ ಸರ್ಕಾರ. ಬೈಲಹೊಂಗಲದಲ್ಲಿರುವ ಚೆನ್ನಮ್ಮನವರ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಮಾಡುತ್ತೇವೆ.
ಕಿತ್ತೂರು ಕೋಟೆಯನ್ನು ಅಭಿವೃದ್ಧಿಪಡಿಸಲಿ, ಅದನ್ನು ಬೇರೆಕಡೆ ಸ್ಥಳಾಂತರ ಮಾಡುವ ಅಗತ್ಯ ಇಲ್ಲ. ಬಿಜೆಪಿ ಸರ್ಕಾರಕ್ಕೆ ಇದರ ಮರುನಿರ್ಮಾಣ ಮಾಡುವ ಆಲೋಚನೆ ಇದ್ದರೆ ಅದನ್ನು ಕೈಬಿಡಬೇಕು. ಸ್ಥಳಾಂತರ ಮಾಡಿದ ಮೇಲೆ ಅದು ಚೆನ್ನಮ್ಮ ಕಟ್ಟಿದ ಕೋಟೆ ಎಂದು ಹೇಗೆ ಕರೆಯೋಕೆ ಆಗುತ್ತೆ ಎಂದು ಪ್ರಶ್ನಿಸಿದ್ದಾರೆ.