ಗ್ಲಾಮರಸ್ ಆಗಿ ಕಾಣಿಸಿಕೊಳ್ತಾ , ವಿಚಿತ್ರ ವರ್ತನೆಯಿಂದಲೇ ಸುದ್ದಿ ಯಾಗೋ ನಟಿಯರ ಪೈಕಿ ಒಬ್ಬರೆನಿಸಿಕೊಂಡಿರುವ BIGGBOSS ಹಿಂದಿಯ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಇದೀಗ ಮತ್ತೆ ಫೈರಿಂಗ್ ಹೇಳಿಕೆ ನೀಡಿ ಹಲ್ ಚಲ್ ಸೃಷ್ಟಿಸಿದ್ದಾರೆ.
ಹೌದು ಮೂಲತಃ ಮುಸ್ಲಿಂ ಯುವತಿ ಆಗಿರುವ ಉರ್ಫಿ ಜಾವೇದ್ ಅವರು ತಾವು ಯಾವುದೇ ಕಾರಣಕ್ಕೂ ಮುಸ್ಲಿಂ ಯುವಕನನ್ನು ವಿವಾಹವಾಗುವುದಿಲ್ಲ ಎಂದಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ಉರ್ಫಿ ಜಾವೇದ್, ನಾನು ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗನನ್ನು ವಿವಾಹವಾಗುವುದಿಲ್ಲ. ನನಗೆ ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲ. ನಾನು ಯಾವ ಧರ್ಮವನ್ನೂ ಸಹ ಪಾಲಿಸುವುದಿಲ್ಲ. ನಾನು ಧರ್ಮವನ್ನು ನೋಡಿಕೊಂಡು ಪ್ರೀತಿ ಮಾಡುವುದಿಲ್ಲ. ನಮಗೆ ಇಷ್ಟ ಬಂದವರೊಂದಿಗೆ ನಾವು ಮದುವೆ ಆಗುಬೇಕು ಅದೇ ಸರಿ ಎಂದಿದ್ದಾರೆ.
ಅಲ್ಲದೇ ನಾನು ಮುಸ್ಲಿಂ ಯುವತಿ. ಆದರೆ ನನ್ನ ಸಾಮಾಜಿಕ ಜಾಲತಾಣ ಪೋಸ್ಟ್ ಗಳಿಗೆ ಅತಿ ಹೆಚ್ಚು ದ್ವೇಷಭರಿತ ಕಮೆಂಟ್ ಗಳು ಬರುವುದು ಮುಸ್ಲಿಂ ಯುವಕರಿಂದ. ನಾನು ಇಸ್ಲಾಂ ಧರ್ಮಕ್ಕೆ ಕಪ್ಪು ಚುಕ್ಕೆ ಎಂದೆಲ್ಲ ನಿಂದಿಸುತ್ತಾರೆ. ಅವರು ಬೈಯ್ಯಲು ಕಾರಣ, ಮುಸ್ಲಿಂ ಯುವಕರಿಗೆ ತಮ್ಮ ಪತ್ನಿಯರು ತಾವು ಬಯಸಿದಂತೆಯೇ ಇರಬೇಕು, ವರ್ತಿಸಬೇಕು ಎಂಬ ಆಸೆ ಇರುತ್ತದೆ. ಇಡೀ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಮೇಲೆ ನಿಯಂತ್ರಣ ಹೇರಲು ಮುಸ್ಲಿಂ ಪುರುಷರು ಸದಾ ಯತ್ನಿಸುತ್ತಿರುತ್ತಾರೆ.
ಹಾಗಾಗಿಯೇ ನನಗೆ ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲ. ಇಸ್ಲಾಂ ಧರ್ಮೀಯಳಾಗಿ ಅವರು ನಿರೀಕ್ಷಿಸಿದಂತೆ ನಾನು ಇರಲ್ಲಾ ಎಂದಿದ್ದಾರೆ. ಅಲ್ಲದೇ ನಾನು ಚಿಕ್ಕವಳಾಗಿದ್ದಾಗ ಬಹಳ ಶಿಸ್ತಿನ ಜೀವನ ಮಾಡಿದ್ದೇನೆ. ನನ್ನ ತಂದೆ ಧರ್ಮಭಿರುಗಳಾಗಿದ್ದರು. ಮನೆಯಲ್ಲಿ ಹೆಣ್ಣುಮಕ್ಕಳ ಮೇಲೆ ನಿಯಂತ್ರಣಗಳನ್ನು, ನಿಯಮಗಳನ್ನು ಹೇರಿದ್ದರು. ಆದರೆ ನಾನು ಇಂಡಿಪೆಂಡೆಂಟ್ ಆದ ಮೇಲೆ ನನ್ನ ಇಷ್ಟದಂತೆ ನಾನು ಬದುಕುತ್ತಿದ್ದೇನೆ. ನನಗೆ ಮತ್ತೆ ನನ್ನ ಹಳೆಯ ಜೀವನಕ್ಕೆ ಹೋಗಲು ಇಷ್ಟವಿಲ್ಲ ಎಂದು ಕೂಡ ಹಳೆಯ ವಿಡಿಯೋವೊಂದ್ರಲ್ಲಿ ಉರ್ಫಿ ಹೇಳಿಕೊಂಡಿದ್ರು..







