ಕೇಂದ್ರ ಬಜೆಟ್ 2021 | ಕೃಷಿಕರ ಆದಾಯ ದ್ವಿಗುಣ, ಭತ್ತ ಬೆಳೆಗಾರರಿಗೆ 1 ಲಕ್ಷ 72 ಸಾವಿರ ಕೋಟಿ
ನವದೆಹಲಿ : ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಮಿಕರಿಗೆ ಯೋಜನೆ, ಕೃಷಿಕರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದಿಂದಲೇ ಗೋಧಿ ಖರೀದಿಗೆ ಮುಂದಾಗಲಿದ್ದು, ಭತ್ತ ಬೆಳೆಗಾರರಿಗೆ 1 ಲಕ್ಷ 72 ಸಾವಿರ ಕೋಟಿ ಅನುದಾನ. ಧಾನ್ಯಗಳ ಖರೀದಿಗೆ ಹತ್ತೂವರೆ ಸಾವಿರ ಕೋಟಿ ಕೇಂದ್ರ ಬಜೆಟ್ ನಲ್ಲಿದ ಮೀಸಲಿಡಲಾಗಿದೆ.
ಈ ದಶಕದ ಮೊದಲ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡುತ್ತಿರುವ ಅವರು, ಕೃಷಿಕರ ಆದಾಯ ದ್ವಿಗುಣಗೊಳಿಸುವ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ರು. ಭತ್ತ ಬೆಳೆಗಾರರಿಗೆ 1 ಲಕ್ಷ 72 ಸಾವಿರ ಕೋಟಿ ಅನುದಾನ. ಧಾನ್ಯಗಳ ಖರೀದಿಗೆ ಹತ್ತೂವರೆ ಸಾವಿರ ಕೋಟಿ ಕೇಂದ್ರ ಬಜೆಟ್ ನಲ್ಲಿ ಮೀಸಲಿಟ್ಟಿದ್ದಾರೆ.
ಇದೇ ರೀತಿ ಬ್ಯಾಂಕ್ ಗಳಿಗೆ 20 ಸಾವಿರ ಕೋಟಿ ಬಂಡವಾಳ, ಬ್ಯಾಂಕ್ ಠೇವಣಿದಾರರ ವಿಮೆಗೆ ಮೊತ್ತ ಏರಿಕೆ ಮಾಡಲು ಕೇಂದ್ರ ಮುಂದಾಗಿದೆ. ಬಜೆಟ್ ನಲ್ಲಿ ಪಿಎಸ್ ಯುಗಳ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದ್ದು, ನವೀಕರಿಸಬಹುದಾದ ಇಂಧನಕ್ಕೆ 1.5ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ.
ವಿಮಾ ಕಂಪನಿಗಳಲ್ಲಿ ಈ ಮೊದಲು ಶೇಕಡಾ 49ರಷ್ಟಿದ್ದ ಎಫ್ ಡಿಐಯನ್ನು ಶೇ.74ರಷ್ಟು ಹೆಚ್ಚಳ ಮಾಡಲಾಗಿದೆ. ಹಾಗೇ
ಪೆಟ್ರೋಲಿಯಂ, ಗ್ಯಾಸ್ ಸರಬರಾಜು ಯೋಜನೆಗೆ ಆದ್ಯತೆ ನೀಡಲಾಗಿದೆ. ನೂರು ನಗರಗಳಲ್ಲಿ ಅನಿಲ ಪೂರೈಕೆ ಕೇಂದ್ರಗಳ ಸ್ಥಾಪನೆ ಮತ್ತು ಸೌರಶಕ್ತಿ ವಲಯಕ್ಕೆ 1 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಘೋಷಣೆ ಮಾಡಲಾಗಿದೆ.
ಆರು ವರ್ಷಗಳಲ್ಲಿ 2.8 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 7 ಯೋಜನೆಗಳು ಜಾರಿ ಮಾಡಲಾಗಿದೆ. ಇದಕ್ಕೆ 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಮೀಸಲಿಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









