ADVERTISEMENT
Monday, February 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಕುರ್ಚಿ ಬಿಡೋದು ಸಿದ್ದರಾಮಯ್ಯ ರಕ್ತದಲ್ಲೇ ಇಲ್ಲ: ಆಶ್ರಯ ಕೊಟ್ಟ ಪಕ್ಷವನ್ನೇ ನುಂಗುವುದು ಸಿದ್ದರಾಮಯ್ಯ ಬುದ್ಧಿ – ಎಚ್‌ಡಿಕೆ ಆಕ್ರೋಶ

Shwetha by Shwetha
February 23, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಕುರುಬ ಸಮುದಾಯದ ಹೆಸರನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಇತ್ತೀಚಿನ ಸರಣಿ ಟ್ವೀಟ್‌ಗಳು ಮತ್ತು ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರ ಅಧಿಕಾರದ ಲಾಲಸೆಗೆ ಇಡೀ ಸಮುದಾಯವನ್ನು ಎಳೆದು ತರುತ್ತಿರುವುದು ಅವರ ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಸಂದೇಶ ರವಾನೆ ಯಾರಿಗೆ?

Related posts

ಶಿರಹಟ್ಟಿ BJP ಶಾಸಕನ ರಾಜಕೀಯ ಜೀವನ ಮುಗಿಸಲು ಮಠದೊಳಗೇ ನಡೀತಾ ಸಂಚು? ಆಡಿಯೋದಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

ಶಿರಹಟ್ಟಿ BJP ಶಾಸಕನ ರಾಜಕೀಯ ಜೀವನ ಮುಗಿಸಲು ಮಠದೊಳಗೇ ನಡೀತಾ ಸಂಚು? ಆಡಿಯೋದಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

February 23, 2026
RTE ಉಚಿತ ಸೀಟಿಗೆ ಮಾ.16 ರಿಂದ ಅರ್ಜಿ ಸಲ್ಲಿಕೆ ಆರಂಭ: ಪೋಷಕರು ಈ ದಾಖಲೆಗಳನ್ನು ಕೂಡಲೇ ರೆಡಿ ಮಾಡಿಕೊಳ್ಳಿ

RTE ಉಚಿತ ಸೀಟಿಗೆ ಮಾ.16 ರಿಂದ ಅರ್ಜಿ ಸಲ್ಲಿಕೆ ಆರಂಭ: ಪೋಷಕರು ಈ ದಾಖಲೆಗಳನ್ನು ಕೂಡಲೇ ರೆಡಿ ಮಾಡಿಕೊಳ್ಳಿ

February 23, 2026

ಮುಖ್ಯಮಂತ್ರಿಗಳು ತಾವು ಕುರುಬ ಸಮುದಾಯದವರು ಎಂಬ ಕಾರಣಕ್ಕೆ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಸಂಚು ನಡೆಯುತ್ತಿದೆ ಎಂದು ಹೇಳುವ ಮೂಲಕ ಯಾರಿಗೆ ಸಂದೇಶ ಕೊಡಲು ಹೊರಟಿದ್ದಾರೆ? ಇದು ಕಾಂಗ್ರೆಸ್ ಹೈಕಮಾಂಡಿಗಾ ಅಥವಾ ಪಕ್ಷದೊಳಗೆ ಅವರ ಕುರ್ಚಿ ಅಲುಗಾಡಿಸಲು ನಿಂತಿರುವವರಿಗಾ ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಜಾತಿಯನ್ನು ಮುನ್ನೆಲೆಗೆ ತರುವ ಮೂಲಕ, ಅವರ ಹೃದಯದಲ್ಲಿ ಜಾತ್ಯಾತೀತತೆಗಿಂತ ಜಾತಿ ಪ್ರೇಮವೇ ಎಷ್ಟರಮಟ್ಟಿಗೆ ತುಂಬಿದೆ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.

ಸಾಮಾಜಿಕ ನ್ಯಾಯದ ಹೆಸರಲ್ಲಿ ನಾಟಕ

ವೇದಿಕೆಗಳಲ್ಲಿ ಬಸವಣ್ಣ, ಅಂಬೇಡ್ಕರ್ ಅವರ ಹೆಸರು ಹೇಳುತ್ತಾ ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತ ತತ್ವಗಳ ಬಗ್ಗೆ ಭಾಷಣ ಮಾಡುವ ಸಿದ್ದರಾಮಯ್ಯ, ಅಧಿಕಾರಕ್ಕೆ ಕುತ್ತು ಬಂದಾಗ ಮಾತ್ರ ಜಾತಿ ಅಸ್ತ್ರ ಪ್ರಯೋಗಿಸುತ್ತಾರೆ. ಸಿದ್ದರಾಮಯ್ಯ ಬೆಳೆಯಲು ಕೇವಲ ಕುರುಬ ಸಮಾಜ ಮಾತ್ರವಲ್ಲ, ರಾಜ್ಯದ ಎಲ್ಲಾ ಸಮುದಾಯಗಳು ಬೆಂಬಲ ನೀಡಿವೆ. ಆದರೆ ಈಗ ತಮ್ಮ ವೈಯಕ್ತಿಕ ಅಧಿಕಾರಕ್ಕಾಗಿ ಇಡೀ ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ನನಗೆ ಅಸೂಯೆಯಿಂದ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳುವ ಮೂಲಕ ಅನುಕಂಪ ಗಿಟ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಆಶ್ರಯ ಕೊಟ್ಟ ಪಕ್ಷವನ್ನೇ ನುಂಗುವ ಜಾಯಮಾನ

ಸಿದ್ದರಾಮಯ್ಯ ಅವರಿಗೆ ಕುರ್ಚಿ ಬಿಟ್ಟುಕೊಡುವ ಜಾಯಮಾನ ಮೊದಲಿನಿಂದಲೂ ಇಲ್ಲ. ಅಧಿಕಾರ ಬಿಟ್ಟುಕೊಡುವುದು ಅವರ ರಕ್ತದಲ್ಲೇ ಬಂದಿಲ್ಲ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗಲೂ ಕುರ್ಚಿಗಾಗಿ ಇದೇ ರೀತಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು. ಅಂದು ನಾವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಇಂದು ಆಶ್ರಯ ಕೊಟ್ಟ ಕಾಂಗ್ರೆಸ್ ಪಕ್ಷವನ್ನೇ ಅವರು ಆವರಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ ಮೂಲ ನಿವಾಸಿಗಳನ್ನು ಮತ್ತು ಹಿರಿಯರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಇತಿಹಾಸವನ್ನು ಕೆದಕಿದರು.

ಹೊಸ ಅಸ್ತ್ರ ಪ್ರಯೋಗ

ನಾನಿದ್ದರೆ ಮಾತ್ರ ಕಾಂಗ್ರೆಸ್, ನಾನಿಲ್ಲದಿದ್ದರೆ ಕಾಂಗ್ರೆಸ್ ಪಕ್ಷವೇ ಇಲ್ಲ ಎನ್ನುವ ವಾತಾವರಣವನ್ನು ಸಿದ್ದರಾಮಯ್ಯ ಸೃಷ್ಟಿ ಮಾಡಿದ್ದಾರೆ. ಈ ಮೂಲಕ ಸಿಎಂ ಸ್ಥಾನ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಅವರು ಎಂತಹ ತಂತ್ರಗಾರಿಕೆ ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಅಹಿಂದ ಜನರ ಉದ್ಧಾರಕ್ಕಾಗಿ ಅವರು ಅಧಿಕಾರಕ್ಕೆ ಬಂದಿಲ್ಲ, ಕೇವಲ ಸ್ವಂತ ಅಧಿಕಾರಕ್ಕಾಗಿ ಬಂದಿದ್ದಾರೆ ಎಂದು ದೂರಿದರು.

ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ

ಇದೇ ವೇಳೆ ಮೈತ್ರಿ ಪಕ್ಷಗಳ ನಡುವಿನ ಗೊಂದಲ ನಿವಾರಣೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮನ್ವಯ ಸಮಿತಿ ರಚನೆಯಾಗಬೇಕು ಎಂಬುದು ಬಿಜೆಪಿ ಕಾರ್ಯಕಾರಣಿಯಲ್ಲೂ ಚರ್ಚೆಯಾಗಿದೆ. ಗೊಂದಲಗಳನ್ನು ಬಗೆಹರಿಸಿಕೊಂಡು ಒಟ್ಟಾಗಿ ಹೋಗಲು ಸಮಿತಿ ಅವಶ್ಯಕ ಎಂದು ನಾನು ಮೊದಲೇ ಹೇಳಿದ್ದೆ. ನಮ್ಮ ಪಕ್ಷದ ಕಡೆಯಿಂದ ಮೈತ್ರಿ ಧರ್ಮಕ್ಕೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ShareTweetSendShare
Join us on:

Related Posts

ಶಿರಹಟ್ಟಿ BJP ಶಾಸಕನ ರಾಜಕೀಯ ಜೀವನ ಮುಗಿಸಲು ಮಠದೊಳಗೇ ನಡೀತಾ ಸಂಚು? ಆಡಿಯೋದಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

ಶಿರಹಟ್ಟಿ BJP ಶಾಸಕನ ರಾಜಕೀಯ ಜೀವನ ಮುಗಿಸಲು ಮಠದೊಳಗೇ ನಡೀತಾ ಸಂಚು? ಆಡಿಯೋದಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

by Shwetha
February 23, 2026
0

ಗದಗ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರ ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಇದೀಗ ಮಹತ್ವದ ಹಾಗೂ ಸ್ಫೋಟಕ ತಿರುವು ಸಿಕ್ಕಿದೆ. ಶಾಸಕರನ್ನು ಉದ್ದೇಶಪೂರ್ವಕವಾಗಿ ಕಾನೂನಿನ ಕುಣಿಕೆಯಲ್ಲಿ...

RTE ಉಚಿತ ಸೀಟಿಗೆ ಮಾ.16 ರಿಂದ ಅರ್ಜಿ ಸಲ್ಲಿಕೆ ಆರಂಭ: ಪೋಷಕರು ಈ ದಾಖಲೆಗಳನ್ನು ಕೂಡಲೇ ರೆಡಿ ಮಾಡಿಕೊಳ್ಳಿ

RTE ಉಚಿತ ಸೀಟಿಗೆ ಮಾ.16 ರಿಂದ ಅರ್ಜಿ ಸಲ್ಲಿಕೆ ಆರಂಭ: ಪೋಷಕರು ಈ ದಾಖಲೆಗಳನ್ನು ಕೂಡಲೇ ರೆಡಿ ಮಾಡಿಕೊಳ್ಳಿ

by Shwetha
February 23, 2026
0

ಬೆಂಗಳೂರು: ರಾಜ್ಯದ ಪೋಷಕರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಓದಿಸಬೇಕು ಎಂಬ ಕನಸು ಹೊತ್ತಿರುವ ಪೋಷಕರಿಗಾಗಿ ಕರ್ನಾಟಕ ಶಾಲಾ ಶಿಕ್ಷಣ...

ಯಾವ ಪಕ್ಷದಲ್ಲಿ ಸತ್ಯಹರಿಶ್ಚಂದ್ರನ ಮಕ್ಕಳಿದ್ದಾರೆ? ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ಕೆ ಎನ್ ರಾಜಣ್ಣ ಅಚ್ಚರಿಯ ಬ್ಯಾಟಿಂಗ್

ಯಾವ ಪಕ್ಷದಲ್ಲಿ ಸತ್ಯಹರಿಶ್ಚಂದ್ರನ ಮಕ್ಕಳಿದ್ದಾರೆ? ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ಕೆ ಎನ್ ರಾಜಣ್ಣ ಅಚ್ಚರಿಯ ಬ್ಯಾಟಿಂಗ್

by Shwetha
February 23, 2026
0

ಬೆಂಗಳೂರು: ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕನ ಬಂಧನ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಭ್ರಷ್ಟಾಚಾರದ...

ಜಾಗತಿಕ ಕಾರ್ಯಕ್ರಮಕ್ಕೆ ಮಸಿ ಬಳಿದ ಕಾಂಗ್ರೆಸ್:ನೀವು ಈಗಾಗಲೇ ಬೆತ್ತಲಾಗಿದ್ದೀರಿ, ಬಟ್ಟೆ ಬಿಚ್ಚುವ ಅಗತ್ಯವೇನಿತ್ತು? ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ

ಜಾಗತಿಕ ಕಾರ್ಯಕ್ರಮಕ್ಕೆ ಮಸಿ ಬಳಿದ ಕಾಂಗ್ರೆಸ್:ನೀವು ಈಗಾಗಲೇ ಬೆತ್ತಲಾಗಿದ್ದೀರಿ, ಬಟ್ಟೆ ಬಿಚ್ಚುವ ಅಗತ್ಯವೇನಿತ್ತು? ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ

by Shwetha
February 23, 2026
0

ಮೀರತ್: ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ನಾಯಕರು ಶರ್ಟ್ ಧರಿಸದೆ ನಡೆಸಿದ ಪ್ರತಿಭಟನೆಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ...

ಅಂಗಿ ಬಿಚ್ಚಿ ಪ್ರತಿಭಟಿಸಿದ ಕೈ ಕಾರ್ಯಕರ್ತರು, ರಾಗಾ ಬೆಂಬಲಕ್ಕೆ ನಿಂತ ಪ್ರಿಯಾಂಕ್ ಖರ್ಗೆ : ಬಿಜೆಪಿ ದ್ವಂದ್ವ ನೀತಿಯ ವಿರುದ್ಧ ಸಚಿವರ ಕಿಡಿ

ಅಂಗಿ ಬಿಚ್ಚಿ ಪ್ರತಿಭಟಿಸಿದ ಕೈ ಕಾರ್ಯಕರ್ತರು, ರಾಗಾ ಬೆಂಬಲಕ್ಕೆ ನಿಂತ ಪ್ರಿಯಾಂಕ್ ಖರ್ಗೆ : ಬಿಜೆಪಿ ದ್ವಂದ್ವ ನೀತಿಯ ವಿರುದ್ಧ ಸಚಿವರ ಕಿಡಿ

by Shwetha
February 23, 2026
0

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳಿಗೆ ರಾಜ್ಯದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram