ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ, ಭಾರತಕ್ಕೆ ಮಹತ್ವದ ಸುದ್ದಿ ಲಭಿಸಿದೆ. ಸುಮಾರು 94,000 ಟನ್‌ಗಳಷ್ಟು LPG ಹೊತ್ತ ಎರಡು ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿವೆ.
ಪೆಟ್ರೋಲಿಯಂ ಸಚಿವಾಲಯದ ಮಾಹಿತಿ ಪ್ರಕಾರ, ಈ ಎರಡು ಹಡಗುಗಳು ಈಗ ಭಾರತದ ತೀರಗಳತ್ತ ಸಾಗುತ್ತಿದ್ದು, ಶೀಘ್ರದಲ್ಲೇ ದೇಶಕ್ಕೆ ತಲುಪಲಿವೆ.
BW TYR ಎಂಬ ಟ್ಯಾಂಕರ್ ಮುಂಬಯಿ ಬಂದರು ಕಡೆಗೆ ಪ್ರಯಾಣಿಸುತ್ತಿದ್ದು, ನಾಳೆಯೊಳಗೆ ಬಂದರಿಗೆ ತಲುಪುವ ನಿರೀಕ್ಷೆಯಿದೆ. ಇನ್ನೊಂದು BW ELM ಟ್ಯಾಂಕರ್ ಏಪ್ರಿಲ್ 1ರಂದು ನವ ಮಂಗಳೂರು ಬಂದರಿಗೆ ತಲುಪಲಿದೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆ ದೇಶದ ಇಂಧನ ಸರಬರಾಜಿನ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿದ್ದ ಆತಂಕದ ನಡುವೆ ಇದು ಸ್ವಲ್ಪ ಮಟ್ಟಿನ ನಿರಾಳತೆ ತಂದಿದೆ.







