ಹೆರಿಗೆ ವೇಳೆ ಮಕ್ಕಳು ಅದಲು ಬದಲು – DNA ಪರೀಕ್ಷೆ ನಡೆಸಿ ಹಸ್ತಾಂತರ…
ಆಸ್ಪತ್ರೆ ಸಿಬ್ಬಂದಿ ಯಡವಟ್ಟಿನಿಂದಾಗಿ ನವಜಾತ ಶಿಶುಗಳು ಅದಲು ಬದಲಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕೊನೆಗೆ ಡಿ ಎನ್ ಎ ಪರೀಕ್ಷೆ ನಡೆಸಿ ಮಗುವನ್ನ ಹೆತ್ತವರಿಗೆ ಹಸ್ತಾಂತರಿಸಲಾಗಿದೆ.
ಸೆಪ್ಟೆಂಬರ್ 1 ರಂದು ಜೈಪುರದ ಮಹಿಳಾ ಚಿಕಿತ್ಸಾಲಯದಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಶಿಶುಗಳು ಬದಲಾಗಿದ್ದವು. ಹೆರಿಗೆಯಾದ ಮೂರು ದಿನಗಳ ನಂತರ ಆಸ್ಪತ್ರೆ ಸಿಬ್ಬಂದಿಗೆ ತನ್ನ ತಪ್ಪಿನ ಅರಿವಾಗಿದೆ. ನಿಶಾ ಗಂಡು ಮಗುವಿಗೆ ಜನ್ಮ ನೀಡಿದ್ದರೆ, ರೇಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು ಎಂದು ಹೆಸರು ಹೇಳಲಿಚ್ಛಿಸದ ಆಸ್ಪತ್ರೆ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರಂಭದಲ್ಲಿ, ಪೋಷಕರು ತಮ್ಮ ಮಕ್ಕಳು ಪರಸ್ಪರ ಬದಲಾಗಿರುವುದನ್ನ ನಂಬಲು ನಿರಾಕರಿಸಿದ್ದಾರೆ. ಕೊನೆಗೆ ಆಸ್ಪತ್ರೆಯ ಸಿಬ್ಬಂದಿ ಪೊಲೀಸರ ಸಹಾಯದಿಂದ ಡಿ ಎನ್ ಎ ಮತ್ತು ರಕ್ತ ಪರೀಕ್ಷೆಯ ನಂತರ ಪೋಷಕರಿ ತಿಳಿಸಿದ ನಂತರ, ಮಗುವುನ್ನ ಪರಸ್ಪರ ಹೆತ್ತವರಿಗೆ ಹಸ್ತಾಂತರಿಸಿದ್ದಾರೆ.







