Twitter : ಟ್ವಿಟ್ಟರ್ ಕಚೇರಿ ಬಾಡಿಗೆ ಪಾವತಿಸದ ಹಿನ್ನೆಲೆ ಹೊರನಡೆದ ಉದ್ಯೋಗಿಗಳು..!!
ಪ್ರಸ್ತುತ ಅತ್ಯಂತ ಜನಪ್ರಿಯ ಸೋಷಿಯಲ್ ಮೀಡಿಯ ಫ್ಲಾಟ್ ಫಾರ್ಮ್ ಟ್ವಿಟ್ಟರ್ ನ ಮಾಲೀಕತ್ವ ಎಲಾನ್ ಮಸ್ಕ್ ಅವರದ್ದಾಗಿದೆ.. ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಒಂದಲ್ಲಾ ಒಂದು ಕಾರಣದಿಂದ ಟ್ವಿಟ್ಟರ್ ಹಾಗೂ ಮಸ್ಕ್ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ..
ಸಿಂಗಾಪುರದಲ್ಲಿ ಕಚೇರಿ ಬಾಡಿಗೆಯನ್ನು ಮಸ್ಕ್ ಪಾವತಿಸದ ಕಾರಣ ಟ್ವಿಟ್ಟರ್ ಉದ್ಯೋಗಿಗಳು ಕಚೇರಿಯಿಂದ ಹೊರನಡೆದಿದ್ದಾರೆ.
ಟ್ವಿಟ್ಟರ್ ನ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಮಾಲೀಕರು ಕಟ್ಟಡದಿಂದ ಹೊರನಡೆಯುವಂತೆ ಒತ್ತಾಯಿಸಿದ್ದಾರೆ.
ಟ್ವಿಟ್ಟರ್ ಉದ್ಯೋಗಿಗಳು ಬಾಡಿಗೆ ಪಾವತಿಸದ ಕಾರಣ ಸಿಂಗಾಪುರದ ಕಚೇರಿಯಿಂದ ಉದ್ಯೋಗಿಗಳು ಹೊರನಡೆದಿದ್ದಾರೆ ಎಂದು ಟಾಪ್ ಟೆಕ್ ವಿಶ್ಲೇಷಕ ಕೇಸಿ ನ್ಯೂಟನ್ ಟ್ವೀಟ್ ಮಾಡಿದ್ದಾರೆ. ಇದ್ರಿಂದಾಗಿ ಎಲಾನ್ ಮಸ್ಕ್ ಇನ್ನಷ್ಟು ಟೀಕೆಗೆ ಗುರಿಯಾಗಿದ್ದಾರೆ..
Twitter , elon musk’s twitter office in singapore forces employees to go out after musk didn’t paid rent of office space