ರಿಷಿ ಸುನಕ್ ಸಲಹೆ ಸ್ವೀಕರಿಸಿದ್ದರೆ ಉಳಿಯುತ್ತಿತ್ತು ಲಿಜ್ ಟ್ರಸ್ ಕುರ್ಚಿ…
ಬ್ರಿಟನ್ ಪ್ರಧಾನಿ ಹುದ್ದೆಯಿಂದ ಲಿಜ್ ಟ್ರಸ್ ನಿರ್ಗಮಿಸಿದ ನಂತರ ಈಗ ಮತ್ತೊಮ್ಮೆ ಭಾರತೀಯ ಮೂಲದ ರಿಷಿ ಸುನಕ್ ಅವರ ಹೆಸರು ಮುಂಚೂಣಿಗೆ ಬಂದಿದೆ. ಬ್ರಿಟನ್ನಲ್ಲಿ ನಡೆಸಿದ ಜನ ಸಮೀಕ್ಷೆಯಲ್ಲಿ ರಿಷಿ ಸುನಕ್ ಹೆಸರು ಮುಂಚೂಣಿಯಲ್ಲಿದೆ. ಈ ನಡುವೆ ರಜೆ ಮುಗಿಸಿ ವಿದೇಶದಿಂದ ಬಂದಿರುವ ಮಾಜಿ ಪ್ರಧಾನಿ ಬೋರಿಸ್ ಜಾನ್ಸ್ ಕೂಡ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ.
ಇದಕ್ಕೂ ಮೊದಲು ಬ್ರಿಟನ್ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ ಮತ್ತು ರಿಷಿ ಸುನಕ್ ನಡುವೆ ಚುನಾವಣೆ ನಡೆದಿತ್ತು. ರಿಷಿ ಸುನಕ್ ಆರಂಭಿಕ ಹಂತಗಳಲ್ಲಿ ಮುಂಚೂಣಿಯಲ್ಲಿದ್ದರೂ ಲಿಜ್ ಟ್ರಸ್ ವಾಕ್ಚಾತುರ್ಯದ ಮುಂದೆ ಸೋಲೊಪ್ಪಿಕೊಂಡಿದ್ದರು. ಲಿಜ್ ಟ್ರಸ್ ಗೆ ಅಧಿಕಾರ ಒಲಿದು ಬಂದಿತ್ತಾದರೂ ಕೇವಲ 45 ದಿನಗಳಲ್ಲಿ ಸರ್ಕಾರ ಪತನಾವಾಯಿತು.
ಚುನಾವಣಾ ಸಮಯದಲ್ಲಿ ಲಿಜ್ ಟ್ರಸ್ ಗೆ ನೀಡಿದ್ದ ಸಲಹೆಯಿಂದ ರಿಷಿ ಸುನಕ್ ಅವರ ಸಾಮರ್ಥ್ಯ ಮತ್ತು ದೂರ ದೃಷ್ಟಿಯನ್ನು ಈಗ ಅಳೆಯುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಟ್ರಸ್ ಗೆಲ್ಲಲು ಸಾರ್ವಜನಿಕರಿಗೆ ತೆರಿಗೆ ಕಡಿತ ಸೇರಿದಂತೆ ಹಲವು ಲಾಭದಾಯಕ ಭರವಸೆಗಳನ್ನು ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿ “ಇಂತಹ ಭರವಸೆಗಳು ಯಶಸ್ವಿಯಾಗುವುದಿಲ್ಲ ಮತ್ತು ಯುಕೆ ಆರ್ಥಿಕತೆಯನ್ನ ಅವನತಿಗೆ ಕೊಂಡೊಯ್ಯುತ್ತವೆ ಎಂದು ರಿಷಿ ಸುನಕ್ ಅವರಿಗೆ ಸಲಹೆ ನೀಡಿದ್ದರು. ಇಡೀ ವಿಶ್ವದಲ್ಲಿ ಆರ್ಥಿಕ ಹಿಂಜರಿತದ ಕಾಲವಿದ್ದು, ತೆರಿಗೆ ಕಡಿತದ ಬದಲು ಕಟ್ಟುನಿಟ್ಟಿನ ಅಗತ್ಯವಿದೆ ಎಂದು ಹೇಳಿದ್ದರು.
ಆಗ ರಿಷಿ ಸುನಕ್ ಅವರನ್ನ ಬೆಂಬಲಿಸದಿದ್ದಕ್ಕೆ ಟೋರಿ ಸಂಸದು ಈಗ ವಿಷಾದಿಸುತ್ತಿದ್ದಾರೆ. ಒಪಿನಿಯಮ್‌ನ ಸಮೀಕ್ಷೆಯ ಪ್ರಕಾರ, ಯುಕೆ ಮತದಾರರು ರಿಷಿ ಸುನಕ್ ಅವರನ್ನು ಮುಂದಿನ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ. ಈ ಸಮೀಕ್ಷೆಯಲ್ಲಿ, 44% ಜನರು ಸುನಕ್ ಅನ್ನು ಆಯ್ಕೆ ಮಾಡಿದರು ಮತ್ತು 31% ಜನರು ಜಾನ್ಸನ್ ಪರವಾಗಿ ಮತ ಹಾಕಿದರು.
UK PM: If Liz Truss had accepted Rishi Sunak’s advice, the chair would have been saved