ಇಸ್ರೇಲ್ ಸ್ವಾತಂತ್ರ್ಯದ ದಿನದಂದೇ ಉಗ್ರರ ಅಟ್ಟಹಾಸ – ಮೂವರ ಸಾವು
ಇಸ್ರೇಲ್ ನ ಸ್ವಾತಂತ್ರ್ಯ ದಿನದಂದೇ ಭಯೋತ್ಪಾದಕರು ಎಲಾಡ್ ನಗರದ ಮೇಲೆ ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ದಾಳಿಯಲ್ಲಿ ಮೂವರು ನಾಗರೀಕರು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.
ನಗರದಲ್ಲಿ ಸಂಚರಿಸುತ್ತಿದ್ದ ಜನರ ಮೇಲೆ ಚಾಕು, ಕೊಡಲಿಗಳಿಂದ ದಾಳಿ ನಡೆಸಿರುವ ಉಗ್ರರು ಮೂವರನ್ನು ಕೊಂದಿದ್ದಾರೆ. ಇನ್ನೂ ಮೂವರು ವ್ಯಕ್ತಿಗಳು ಗಂಭೀರವಾಗಿ ಗಾಯಗಳಾಗಿವೆ. ತಕ್ಷಣವೇ ಕಾರ್ಯಾಚರಣೆಗೆ ಇಳಿದಿರುವ ಇಸ್ರೇಲಿ ಸೇನಾಪಡೆಗಳು ನಗರದ ರಸ್ತೆಗಳನ್ನು ಬಂದ್ ಮಾಡಿ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಉಗ್ರರನ್ನ ಬೇಟೆಯಾಡಲು ಪ್ರಾರಂಭಿಸಿವೆ.
ಇಸ್ರೇಲ್‌ನ ವಿದೇಶಾಂಗ ಸಚಿವ ಯೈರ್ ಲ್ಯಾಪಿಡ್ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ವಾತಂತ್ರ್ಯ ದಿನದ ಸಂತೋಷವನ್ನು ಉಗ್ರರು ಕ್ಷಣಾರ್ಧದಲ್ಲಿ ನಾಶಪಡಿಸಿದ್ದಾರೆ. ಕೊಲೆಗಾರರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದ್ದಾರೆ. 35-60 ವಯಸ್ಸಿನ ಪುರುಷರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತೀಳಿದುಬಂದಿದೆ.
ಎಲಾಡ್‌ನ 50,000 ನಿವಾಸಿಗಳಲ್ಲಿ ಹೆಚ್ಚಿನವರು ಸಂಪ್ರದಾಯಸ್ಥ ಯಹೂದಿ ಸಮುದಾಯದ ಸದಸ್ಯರಾಗಿದ್ದಾರೆ, ಇವರನ್ನು ಹರೆಡಿಮ್ ಎಂದು ಕರೆಯಲಾಗುತ್ತದೆ.








