ಪ್ರಧಾನಿಯನ್ನು ವಜಾಗೊಳಿಸಿದ ಶ್ರೀಲಂಕಾ ಅಧ್ಯಕ್ಷ
ಶ್ರೀಲಂಕಾ: ರಾವಣೇಶ್ವರನ ನಾಡು ಆರ್ಥಿಕವಾಗಿ ಸಂಪೂರ್ಣವಾಗಿ ಕುಸಿದಿದ್ದು, ಸದ್ಯ ಅಧ್ಯಕ್ಷ ಗೋಟಬಯ ರಾಜಪಕ್ಸ, ಸಹೋದರ ಮಹಿಂದಾ ರಾಜಪಕ್ಸ ಅವರನ್ನು ಶ್ರೀಲಂಕಾ ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿದ್ದಾರೆ.
ದೇಶದಲ್ಲಿನ ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದ ರೋಸಿ ಹೋದ ಶ್ರೀಲಂಕಾ ಪ್ರಜೆಗಳು ಸರಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶ್ರೀಲಂಕಾ ಅಧ್ಯಕ್ಷ ಗೋಟಬಯ ತಕ್ಷಣವೇ ರಾಜೀನಾಮೆ ನೀಡುವಂತೆ ಆಗ್ರಹಗಳು ಕೇಳಿಬರುತ್ತಿವೆ.
ಶ್ರೀಲಂಕಾದಲ್ಲಿ ಅಗತ್ಯವಸ್ತುಗಳು, ಆಹಾರ ಪದಾರ್ಥಗಳು, ಔಷಧಗಳ ದೇಶದಲ್ಲಿ ಗಗನ ಮುಟ್ಟಿದೆ. ದೇಶವನ್ನು ದಿವಾಳಿಯಂಚಿಗೆ ತಳ್ಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ರಾಜಪಕ್ಸ ಕುಟುಂಬ ರಾಜಕೀಯದ ವಿರುದ್ಧ ಜನರು ಬೀದಿಗಳಿದು ಪ್ರತಿಭಟಿಸುತ್ತಿದ್ದಾರೆ.
ಈ ಮಧ್ಯೆ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲು ರಾಷ್ಟ್ರೀಯ ಮಂಡಳಿಯನ್ನು ನೇಮಿಸಲಾಗುವುದು, ಎಲ್ಲಾ ಪಕ್ಷಗಳನ್ನು ಒಳಗೊಂಡಿರುವ ಕ್ಯಾಬಿನೆಟ್ ನ್ನು ಸಂಸತ್ತಿನಲ್ಲಿ ರಚಿಸಲಾಗುವುದು, ಈ ಪ್ರಕ್ರಿಯೆಗೆ ಅಧ್ಯಕ್ಷ ಗೋಟಬಯ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದ ಮೈತ್ರಿಪಾಲ ಸಿರಿಸೇನಾ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.







