100 ಕೋಟಿಗೂ ಹೆಚ್ಚು ಬಜೆಟ್ ನಲ್ಲಿ ತಯಾರಾಗುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ (upendra) ಅಭಿನಯದ ಕಬ್ಜ(kabja) ಚಿತ್ರದ ಬಗ್ಗೆ ಈಗಾಗಾಲೇ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ.
ಭಾರತದ ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಕಬ್ಜ ಥೀಮ್ ಪೋಸ್ಟರ್ ಇತ್ತೀಚೆಗೆ ಅಂದ್ರೆ ಉಪೇಂದ್ರ ಅವರ ಬರ್ತ್ ಡೇ ಗೆ ರಿಲೀಸ್ ಆಗಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು.. ವಾವ್ ಏನ್ ಪೋಸ್ಟರ್ ಗುರು ಅಂತ ಅಭಿಮಾನಿಗಳು ಜೈಕಾರ ಹಾಕಿದ್ರು.
ಆರ್ ಚಂದ್ರು ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರ 1945ರ ಕಾಲದ ಅಂಡರ್ವರ್ಲ್ಡ್ ಕಥೆಯನ್ನು ಈ ಹೊಂದಿದೆ.
ಈಗಾಗಲೇ ಫೋಟೋಶೂಟ್, ಮೋಷನ್ ಪೋಸ್ಟರ್ ರಿಲೀಸ್ ಆಗಿ ಟಾಕ್ ಆಪ್ ದಿ ಟೌನ್ ಆಗಿದೆ. ಈ ನಡುವೆ ಕಬ್ಜ ಚಿತ್ರತಂಡದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ.
ಕೆಜಿಎಫ್ ನ “ರಾಖಿ ಭಾಯ್” ಅಭಿಮಾನಿಗಳಿಗೆ ಗುಡ್ ನ್ಯೂಸ್ …!
ಬಾಹುಬಲಿಯ ಮಾದರಿ ಅನುಸರಿಸುತ್ತಿದೆ ಕಬ್ಜ
ಹೌದು ‘ಕಬ್ಜ’ ಸಿನಿಮಾ ಬಾಹುಬಲಿ ಮಾದರಿಯಲ್ಲಿ 2 ಭಾಗಗಳಲ್ಲಿ ತಯಾರಾಗಲಿದೆ ಎಂಬ ಮಾಹಿತಿಯನ್ನು ಇದೀಗ ಚಿತ್ರತಂಡ ರಿವೀಲ್ ಮಾಡಿದೆ.
ಈ ಸುದ್ದಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡ್ತಿದೆ. ಅಲ್ಲದೇ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಈ ಚಿತ್ರ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದ್ದು, ನಂತರ ಉಳಿದ ಭಾಷೆಗಳಿಗೂ ಡಬ್ ಆಗಲಿದೆ.
ಚಿತ್ರತಂಡದ ಈ ನಿರ್ಧಾರಕ್ಕೆ ಉಪೇಂದ್ರ ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ ಕೆಜಿಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಕಬ್ಜ ಚಿತ್ರಕ್ಕೂ ಸಂಗೀತ ನೀಡಲಿದ್ದು, ಅರ್ಜುನ್ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ.
ಇನ್ನುಳಿದಂತೆ ಚಿತ್ರದ ನಾಯಕಿಯ ಬಗ್ಗೆ ಸಿನೆಮಾ ಇನ್ನೂವರೆಗೂ ಮಾಹಿತಿ ಬಿಟ್ಟುಕೊಟ್ಟಿಲ್ಲ..
ಸದ್ಯ ರಾಜಕೀಯ ಹಾಗೂ ಸಿನಿಮಾರಂಗ ಎರಡರಲ್ಲೂ ಸಕ್ರಿಯವಾಗಿರುವ ಉಪೇಂದ್ರ ಅವರ ಕೈಯಲ್ಲಿ ಇನ್ನೂ ಸಾಲು ಸಾಲು ಸಿನೆಮಾಗಳಿವೆ. ಐಲವ್ ಯೂ ಸಿನಿಮಾದಲ್ಲಿ ಒಂದಾಗಿದ್ದ ಆರ್ ಚಂದ್ರ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಜೋಡಿ ಮತ್ತೆ ಕಬ್ಜ ಮೂಲಕ ಕಮಾಲ್ ಮಾಡಲು ಬರುತ್ತಿದ್ದು, ಅಭಿಮಾನಿಗಳು ಸಿನಿಮಾ ಬಗ್ಗೆ ಕುತೂಹಲರಾಗಿದ್ದಾರೆ.
ಮತ್ತೊಂದೆಡೆ ಈ ಹೈಬಜೆಟ್ ಸಿನಿಮಾದ ಬಗ್ಗೆ, ಹಾಗೂ ನಾಯಕಿಯ ಬಗ್ಗೆ ಮಾಹಿತಿಯನ್ನ ಚಿತ್ರತಂಡ ಗೌಪ್ಯವಾಗಿಟ್ಟಿರುವುದು ಸಿನಿರಸಿಕರು ಉಪ್ಪಿ ಅಭಿಮಾನಿಗಳ ಕುತೂಹಲವನ್ನ ಮತ್ತಷ್ಟು ಹೆಚ್ಚಿಸಿದೆ.
ಸದ್ಯ 100 ಕೋಟಿ ಬಂಡವಾಳದಲ್ಲಿ ಮೂಡಿಬರುತ್ತಿರುವ ಸಿನೆಮಾ ಸ್ಯಾಂಡಲ್ ವುಡ್ ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡ್ತಿದೆ. ಇದೀಗ 2 ಬಾಗದಲ್ಲಿ ಸಿನಿಮಾ ಮೂಡಿಬರುತ್ತಿರುವುದಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇನ್ನೂ ಇತ್ತೀಚೆಗೆ ಉಪ್ಪಿ ಅವರ ಹುಟ್ಟುಹಬ್ಬಕ್ಕೆ ಕಬ್ಜ ಟೀಂ ರಿಲೀಸ್ ಮಾಡಿದ್ದ ಥೀಂ ಪೋಸ್ಟರ್ ನಲ್ಲಿ ಉಪ್ಪಿ ಖಡಕ್ ಲುಕ್ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿತ್ತು. ಅಂಡರ್ ವರ್ಟ್ ಕಥೆ ಹೊಂದಿರುವ ಸಿನಿಮಾ ಥೀಮ್ ಪೋಸ್ಟರ್ ಗೆ ಉಪ್ಪಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ರು.
ಈ ಚಿತ್ರ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದ್ದು, ನಂತರ ಉಳಿದ ಭಾಷೆಗಳಿಗೂ ಡಬ್ ಆಗಲಿದೆ.