ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬೆಚ್ಚಿ ಬೀಳಿಸುವಂತಹ ಭೀಕರ ಅಪಘಾತ ನಡೆದಿದೆ. KSRTC ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ತಲೆಯನ್ನು ಕಿಟಕಿಯಿಂದ ಹೊರ ಹಾಕಿದಾಗ ಅವರ ರುಂಡವೇ ಕಟ್ ಆದ ದುರಂತ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಗುಂಡ್ಲುಪೇಟೆಯಿಂದ ನಂಜನಗೂಡಿಗೆ ತೆರಳುತ್ತಿದ್ದ KSRTC ಬಸ್‌ನಲ್ಲಿ ಮಹಿಳೆ ತನ್ನ ತಲೆಯನ್ನು ಕಿಟಕಿಯಿಂದ ಹೊರ ಹಾಕಿದ್ದಳು. ಆ ಸಮಯದಲ್ಲಿ ಮುಂಭಾಗದಿಂದ ವೇಗವಾಗಿ ಬಂದ ಲಾರಿಯೊಂದು ಬಸ್‌ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ, ಮಹಿಳೆಯ ತಲೆ ಲಾರಿಗೆ ತಾಗಿದ್ದು, ಸ್ಥಳದಲ್ಲಿಯೇ ಆಕೆಯ ರುಂಡ ದೇಹದಿಂದ ಬೇರ್ಪಟ್ಟಿದೆ. ಈ ಭೀಕರ ಅಪಘಾತವನ್ನು ಕಂಡ ಬಸ್‌ನ ಇತರ ಪ್ರಯಾಣಿಕರು ತಕ್ಷಣವೇ ಆಘಾತಕ್ಕೆ ಒಳಗಾದರು.
ವಾಂತಿ ಮಾಡಲು ಬಸ್‌ನ ಕಿಟಕಿಯಿಂದ ತಲೆಯನ್ನು ಹೊರ ಹಾಕಿದಾಗ, ಎದುರಿನಿಂದ ವೇಗವಾಗಿ ಬಂದ ಟ್ಯಾಂಕರ್ ಲಾರಿಯೊಂದು ಡಿಕ್ಕಿ ಹೊಡೆದು, ತಕ್ಷಣವೇ ಆಕೆಯ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಮರಣಹೊಂದಿದ ಮಹಿಳೆಯ ಗುರುತನ್ನು ಪತ್ತೆ ಹಚ್ಚಲು ಕ್ರಮಗಳನ್ನು ಕೈಗೊಂಡಿದ್ದಾರೆ.
ಘಟನೆಯ ನಂತರ, ಮೈಸೂರು ಅರ್ಬನ್ ಡಿವಿಷನ್‌ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಮರಾಜನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಲಾರಿ ಚಾಲಕನನ್ನು ವಿಚಾರಣೆಗಾಗಿ ಬಂಧಿಸಲಾಗಿದೆ.
ಈ ಅಪಘಾತ ರಾಜ್ಯಾದ್ಯಾಂತ ಆಘಾತವನ್ನು ಉಂಟುಮಾಡಿದ್ದು,ಈ ದುರಂತದ ಕುರಿತಾಗಿ ತನಿಖೆ ಮುಂದುವರಿಯುತ್ತಿದೆ.







