ಉಗ್ರರ ಜತೆ ಗುಂಡಿನ ಕಾಳಗದ ವೇಳೆ ಕೋಲಾರ ಮೂಲದ ಯುವಯೋಧ ಪ್ರತಾಂಶ್ ಅವರು ಹುತಾತ್ಮರಾಗಿದ್ದಾರೆ. ಯೋಧ ಪ್ರಶಾಂತ್(೨೫) ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಣಿಂಬೆಲೆ ಗ್ರಾಮದವರಾಗಿದ್ದಾರೆ. ನಿನ್ನೆ ಜಮ್ಮುಕಾಶ್ಮೀರದ ರಜೋರಿ ಪ್ರದೇಶದಲ್ಲಿ ಉಗ್ರರ ಜತೆ ಗುಂಡಿನ ಕಾಳಗ ನಡೆದಿದೆ. ಈ ವೇಳೆ ಉಗ್ರರ ಗುಂಡಿಗೆ ಯೋಧ ಪ್ರಶಾಂತ್ ಹುತಾತ್ಮರಾಗಿದ್ದಾರೆ.
ಈಗಾಗಲೇ ತಂದೆಯನ್ನು ಕಳೆದುಕೊಂಡಿರುವ ಯೋಧ ಪ್ರಶಾಂತ್ ಮನೆಯವರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.
ಪ್ರಶಾಂತ್ ಅವರ ಪಾರ್ಥಿವ ಶರೀರವನ್ನು ನಾಳೆ ಸ್ವ ಗ್ರಾಮಕ್ಕೆ ಕಳುಹಿಸಲಾಗುತ್ತಿದೆ. ಮದ್ರಾಸ್ ಎಂಆರ್‌ಸಿ ೧೭ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇನ್ನು ಯೋಧನ ಸಾವಿನ ಸುದ್ದಿಯಿಂದ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
ಇನ್ನು ಯೋಧನ ಸಾವಿಗೆ ಸಿಎಂ ಬಿಎಸ್ ವೈ ಸಂತಾಪ ಸೂಚಿಸಿದ್ದು, ‘ದೇಶಕ್ಕಾಗಿ ವೀರ ಮರಣ ಅಪ್ಪಿದ ಪ್ರಶಾಂತ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ’ ಎಂದು ತಿಳಿಸಿದ್ದಾರೆ.







