ಮೆಗಾಸ್ಟಾರ್ ಕುಟುಂಬದ ಮತ್ತೊಬ್ಬ ನಟನಿಗೆ ಕೊರೊನಾ ಪಾಸಿಟಿವ್..!
ಇಂದು ಬೆಳಿಗ್ಗೆಯಷ್ಟೇ ಮೆಗಾಸ್ಟಾರ್ ಪುತ್ರ ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢವಾಗಿತ್ತು. ಈ ಬಗ್ಗೆ ರಾಮ್ ಚರಣ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು ಸುದ್ದಿ ತಿಳಿದು ರಾಮ್ ಚರಣ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮೆಗಾಸ್ಟಾರ್ ಫ್ಯಾಮಿಲಿಯ ಮತ್ತೊಬ್ಬ ನಟನಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ನಟ ವರುಣ್ ತೇಜ ಅವರಿಗೂ ಕೊವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಕುರಿತು ಸ್ವತಃ ವರುಣ್ ತೇಜ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ‘ಇಂದು ಕೊರೊನಾ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ರೋಗಲಕ್ಷಣಗಳು ಕಂಡು ಬಂದಿದೆ. ಪ್ರಸ್ತುತ, ಮನೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ. ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದೇನೆ. ಆದಷ್ಟೂ ಬೇಗ ಚೇತರಿಕೆ ಕಂಡು ವಾಪಸ್ ಬರುತ್ತೇನೆ, ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
‘ಟಾಲಿವುಡ್’ ನಲ್ಲಿ ಅಬ್ಬರಿಸಲಿದ್ದಾರೆ ‘ಸ್ಯಾಂಡಲ್ ವುಡ್ ‘ಪವರ್ ಸ್ಟಾರ್’..!
ರಾಮ್ ಚರಣ್ ಹಾಗೂ ವರುಣ್ ತೇಜ ಇಬ್ಬರಿಗೂ ಕೊರೊನಾ ಸೋಂಕು ದೃಢವಾಗುತ್ತಿದ್ದಂತೆ ಮೆಗಾ ಕುಟುಂಬದ ಸದಸ್ಯರಿಗೆ ಆತಂಕ ಕಾಡುತ್ತಿದೆ. ಇತ್ತೀಚಿಗಷ್ಟೆ ಮೆಗಾ ಫ್ಯಾಮಿಲಿಯ ಎಲ್ಲ ಸದಸ್ಯರು ಒಟ್ಟಿಗೆ ಸೇರಿ ಕ್ರಿಸ್‌ಮಸ್ ಆಚರಣೆ ಮಾಡಿದ್ದರು. ಅದಕ್ಕೂ ಕೆಲವೇ ದದಿನಗಳ ಹಿಂದೆ ರಾಜಸ್ಥಾನದಲ್ಲಿ ನಾಗಬಾಬು ಮಗಳು ನಟಿ ನಿಹಾರಿಕಾ ಮದುವೆಯಲ್ಲಿ ಎಲ್ಲರು ಪಾಲ್ಗೊಂಡು ಸಂಭ್ರಮಾಚರಣೆ ಮಾಡಿದ್ರು. ಇದರ ಬೆನ್ನಲ್ಲೇ ಇಬ್ಬರಲ್ಲೂ ಸೋಂಕು ಪತ್ತೆಯಾಗಿರೋದರಿಂದ ಮತ್ತಷ್ಟು ಸದಸ್ಯರಿಗೂ ಸೋಂಕು ತಗಲುವ ಆತಂಕ ಎದುರಾಗಿದೆ.
ಅಂದ್ಹಾಗೆ ರಾಮ್ ಚರಣ್ ಮನೆಯಲ್ಲಿ ನಡೆದ ಕ್ರಿಸ್‌ಮಸ್ ಪಾರ್ಟಿಯಲ್ಲಿ ಅಲ್ಲು ಅರ್ಜುನ್, ನಿಹಾರಿಕ ದಂಪತಿ, ಅಲ್ಲು ಸಿರೀಶ್, ಬಾಬಿ, ಸಾಯಿ ಧರಮ್ ತೇಜ ಸೇರಿದಂತೆ ಅನೇಕರು ಭಾಗಿಯಾಗಿದ್ರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








