ಆಸ್ಟ್ರೇಲಿಯಾ ವೇದಿಕೆಯಾಗಿ ನಡೆಯಲಿರುವ ಟಿ 20 ವಿಶ್ವಕಪ್ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಖಂಡಿತವಾಗಿ ಇರಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಸಯ್ಯದ್ ಕಿರ್ಮಾಣಿ ಹೇಳಿದ್ದಾರೆ.
ಈ ಮೆಗಾ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಗೇಮ್ ಚೇಂಜರ್ ಆಗಿರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಕೆಲವು ವರ್ಷಗಳಿಂದ ಕಳಫೆ ಪಾರ್ಮ್ ನಲ್ಲಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಕೊಹ್ಲಿ ನಿರಾಸೆ ಮೂಡಿಸಿದರು.
ಈ ಕ್ರಮದಲ್ಲಿ ವಿಂಡೀಸ್ ಟೂರ್ ನಲ್ಲಿ ಕೊಹ್ಲಿ ಸೆಲೆಕ್ಟರ್ ಗಳು ವಿಶ್ರಾಂತಿ ನೀಡಿದ್ದಾರೆ.

ಈ ಬ್ಯಾಟರ್ ಏಪ್ಯಾ ಟೂರ್ನಿಗಾಗಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ.
ವಿರಾಟ್ ಕೊಹ್ಲಿಗೆ ಸಾಕಷ್ಟು ಅನುಭವವಿದೆ. ಅವರು ಟಿ20 ವಿಶ್ವಕಪ್ ತಂಡದಲ್ಲಿ ಇರಬೇಕು.
ಕೊಹ್ಲಿ ಒಮ್ಮೆ ಫಾರ್ಮ್‌ಗೆ ಬಂದರೆ ಅವರನ್ನು ತಡೆಯುವವರು ಯಾರೂ ಇಲ್ಲ.
ಅನುಭವ ಮತ್ತು ಅತ್ಯುತ್ತಮ ಕೌಶಲ್ಯ ಹೊಂದಿರುವ ಕೊಹ್ಲಿಯಂತಹ ಆಟಗಾರ ತಂಡದಲ್ಲಿ ಅತ್ಯಗತ್ಯ.
ಇನ್ನು ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದೆ.
ಆದ್ರೆ ಕೊಹ್ಲಿ ಅಧ್ಬುತವಾದ ಆಟಗಾರ. ಹೀಗಾಗಿ ಅವರಿಗೆ ತಂಡದಲ್ಲಿ ಅವಕಾಶ ನೀಡಬೇಕು ಎಂದು ಕಿರ್ಮಾಣಿ ಹೇಳಿದ್ದಾರೆ.
T20 World Cup







